ಕೋದಂಡರಾಮಸ್ವಾಮಿ ದೇವಸ್ಥಾನ ಕಟ್ಟಡ ಕೆಲಸ ವಿವಾದ ಹೈಕೋರ್ಟ್ಗೆ

0
182

ಕೋಲಾರ/ಬಂಗಾರಪೇಟೆ :ಬಂಗಾರಪೇಟೆ ಪಟ್ಟಣದ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನ ದ ವಾಣಿಜ್ಯ ಕಟ್ಟಡ ಕಾಂಗಾರಿ ಸಂಬಂಧವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿನ್ನಲೆ ಹೈಕೋರ್ಟ್ ಸರಕಾರಕ್ಕೆ ತುತ್ರು ನೋಟೀಸ್ ಜಾರಿ ಮಾಡಿ ವಿವರ ಕೇಳಿದೆ, ಗೋವಿಂದಪ್ಪ ಇತರರು ಸಲ್ಲಿಸಿರುವ ಅರ್ಜಿಯಲ್ಲಿ ದೇವಸ್ಥಾನ ದ ಎಡ ಭಾಗದಲ್ಲಿ ಕಟ್ಟಡ ಕೆಲಸ ಆಡಳಿತಾತ್ಮಕ ಮಂಜೂರಾತಿ ಯನ್ನ ಪಡೆದುಕೊಂಡು ಭೂ ಸೇನಾ ನಿಗಮ ಕೋಲಾರದವರು ಕಾಂಗಾರಿ ನಡೆಸುತ್ತಿದ್ದಾರೆ, ದೇವಸ್ಥಾನ ದ ಎಡ ಭಾಗದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವುದರಿಂದ ದೇವಸ್ಥಾನ ಕ್ಕೆ ಹೋಗಿ ಬರಲು ಸಾರ್ವಜನಿಕರಿಗೆ ತೊಂದರೆ ಆಗುವ ಮೂಲಕ ಕಟ್ಟಡ ಕೆಲಸಕ್ಕೆ ತಡೆಯಾಜ್ಞೆ ನೀಡಬೇಕೆಂದು ಅರ್ಜಿದಾರರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು, ಈ ಹಿನ್ನಲೆಯಲ್ಲಿ ವಿಭಾಗೀಯ ಪೀಠದ ನ್ಯಾಯಮೂರ್ತಿಗಳು ಮುಜರಾಯಿ ಇಲಾಖೆ ರಾಜ್ಯ ಕಾರ್ಯದರ್ಶಿ, ಎಇಇ ಭೂ ಸೇನಾ ನಿಗಮ ಕೋಲಾರ, ಜಿಲ್ಲಾಧಿಕಾರಿ ಕೋಲಾರ, ಸಿಇಓ ಕೋದಂಡರಾಮಸ್ವಾಮಿ ದೇವಸ್ಥಾನ ಬಂಗಾರಪೇಟೆ. ಅವರಿಗೆ ತುರ್ತು ನೋಟೀಸ್ ಜಾರಿ ಮಾಡಿ ಜೂನ್ 3 ಕ್ಕೆ ವಿಚಾರಣೆ ಮುಂದೂಡಲಾಗಿದೆ, ದೇವಸ್ಥಾನದ ಎಡ ಭಾಗದಲ್ಲಿ ಕಟ್ಟಡ ನಿರ್ಮಾಣ ಮಾಡದಂತೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಏನು ಪ್ರಯೋಜನವಾಗದ ಕಾರಣ ಕೊನೆಗೆ ನ್ಯಾಯಾಲಯದ ಮೊರೆ ಹೋಗಿ ಕಟ್ಟಡ ಕೆಲಸ ಹೈಕೋರ್ಟ್ ಮೆಟ್ಟಿಲೇರಿದೆ.

LEAVE A REPLY

Please enter your comment!
Please enter your name here