ಬೀಯರ್ ಬಾಟಲ್ ನಿಂದ ಹೊಡೆದು ಕೊಲೆ

0
160

ಬಳ್ಳಾರಿ: ಪಾರ್ಟಿಗೆ ಎಂದು ಹೋಗಿದ್ದ ಸ್ನೇಹಿತರಲ್ಲಿ ಒಬ್ಬನನ್ನು ಬೀಯರ್ ಬಾಟಲ್ ನಿಂದ ಹೊಡೆದು ಬೈಕ್ ಜತೆಗೆ ಒಬ್ಬ ವ್ಯಕ್ತಿಯನ್ನು ಸುಟ್ಟು ಹಾಕಿ ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ಬಳ್ಳಾರಿಯಲ್ಲಿ ನಡೆದಿದೆ.
ನಗರದ ಹೊರವಲಯದ ಸಿರುಗುಪ್ಪ ರಸ್ತೆಯಲ್ಲಿ ಅವಂಬಾವಿ ಪ್ರದೇಶದ ಜಮೀನವೊಂದರಲ್ಲಿ ಈ ಕೃತ್ಯ ನಡೆದಿದೆ.ಪಾನಮತ್ತರಾಗಿದ್ದ ಸ್ನೇಹಿತರ ನಡುವೆ ಹಣಕಾಸಿನ ವಿಚಾರವಾಗಿ ಜಗಳ ನಡೆದು ವೆಂಕಟರಾಮರೆಡ್ಡಿ ಎನ್ನುವ ವ್ಯಕ್ತಿಯನ್ನ ಬೀಯರ್ ಬಾಟಲ್ ನಿಂದ ಹೊಡೆದಿದ್ದಾರೆ, ಸ್ಥಳದಲ್ಲೆ ಕುಸಿದು ಬಿದ್ದ ವ್ಯಕ್ತಿಯನ್ನ ಬೈಕ್ ಮೇಲೆ ಬಿಟ್ಟು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಕೊಲೆಯಾದ ಸ್ಥಳದಲ್ಲಿ ಬೀಯರ್ ಬಾಟಲ್ ಗಳ ಪುಡಿಯಾದ ಗ್ಲಾಸ್ ಗಳು, ಸುಟ್ಟು ಕರಕಲಾದ ವ್ಯಕ್ತಿಯ ಶವ ಮತ್ತು ಸುಟ್ಟು ಹೋದ ಬೈಕ್ ಪತ್ತೆಯಾಗಿದ್ದು ಕೊಲೆಮಾಡಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಳ್ಳಾರಿ ಎಎಸ್ಪಿ ಝಾಂಡೇಕರ್,ಗ್ರಾಮೀಣಠಾಣೆ ಪಿಎಸ್ಐ ವಸಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗಾಗಿ ಜಾಲಾಬೀಸಿದ್ದಾರೆ.

LEAVE A REPLY

Please enter your comment!
Please enter your name here