ಪೊಲೀಸ್ ರಕ್ಷಣೆ ಬೇಡಿದ ಯುವಜೋಡಿ

0
180

ಕೋಲಾರ: ಅಂತರ್ ಜಾತಿ ವಿವಾಹಕ್ಕೆ ಪೋಷಕರ ವಿರೋಧ,ಪೋಷಕರ ವಿರೋಧದದ ನಡುವೆ ಮದುವೆಗೆ ಮುಂದು,ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮದುವೆಯಾದ ಯುವಜೋಡಿ

ತಮ್ಮಗೆ ರಕ್ಷಣೆ ನೀಡಿ,ನಮ್ಮನ್ನು ಬದುಕಲುಬಿಡಿ ಎಂದು ಡಿವೈಎಸ್ಪಿ ಗೆ ವಾಟ್ಸ್ ಆಫ್.ಕೋಲಾರ ಜಿಲ್ಲೆಯ ಬೇತಮಂಗಳ ಠಾಣೆಯಲ್ಲಿನ ಪ್ರಕರಣ.

ಅಂತರ್ ಜಾತಿ ವಿವಾಹಕ್ಕೆ ಎರಡು ಕುಟುಂಬಗಳ ಪೋಷಕರಿಂದ ತೀವ್ರಾ ವಿರೋಧ ವ್ಯಕ್ತವಾದ ಹಿನ್ನಲೆ ಯುವ ಜೋಡಿ ತಿರುಪತಿ ತಿಮ್ಮಪ್ಪನ ಸನ್ನಿದಾನದಲ್ಲಿ ಮದುವೆಯಾಗಿ,ಡಿವೈಎಸ್ಪಿ ಗೆ ವಾಟ್ಸ್ ಆಫ್ ಮೂಲಕ ತಮ್ಮಗೆ ರಕ್ಷಣೆ ನೀಡಿ,ನಮ್ಮನ್ನು ಬದುಕಲುಬಿಡಿ ಎಂಬ ಮನವಿಯ ದೃಶ್ಯವನ್ನು ರವಾನಿದ್ದಾರೆ . ಈ ಯುವ ಜೋಡಿ ಮೇಲೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಬೇತಮಂಗಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏಳು ವರ್ಷಗಳಿಂದ ಬೇತಮಂಗಳ ನಿವಾಸಿ ರಾಜು ಪಕ್ಕದ ಊರಿನ ಕೆಂಬೊಡಿ ಗ್ರಾಮದ ನಿಸರ್ಗ ಎಂಬ ಯುವತಿಯ ಜೊತೆ ಪ್ರೇಮಾಂಕುರವಾಗಿ ಪರಸ್ಪರ ಒಬ್ಬರಿಗೊಬ್ಬರು ಪ್ರೀತಿ ಮಾಡಿಕೊಂಡಿದ್ದರು.ಇಬ್ಬರೂ ಕದ್ದು ಮುಚ್ಚಿ ಮಾಡುತ್ತಿರುವ ಪ್ರೀತಿ ಪೋಷಕರಿಗೆ ತಿಳಿದು ಠಾಣೆಯ ಮೇಟ್ಟಿಲೇರಿದರು.ಪ್ರಾಣ ಬೆದರಿಕೆ ಹಾಕಿ ಪ್ರಭಾವಿ ವ್ಯಕ್ತಿಗಳಿಂದ ಪೊಲೀಸರ ಮೇಲೆ ಒತ್ತಡ ಹಾಕಿ ಇಬ್ಬರನ್ನು ದೂರಮಾಡಲು ಯೊಚನೆ ಮಾಡಿದ್ದರು.ಆದ್ರೆ ಈ ಯುವ ಜೋಡಿ ಮಾತ್ರ ಪೋಷಕರಿಗೆ ಅಂಜಿ ಕುಳಿತುಕೊಳ್ಳದೆ ತಾವೇ ನೇರ ತಿರುಪತಿ ತಿಮ್ಮಪ್ಪನ ಸನ್ನಿದಾನದಲ್ಲಿ ಮದುವೆಯಾಗಿ ಬಂದಿದ್ದಾರೆ. ಎರಡು ಕಡೆ ವಿರೋಧ ವ್ಯಕ್ತವಾದ ಹಿನ್ನಲೆ ಪೊಲೀಸರು ಸಹ ಪೋಷಕರಿಗೆ ಸಹಾಯ ಮಾಡುತ್ತಾರೆ ಎಂದು ಕೆಜಿಎಫ್ ನ ಡಿವೈಎಸ್ಪಿ ಪುಟ್ಟಮಾದಯ್ಯರಿಗೆ ಮೊಬೆಲ್ ಗೆ ವಾಟ್ಸ್ ಆಫ್ ಮೂಲಕ ತಮ್ಮಗೆ ರಕ್ಷಣೆ ನೀಡಿ,ನಮ್ಮನ್ನು ಬದುಕಲುಬಿಡಿ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಈಗ ಇಬ್ಬರ ಭವಿಷ್ಯ ಡಿವೈಎಸ್ಪಿ ಅಂಗಳದಲ್ಲಿದೆ.ಪೊಲೀಸರು ಎಷ್ಟರ ಮಟ್ಟಿಗೆ ಈ ಜೋಡಿಗೆ ನ್ಯಾಯ ಒದಗಿಸಿ ರಕ್ಷಣೆ ಕೊಡುತ್ತಾರೆ ಎಂದು ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here