ಪ್ರವಚನಗಳಿಂದ ಮಾನಸಿಕ ನೆಮ್ಮದಿ

0
329

ಬಳ್ಳಾರಿ/ಹೊಸಪೇಟೆತಾಲೂಕಿನ ಮರಿಯಮ್ಮನ ಹಳ್ಳಿ ಪುರಾಣ, ಪ್ರವಚನಗಳು ಆಲಿಸುವುದರಿಂದ ಮಾನಸಿಕ ಮತ್ತು ಬೌದ್ಧಿಕವಾಗಿ ವಿಕಾಸ ಹೊಂದಬಹುದು ಎಂದು ಹ.ಬೊ.ಹಳ್ಳಿ ಶಾಸಕ ಭೀಮನಾಯ್ಕ ಹೇಳಿದು ಅವರು ಪಟ್ಟಣದ ಅರಳಿಹಳ್ಳಿ ಗುರುಪಾದದೇವರಮಠ ದಲ್ಲಿ ಸೋಮವಾರ, ಗುರುಸಿದ್ದೇಶ್ವರ ಶಿವಾಚಾರ್ಯಸ್ವಾಮಿಗಳ 49 ನೆ ಪುಣ್ಯಸ್ಮರಣೆ, ಶ್ರೀ ರೇಣುಕಾ ಚಾರ್ಯರ ಜಯಂತ್ಯೊತ್ಸವ, ಶ್ರೀ ಹಾನಗಲ್ ಕುಮಾರಸ್ವಾಮಿ ಗಳ150 ನೆ ಜಯಂತ್ಯೋತ್ಸವ ಮತ್ತು ಆದರ್ಶವಿವಾಹ ಕಾರ್ಯಕ್ರಮ ಗಳ ನಿಮಿತ್ ಆಯೋಜಿಸಿದ್ದ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಹಾಪುರಾಣ ಕಾರ್ಯಕ್ರಮ ಕ್ಕೆ ಚಾಲನೆನೀಡಿ ಮಾತನಾಡಿದರು. ಸಾಧು ಸಂತರ , ದಾರ್ಶನಿಕ ರ , ಶಿವಶರಣ, ಶರಣೆಯರ, ಯೊಗಿಗಳ, ಜೀವನದಾರ್ಶಗಳನ್ನು ಪುರಾಣಗಳಮೂಲಕ ಆಲಿಸಿ ನಮ್ಮ ಲ್ಲಿನ ತಾಮಸಗುಣಗಳನ್ನು ಹೋಗಲಾಡಿಸಿಕೊಳ್ಳಲು ದಾರಿದೀಪಗಳಾಗಿವೆ ಎಂದರು. ಶ್ರೀ ಮಠದ ಪೀಠಾದಿಪತಿ ಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿ ಕಾರ್ಯಕ್ರಮ ದ ಸಾನಿದ್ಯವಹಿಸಿದ್ದರು. ಹ.ಬೊ.ಹಳ್ಳಿಯ ಹಾಲಶಂಕರಸ್ವಾಮಿ, ನಂದಿಪುರದ ಮಹೇಶ್ವರ ಸ್ವಾಮಿ, ಎ.ಪಿ.ಎಂ.ಸಿ. ನಿರ್ದೇಶಕ ಕುರಿಶಿವಮೂರ್ತಿ, ಕೇಶವ ರೆಡ್ಡಿ, ಹ.ಬೊ.ಹಳ್ಳಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೊಟ್ರೇಶ, ಹ.ಬೊ.ಹಳ್ಳಿ ಪುರಸಭೆ ಅದ್ಯಕ್ಷ ಜೋಗಿಹನುಮಂತ , ಬಿ.ಎಂ.ಎಸ್.ಪ್ರಕಾಶ, ಪರ್ವಚನಕಾರ ಹೆಚ್.ಎಮ್.ರೇವಯ್ಯಶಾಸ್ತ್ರಿ, ಇತರ ರಿದ್ದರು .

LEAVE A REPLY

Please enter your comment!
Please enter your name here