ಗೌತಮ ಬುದ್ಧ 2561ನೇ ಬುದ್ಧಪೂರ್ಣಿಮೆಯನ್ನು

0
168

ಬೆಂಗಳೂರು/ಮಹದೇವಪುರ:- ಬೌದ್ಧ ಧರ್ಮ ಸಂಸ್ಥಾಪಕ ಶಾಂತಿ ಧೂತ ಬುದ್ಧನ ಗೌತಮ ಬುದ್ಧ 2561ನೇ ವರ್ಷದ ಬುದ್ಧಪೂರ್ಣಿಮೆಯನ್ನು ಮಹದೇವಪುರ ಕ್ಷೇತ್ರದ ದೊಡ್ಡಬನಹಳ್ಳಿಯಲ್ಲಿ ನಿರ್ಮಿಸಿರುವ ಬುದ್ಧ ವಿಹಾರದಲ್ಲಿ ವಿಜೃಂಭನೆಯಿಂದ ಆಚರಿಸಲಾಯಿತು. ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಬುದ್ಧನ ಜನ್ಮದಿನವನ್ನು ಬುದ್ಧ ಭೂಮಿ ಪ್ರತಿಷ್ಟಾನ ಟ್ರಸ್ಟ್ವತಿಯಿಂದ ಹಮ್ಮಿಕೊಂಡಿದ್ದು, ದೊಡ್ಡಬನಹಳ್ಳಿಯಲ್ಲಿನ ಬುದ್ಧ ವಿಹಾರದಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸುವ ಮೂಲಕ ಆಚರಿಸಲಾಯಿತು. ಬುದ್ಧ ರ ಪಂಚಶೀಲ ತತ್ವಗಳಾದ ಕಳ್ಳತನ ಮಾಡದಿರುವುದು, ಅಹಿಂಸೆ ಪಾಲಿಸುವುದು, ಪರ ಸ್ತ್ರೀ ಸಂಪರ್ಕದಿಂದ ದೂರುವಿರುವುದು, ಮಿತ್ಯ ನುಡಿಯದಿರುವುದು, ಪರರಿಗೆ ಸಹಾಯ ಹಸ್ತ ಚಾಚುವಂತಹ ತತ್ವಗಳನ್ನು ನಾಗರಿಕರು ಪಾಲಿಸಿದರೆ ಉತ್ತಮ ಬಾಳ್ವೆ ನಡೆಸಲು ಸಾಧ್ಯ. ಶತಕಗಳ ಹಿಂದೆ ಜಗತ್ತಿನಲ್ಲಿ ಚಾಲ್ತಿಯಲ್ಲಿದ್ದ ಧಾರ್ಮಕ  ಮೌಡ್ಯತೆಯನ್ನು ದಿಕ್ಕರಿಸಿ ಬುದ್ಧರು ಶಾಂತಿಯುತ ಸಮಾಜದ ಸಲುವಾಗಿ ಭೌದ್ಧ ಧರ್ಮ ಸ್ಥಾಪಿಸಿದರು, ಭಾರತದ ಮೂಲ ಧರ್ಮವಾದ ಬೌದ್ಧ ಧರ್ಮ ಇಂದು ನಶಿಸುತ್ತಿದ್ದು, ಬುದ್ಧರ ತತ್ವಗಳನ್ನು ಜನರಿಗೆ ತಿಳಿಸುವ ಮೂಲಕ ಧರ್ಮಕ್ಕೆ ಮತ್ತೊಮ್ಮೆ ಜೀವ ತುಂಭ ಬೇಕಿದೆ, ಟ್ರಸ್ಟ್ಗೆ ಸರಕಾರ 2ಎಕರೆ ಸರಕಾರಿ ಜಮೀನು ನೀಡಿದ್ದು, ಶಾಲೆಯನ್ನು  ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಗುರಿಯನ್ನು ಟ್ರಸ್ಟ್ ಹೊಂದಿದೆ ಎಂದೂ ಟ್ರಸ್ಟ್ನ ಅಧ್ಯಕ್ಷ ಎಮ್.ಆರ್.ವೆಂಕಟೇಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here