ಚುರುಕುಗೊಂಡ ಪಕ್ಷ ಸೇರ್ಪಡೆ ಕಾರ್ಯಕ್ರಮ.

0
210

ಬಳ್ಳಾರಿ;ಬಿಸಿಲೂರಿನಲ್ಲಿ ಚುರುಕುಗೊಂಡ ತೆನೆ ಹೊತ್ತ ಮಹಿಳೆ-ಬೂತ್ ಮಟ್ಟದಲ್ಲಿ ಸಮಿತಿ ರಚನೆ-ಹೈ,ಕ ಜಿಲ್ಲೆಗಳಲ್ಲಿ ಜೆಡಿಎಸ್ ಒಲವು-ಪಕ್ಷಕ್ಕೆ ಸೇರ್ಪಡಲು ಅನ್ಯ ಪಕ್ಷಗಳ ಹಲವು ಮುಖಂಡರು ಸಂಪರ್ಕದಲ್ಲಿದ್ದಾರೆ-ವೀಕ್ಚಕ ಕಾಂತರಾಜು ಹೇಳಿಕೆ

ಬಿಸಿಲೂರಿನಲ್ಲೀಗ ತೆನೆ ಹೊತ್ತ ಮಹಿಳೆಯ ದರ್ಬಾರ್ ಚುರುಕುಗೊಂಡಿದೆ. ಇದುವರೆಗೆ ಮೂಲೆಗುಂಪಾಗಿದ್ದ ತೆನೆ ಹೊತ್ತ ಮಹಿಳೆಗೆ ಎಲ್ಲಿಲ್ಲದ ಮಹತ್ವ ಬಂದಿದೆ. ಅತ್ತ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರ ಕಾರ್ಯಕ್ರಮಗಳ ನಡುವೆ ತೆನೆ ಹೊತ್ತ ಮಹಿಳೆಯೂ ನಾನೇನೂ ಕಮ್ಮಿ ಇಲ್ಲ ಅಂತ ಮುಂಚೂಣಿಗೆ ಬರಲು ಯತ್ನಿಸುತ್ತಿದ್ದಾಳೆ.
ಒಂದು ಕಾಲದಲ್ಲಿ ಕಾರ್ಯಕರ್ತರು ಇಲ್ಲದೇ ಬಿಕೋ ಎನ್ನುತ್ತಿದ್ದ ಪಕ್ಷದ ಕಚೇರಿಯಲ್ಲಿ ಈಗ ಚಟುವಟಿಕೆಗಳು ಗರಿಗೆದರಿವೆ.
ಚುನಾವಣಾ ವೀಕ್ಷಕರಾಗಿ ಬಳ್ಳಾರಿಗೆ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಕಾಂತರಾಜು ಅವರು, ಇನ್ನೊಂದು ತಿಂಗಳೊಳಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ಆಗಲಿದೆ. ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಪಕ್ಷದ ವರ್ಚಸ್ಸು ದಿನೇ ದಿನೇ ವೃದ್ಧಿಸುತ್ತಿದೆ. ಮುಂದಿನ ತಿಂಗಳು ವರಿಷ್ಠರಾದ ದೇವೇಗೌಡರು ಮತ್ತು ಕುಮಾರಣ್ಣ ಆಗಮಿಸಲಿದ್ದಾರೆ. ಬಳ್ಳಾರಿ ಜಿಲ್ಲೆಯೂ ಸೇರಿದಂತೆ ರಾಜ್ಯದ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು ಎಲ್ಲ ಮಾಹಿತಿ ನೀಡಲಿದ್ದಾರೆ ಅಂತ ಹೇಳಿದ್ರು.
ಕೆ.ಶಿವಪ್ಪ, ಜಿಲ್ಲಾ ಅಧ್ಯಕ್ಷರು, ಜೆಡಿಎಸ್,
ಕಾಂತರಾಜು, ವೀಕ್ಷಕರು, ಜೆಡಿ ಎಸ್ ಹಾಗು ಇತರರು ಹಾಜರಿದ್ದುರು.

LEAVE A REPLY

Please enter your comment!
Please enter your name here