ಅಕ್ರಮ ಗಣಿಗಾರಿಕೆಯ ಬೆನ್ನು ಬಿದ್ದ (ಎಸ್‌ಐಟಿ)

0
325

ಬಳ್ಳಾರಿ /ಹೊಸಪೇಟೆ: ಅಕ್ರಮ ಗಣಿಗಾರಿಕೆಯ ಬೆನ್ನು ಬಿದ್ದಿರುವ ಲೋಕಾಯುಕ್ತದ ವಿಶೇಷ ತನಿಖಾ ದಳ (ಎಸ್‌ಐಟಿ) ತಂಡ ನಗರದಲ್ಲಿ ಬೀಡು ಬಿಟ್ಟಿದ್ದು, ಮಹತ್ವದ ದಾಖಲೆಗಳನ್ನು ಕಲೆ ಹಾಕುತ್ತಿದೆ.

ಜಿಲ್ಲೆಯ ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆಯ ಅದಿರು ಗಣಿಗಳಿಂದ ಅಕ್ರಮವಾಗಿ ಸಾಗಾಟ ಮಾಡಲಾದ (೫೦ ಸಾವಿರ ಮೆಟ್ರಿಕ್ ಟನ್ ಒಳಗಿನ) ಪ್ರಕರಣಗಳ ಬೆನ್ನು ಬಿದ್ದಿರುವ ಎಸ್‌ಐಟಿ ತಂಡ ನಗರದಲ್ಲಿ ರಹಸ್ಯ ಕಾರ್ಯಾಚರಣೆ ಕೈಗೊಂಡಿದೆ. ಗಣಿ ಉದ್ಯಮಿಗಳು ಹಾಗೂ ಅದಿರು ರಫ್ತುದಾರರಿಂದ ದಾಖಲೆಗಳನ್ನು ಸಂಗ್ರಹಿಸುತ್ತಿದೆ. ಎಸ್‌ಐಟಿ ಇನ್ಸ್‌ಪೆಕ್ಟರ್ ಯೋಗೇಂದ್ರ ನೇತೃತ್ವದಲ್ಲಿ ಆರು ಜನರ ತಂಡ ಬೆಂಗಳೂರಿನಿಂದ ಆಗಮಿಸಿದ್ದು, ನಗರದ ಅಮರಾವತಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದು, ಗೌಪ್ಯ ಕಾರ್ಯಾಚರಣೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here