ನೇಣು ಬಿಗಿದುಕೊಂಡು ಆತ್ಮಹತ್ಯೆ

0
213

ಬಳ್ಳಾರಿ /ಹೊಸಪೇಟೆ/ಮರಿಯಮ್ಮನಹಳ್ಳಿಯ ರೈತನೋರ್ವ ಸಾಲಬಾದೆ ತಾಳಲಾರದೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಗುರುವಾರ ನಡೆದಿದೆ. ಪಟ್ಟಣದ 17ನೇ ವಾರ್ಡಿನ ತಾಂಡ ರೈತ ಬಾಲನಾಯ್ಕ್ (45) ಎಂದು ತಿಳಿದು ಬಂದಿದೆ. ಈತನು ಕೃಷಿ ಚಟುವಟಿಕೆಗೆ ಖಾಸಗಿ ವಲಯದಲ್ಲಿ ಸುಮಾರು 2 ಲಕ್ಷ ರೂ.ಗಳನ್ನು ಸಾಲ ಮಾಡಿದ್ದು, ಇದನ್ನು ತೀರಿಸಲಾಗದೆ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here