ಸಪಾಯಿಕರ್ಮಚಾರಿಗಳಿಗೆ ಸೌಲಭ್ಯ ದೊರೆಯುವಂತಾಗಲಿ

0
126

ಕೋಲಾರ : ಕರ್ನಾಟಕ ರಾಜ್ಯ ಸಪಾಯಿ ಕರ್ಮಚಾರಿಗಳ ಆಯೋಗ ಇಂದು ಕೋಲಾರಕ್ಕೆ ಭೇಟಿ ನೀಡಿ ಜಿಲ್ಲಾಪಂಚಾಯತಿಯ ಸಭಾಂಗಣದಲ್ಲಿ ಸಭೆ ನಡೆಸಿ ಎಲ್ಲ ಸಫಾಯಿಕರ್ಮಚಾರಿಗಳ ಆರೋಗ್ಯ ,ಕೆಲಸ ನಿರ್ವಹಣೆ, ವಸತಿ, ವೇತನ, ಕೆಲಸದಲ್ಲಿ ಪರಿಕರಗಳ ಬಳಕೆ ಬಗ್ಗೆ ಪರಿಶೀಲನೆ. ಪ್ರತಿಯೊಬ್ಬ ಸಪಾಯಿಕರ್ಮಚಾರಿಯೂ ನಮ್ಮ ವಾತಾವರಣವನ್ನು ಸ್ವಚ್ಛಗೊಳಿಸುತ್ತಿದ್ದು,ಅವರಿಗೆ ಮೂಲಭೂತ ಸೌಲಭ್ಯಗಳು ಸಿಗುವಂತಾಗಬೇಕು.ಗುತ್ತಿಗೆದಾರರಾಗಲಿ,ಖಾಯಂ ನೌಕರರಾಗಲಿ,ಗುತ್ತಿಗೆ ಆದಾರದ ನೌಕರರಾಗಲಿ ಎಲ್ಲರಿಗು ಬೆಳಗಿನ ಉಪಹಾರ,ಕನಿಷ್ಠ ವೇತನ,ಇ.ಎಸ್.ಐ. ಮತ್ತು ಪಿ.ಎಫ್ ಕಡ್ಡಾಯವಾಗಿ ನೀಡಬೇಕು. ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಬೇಕು.ಸ್ವಚ್ಛ ಮಾಡುವ ಸಂದರ್ಭದಲ್ಲಿ ತಮ್ಮ ಅರೋಗ್ಯ ರಕ್ಷಣೆಗಾಗಿ ರಕ್ಷಕಗಳು, ಪರಿಕರಗಳು ಕಡ್ಡಾಯವಾಗಿ ನೀಡಬೇಕು.ಅವರ ವೇತನ ಬಾಕಿ ಉಳಿಸಿಕೊಂಡಿದ್ದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ಧಾಖಲಿಸಿ ನ್ಯಾಯ ಒದಗಿಸಬೇಕು. ಖಾಸಗಿ ಶಾಲೆಗಳಲ್ಲಿ ಯಾವುದೇ ಪರೀಕ್ಷೆ ನಡೆಸದೆ ಅವರ ಮಕ್ಕಳಿಗೆ ನೋಂದಣಿ ಮಾಡಿಕೊಳ್ಳಬೇಕು ತಪ್ಪಿದ್ದಲ್ಲಿ ಜಿಲ್ಲಾ ಸಮಾಜಕಲ್ಯಾಣಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಜರುಗಿಸಿ ಅಭಿವೃದ್ಧಿಗೆ ಸಹಕರಿಸಬೇಕು.ವಸತಿ ಇಲ್ಲದವರಿಗೆ ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ ಮನೆ ನಿರ್ಮಾಣ ಮಾಡಿಕೊಡಬೇಕು.ಮನೆಗಳು ಸರಿಯಾದ ನಿರ್ವಹಣೆ ಇಲ್ಲದಿದ್ದರೇ ಅದರ ದುರಸ್ತಿ ಕಾರ್ಯ ಮಾಡಿಕೊಡಬೇಕು.ಒಟ್ಟಾರೆಯಲ್ಲಿ ಸಪಾಯಿಕರ್ಮಚಾರಿಗಳು ಮುಖ್ಯವೇದಿಕೆಗೆ ಬಂದು ಉತ್ತಮರಾಗಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಪಾಯಿಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ವೆಂಕಟೇಶ್,ಕಾರ್ಯದರ್ಶಿಗಳಾದ ಎಚ್.ನಟರಾಜ್, ಸದಸ್ಯರಾದ ಗೋಕುಲ್ನಾರಾಯಣಸ್ವಾಮಿ, ಮೀನಾಕ್ಷಮ್ಮ, ಜಿಲ್ಲಾಧಿಕಾರಿಗಳಾದ ತ್ರಿಲೋಕ ಚಂದ್ರ ,ಸಿಇ.ಓ.ಕಾವೇರಿ,ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here