ಪತ್ನಿ ಕೊಂದು ನೇಣಿಗೆ ಶರಣಾದ ಪತಿ

0
170

ವಿಜಯಪುರ. ಪತ್ನಿ ಕೊಂದು ನೇಣಿಗೆ ಶರಣಾದ ಪತಿವಿಜಯಪುರ ತಾಲ್ಲೂಕಿನ ಹೊಳಿ ಜೈನಾಪೂರದಲ್ಲಿ ಘಟನೆ.

ವ್ಯಕ್ತಿಯೊರ್ವ ತನ್ನ ಪತ್ನಿಯನ್ನು ಕೊಂದು ನಂತರ ತಾನು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ವಿಜಯಪುರ ತಾಲ್ಲೂಕಿನ ಹೊಳಿ ಜೈನಾಪೂರ ಗ್ರಾಮದಲ್ಲಿ ನಡೆದಿದೆ.
ರೇಷ್ಮಾ ಬೇಪಾರಿ(25) ಹತ್ಯೆಯಾದ ಮಹಿಳೆ. ಹುಸೇನ್‌ಸಾಬ್ ಬೇಪಾರಿ(34) ಪತ್ನಿಯನ್ನು ಕೊಲೆಗೈದು ನೇಣಿಗೆ ಶರಣಾಗಿರುವ ವ್ಯಕ್ತಿ.
ಕೌಟುಂಬಿಕ ಕಲಹವೇ ಈ ಪ್ರಕರಣಕ್ಕೆ ಕಾರಣ ಎನ್ನಲಾಗಿದೆ. ಪತಿ-ಪತ್ನಿಯರ ಕೌಟುಂಬಿಕ ಕಲಹ ದುರಂತ ಅಂತ್ಯ ಕಂಡಿದ್ದು ಆದ್ರೆ ಇಬ್ಬರು ಮಕ್ಕಳು ಮಾತ್ರ ತಬ್ಬಲಿಯಾಗಿದ್ದಾರೆ.
ಕೆಲ ತಿಂಗಳಿಂದ ಗಂಡ-ಹೆಂಡತಿ ನಡುವೆ ಕಲಹವಾಗಿತ್ತು. ಗುರು-ಹಿರಿಯರ ಸಮ್ಮುಖದಲ್ಲಿ ಜಗಳ ಬಗೆಹರಿಸಲಾಗಿತ್ತು ಆದರೆ ನಿನ್ನೆ ಮತ್ತೆ ಪತಿ-ಪತ್ನಿ ಮಧ್ಯೆ ಜಗಳವಾಗಿತ್ತು. ಆಗ ಗಂಡ ಹುಸೇನ್‌ಸಾಬ್ ಪತ್ನಿಯನ್ನು ಕೊಂದು ಬಳಿಕ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here