ಬಿಜೆಪಿ ಮಿಷನ್ ೧೫೦ರಲ್ಲಿ ಬಾಗೇಪಲ್ಲಿ ಕ್ಷೇತ್ರವೂ ಒಂದು!

0
258

ಗುಡಿಬಂಡೆ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾರೆಂದು ಇನ್ನೂ ನಿಗದಿಪಡಿಸಿಲ್ಲ. ಅಭ್ಯರ್ಥಿ ಆಯ್ಕೆಯು ಬೆಜೆಪಿ ಹೈ ಕಮಾಂಡ್ ಗೆ ಬಿಟ್ಟದ್ದು ಎಂದು ಮಾಜಿ ಸಚಿವ ಜನಾರ್ಧನ್ ರೆಡ್ಡಿ ತಿಳಿಸಿದರು.

ಪಟ್ಟಣದ ಸಂತೆ ಬೀದಿಯ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಯದಲ್ಲಿ ಬುಧವಾರ ಹುಣ್ಣಿಮೆ ಪೂಜೆ ಮಾಡಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ೩೦೦ ವರ್ಷಗಳಿಗೆ ಒಮ್ಮೆ ಬರುವ ವಿಶೇಷ ಹುಣ್ಣಿಮೆಯಾಗಿದ್ದು ನಮ್ಮ ಮನೆ ದೇವರು ಪರಮೇಶ್ವರ, ನನಗೆ ಇಷ್ಟ ದೇವರು ವೆಂಕಟರಮಣವಾದ್ದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಚೋಳರಕಾಲದ ಗುಡಿಬಂಡೆ ವೆಂಕಟರಮಣ ದೇವಾಯ ಮತ್ತು ಬಾಗೇಪಲ್ಲಿ ಗಡಿದಂ ದೇವಾಯದಲ್ಲಿ ರಥೋತ್ಸವ ಮತ್ತು ವಿಶೇಷ ಪೂಜೆ ಮಾಡಿಸಲು ಬಂದಿದ್ದೇನೆ ವಿನಃ ಯಾವುದೇ ಚುನಾವಣಾ ಉದ್ದೇಶದಿಂದ ಬಂದಿಲ್ಲ. ಮುಂದಿನ ದಿನಗಳಲ್ಲಿ ಬಾಗೇಪಲ್ಲಿಗೆ ಬರುತ್ತೇನೆ ಚುನಾವಣೆ ಬಗ್ಗೆ ಮಾತನಾಡುತ್ತೇನೆ ಎಂದರು.

ಸಾಯಿಕುಮಾರ್ ರವರ ತಾಯಿಯ ತವರು ಮನೆಯಾಗಿದ್ದು ಇವರ ಪೂರ್ವಿಕರು ಸಹ ಇದ್ದಾರೆ. ಇವರಿಗೆ ಬಾಗೇಪಲ್ಲಿ ಕ್ಷೇತ್ರದಲ್ಲಿ ಒಳ್ಳೆಯ ಒಡೆನಾಟವಿದೆ. ಕಳೆದ ೨೦೦೮ರ ಚುನಾವಣೆಯಲ್ಲಿ ಸ್ವಲ್ಪ ಅಂತರದಿಂದ ಸೋತಿದ್ದಾರೆ. ಬಾಗೇಪಲ್ಲಿ ಕ್ಷೇತ್ರದಲ್ಲಿ ಗೆಲ್ಲುವ ಸ್ವ ಸ್ವಾಮಥ್ರ್ಯವಿದ್ದರಿಗೆ ಮಾತ್ರ ಟಿಕೆಟ್ ನೀಡಲು ಪಕ್ಷ ತೀರ್ಮಾನಿಸಿದೆ ಎಂದರು.

ಚಿತ್ರ ನಟ ಸಾಯಿಕುಮಾರ್ ಮಾತನಾಡಿ, ೨೦೦೮ರಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸಿದಾಗ ಅಭೂತಪೂರ್ವ ಸ್ವಾಗತ ದೊರೆಯಿತು. ಆದರೆ ಕೂದಲಳತೆಯ ಅಂತರದಲ್ಲಿ ನಾನು ಪರಾಜಿತನಾದರೂ ಸಹ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸಂಬಂಧ ನನ್ನನ್ನು ಬಿಟ್ಟಿಲ್ಲ. ಆದರೆ ಹಲವಾರು ಕಾರಣಗಳಿಂದ ರಾಜಕಾರಣದಿಂದ ದೂರವಾಗಿದ್ದೆ. ಆಗ ನನಗೆ ರಾಜಕಾರಣ ಒಂದೇ ಇರಲಿಲ್ಲ. ಜೊತೆಗೆ ನನ್ನ ಸಿನಿ ಬದುಕು ನನ್ನ ಜೊತೆಗೆ ಇತ್ತು. ಈಗ ಹಲವು ಜವಾಬ್ದಾರಿಗಳನ್ನು ಕಳಚಿಕೊಂಡು, ಎಲ್ಲವನ್ನೂ ಬಗೆಹರಿಸಕೊಂಡು ಕ್ಷೇತ್ರದ ಸಕ್ರಿಯ ರಾಜಕಾರಣದಲ್ಲಿ ಮುಂದುವರೆದು ಅಭಿವೃದ್ಧಿಗೆ ಶ್ರಮಿಸುತ್ತೇನೆ. ಕರ್ನಾಟಕದಾದ್ಯಂತ ಬಿಜೆಪಿ ಪಕ್ಷ ೧೫೦ ಕ್ಕಿಂತ ಹೆಚ್ಚಿನ ಸೀಟು ಗಳಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಬಾಗೇಪಲ್ಲಿಯಲ್ಲಿಯೂ ಸಹ ಬಿಜೆಪಿ ವಿಜಯಪತಾಕೆ ಹಾರಲಿದೆ. ಹಾಗಾಗಿ ಎಲ್ಲಾ ಕಾರ್ಯಕರ್ತರು ತಳಮಟ್ಟದಿಂದ ಸಂಘಟಿತರಾಗಬೇಕು ಮತ್ತು ಈಗಿನಿಂದಲೇ ಕಾರ್ಯಪೃವೃತ್ತರಾಗಿ ಸೈನಿಕರಂತೆ ಕೆಲಸಮಾಡಬೇಕೆಂದರು.

ಈ ವೇಳೆ ಸಾಯಿಕುಮಾರ್ ಸಹೋದರ ಅಯ್ಯಪ್ಪ, ಬಿಜೆಪಿ ಮುಖಂಡರಾದ ಜಿ.ಎಸ್.ನಾಗರಾಜ್, ತಿಮ್ಮಾರೆಡ್ಡಿ, ಗೋಪಿ, ತಿಮ್ಮಾರೆಡ್ಡಿ, ಮಂಜುನಾಥ್, ಪದ್ಮಮುದ್ದುರಾಜ್, ಈಶ್ವರ್, ನಾಗಭೂಷಣ್ ರೆಡ್ಡಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರವಿನಾರಾಯಣರೆಡ್ಡಿ, ನರಸಿಂಹಮೂರ್ತಿ, ನಂಜೇಶ್, ನವೀನ್, ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ತಾಲ್ಲೂಕುಗಳ ಬಿಜೆಪಿ ಪಕ್ಷದ ಕಾರ್ಯಕರ್ತರು ಇದ್ದರು.

LEAVE A REPLY

Please enter your comment!
Please enter your name here