ಕೆರೆಯ ಹೂಳನ್ನು ಕೆರೆಗೆ ಚೆಲ್ಲಿದ್ರೆ ಹೇಗೆ..?

0
185

ಬಳ್ಳಾರಿ: ಕೆರೆಯ ಹೂಳನ್ನು ಎತ್ತಿ ಹೊರ ಹಾಕದೇ ಕೆರೆಯ ಪ್ರದೇಶದಲ್ಲಿಯೇ ಹಾಕುತ್ತಿರುವುದನ್ನು ವಿರೋಧಿಸಿ ನಮ್ಮ ಕೆರೆ ನಮ್ಮ ಹಕ್ಕು ಬಳಗದ ಅಂಚೆ ಕೊಟ್ರೇಶ ಕೊಟ್ಟೂರು ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಲ್ಲು ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೆರೆಯ ಹೂಳನ್ನು ಕೆರೆಗೆ ಚೆಲ್ಲುವ ಮೂಲಕ ಬೇಕಾಬಿಟ್ಟಿ ಕೆಲಸ ಮಾಡುತ್ತಿರುವುದರಿಂದ ಈ ಬಗ್ಗೆ ಮೇಲಾಧಿಕಾರಿಗಳಿಗೆ ಹೇಳಿದರೂ ಯಾವುದೇ ಕ್ರಮ ಜರುಗಿಸದಿರುವುದರಿಂದ ಬೇಸತ್ತು ಈ ಪ್ರತಿಭಟನೆ ಆರಂಭವಾಗಿದೆ.
ಈ ವಿಷಯ ಕುರಿತು ನಮ್ಮ ಕೆರೆ ನಮ್ಮ ಹಕ್ಕು ಬಳಗದವರು, ನರೇಗಾ ಯೋಜನೆಯ ಕೆಲಸ ಮಾಡಿಸುವ ಮೇಸ್ತ್ರಿ , ಪಿಡಿಒ ಹಾಗೂ ತಹಸೀಲ್ದಾರ್‌ರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಅಕ್ರಮದ ವಿರುದ್ಧ ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸುವ ಮೂಲಕ ಈ ಕೆರೆಯ ಹೂಳನ್ನು ಕೆರೆಯಿಂದ ದೂರ ಹಾಕಬೇಕೆಂದು ಅಂಚೆ ಕೊಟ್ರೇಶ್ ಅಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here