ಮೂಲಭೂತ ಸೌಕರ್ಯಗಳಿಗಾಗಿ ಪರದಾಟ

0
168

ಬಳ್ಳಾರಿ/ಹೊಸಪೇಟೆ:ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲದೇ,
ಪರದಾಡುವಂತಾಗಿದ್ದು, ಶುದ್ಧ ಕುಡಿಯುವ ನೀರಿಗಾಗಿ ಪ್ರವಾಸಿಗರು, ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಸಿದ್ಧ ವಿಜಯ ವಿಠಲ ದೇವಸ್ಥಾನದ ಟಿಕೆಟ್ ಕೌಂಟರ್ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕ, ಕಳೆದ ವಾರದಿಂದ ಕೆಟ್ಟು, ಪ್ರವಾಸಿಗರಿಗೆ ನೀರು ಸಿಗದೇ ಬಾಯಾರಿ ಬೆಂಡಾಗುತ್ತಿದ್ದಾರೆ.

ಭಾರತೀಯ ಪುರಾತತ್ವ ಸಂರ್ವೇಕ್ಷಣ ಇಲಾಖೆ, ವಿರೂಪಾಕ್ಷೇಶ್ವರ ದೇವಸ್ಥಾನ, ಕಮಲ ಮಹಲ್ ಹಾಗೂ ವಿಜಯ ವಿಠಲ ದೇಗುಲದ ಬಳಿ ಕುಡಿಯುವ ನೀರಿನ ಘಟಕನ್ನು ಸ್ಥಾಪನೆ ಮಾಡಿದೆ. ಆದರೆ, ವಿಜಯ ವಿಠಲ ದೇವಸ್ಥಾನದ ಬಳಿ ಹಾಗೂ ಕಮಲ ಮಹಲ್ ಬಳಿ ಇರುವ ನೀರಿನ ಘಟಕ ವಾರಕೊಮ್ಮೆಯಾದರೂ ಕೆಟ್ಟು ನಿಲ್ಲುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.

ದೇಶ-ವಿದೇಶಿ ಪ್ರವಾಸಿಗರ ಮುಖ್ಯ ಆಕರ್ಷಣೆ ಸ್ಥಳವಾದ ವಿಜಯ ವಿಠಲ ದೇವಸ್ಥಾನದ ವೀಕ್ಷಣೆಗಾಗಿ ಪ್ರತಿನಿತ್ಯ ನೂರಾರು ಪ್ರವಾಸಿಗರು, ಬೇಟಿ ನೀಡುವುದು ವಾಡಿಕೆ. ನೀರಿನ ಬಾಟಲಿಯನ್ನು ಪ್ರವಾಸಿಗರು ಹೊತ್ತು ತಂದಿದ್ದರೂ, ಕ್ಷಣಾರ್ಧದಲ್ಲಿ ನೀರಿನ ಬಾಟಲಿ ಖಾಲಿಯಾಗಿ, ನೀರು ಸಿಗದಂತಾಗುತ್ತದೆ. ಪ್ರವಾಸಿಗರ ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಪರಿಹರಿಸುವ ಮೂಲಕ ಸಮರ್ಪಕ ಶುದ್ಧ ಕುಡಿಯುವ ನೀರು ಒದಗಿಸಬೇಕು ಎನ್ನುವುದು ಪ್ರವಾಸಿಗರ ಒತ್ತಾಸೆಯಾಗಿದೆ.

ನೀರಿನ ಕೊರತೆ:ವಿಜಯ ವಿಠಲ ದೇವಸ್ಥಾನದ ಬಳಿ ಸ್ಥಾಪನೆ ಮಾಡಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ನೀರಿನ ಕೊರೆತೆಯಿಂದ ಬಳಲುತ್ತಿದೆ. ಈ ಪ್ರದೇಶದಲ್ಲಿದ್ದ ಎರಡೂ ಕೊಳವೆ ಬಾವಿಯಲ್ಲಿ ನೀರು ಭತ್ತಿ ಹೋಗಿದ್ದು, ಇದಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಘಟಕಕ್ಕೆ ಅಗತ್ಯ ನೀರು ಸಿಗದಂತಾಗಿ ಆಗಾಗ ಘಟಕ ಕೆಟ್ಟು ನಿಲ್ಲುತ್ತಿದೆ. ಆದರೂ ತಡ ಮಾಡದೇ, ದುರಸ್ತಿಗೊಳಿಸಿ, ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಇಲಾಖೆ ಶ್ರಮ ಪಡುತ್ತಿದೆ. ಈ ಪ್ರದೇಶದಲ್ಲಿ ಮತ್ತೊಂದು ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here