ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮುಂದಾದ ಬಿಬಿಎಂಪಿ

0
172

 

ಬೆಂಗಳೂರು/ಮಹದೇವಪುರ:- ನಗರದ ಪ್ರತಿಷ್ಟಿತ ವೈಟ್ಪೀಲ್ಡ್ ಭಾಗದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಯನ್ನು ನಿಯಂತ್ರಿಸಲು ಬಿಬಿಎಂಪಿ ಮುಂದಾಗಿದ್ದು ಇಂದು ಬಿಬಿಎಂಪಿ ವಿಶೇಷ ಅಯುಕ್ತ ಜಯಶಂಕರ್ ಟ್ರಾಫಿಕ್ ಜಾಮ್ ಆಗುವ ಪ್ರಮುಖ ಜಂಕ್ಷನ್ಗಳನ್ನು ಪರಿಶೀಲಿಸಿದರು.
ಮಹದೇವಪುರ ಕ್ಷೇತ್ರದ ದೊಡ್ಡನಕ್ಕುಂದಿ ವಾರ್ಡನ ಕುಂದಲಹಳ್ಳಿ ಸಿಗ್ನಲ್, ಹಗದೂರು ವಾರ್ಡನ ನಲ್ಲೂರಹಳ್ಳಿ ಬೋರ್ವೆಲ್ ರಸ್ತೆ ಮತ್ತು ಕಾಡುಗೂಡಿ ವಾಡರ್್ನ ಹೋಪ್ ಪಾಮ್ ಸಿಗ್ನಲ್ನ್ನು ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಪರಿಶೀಲಿಸಿ ನಂತರ ಮಾತನಾಡಿದ ಅವರು. ಈ ಬಾಗದಲ್ಲಿ ಸಂಚಾರ ದಟ್ಟಣೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳ ಬಗ್ಗೆ ವೈಟ್ಪೀಲ್ಡ್ ರೈಸಿಂಗ್ ಸಂಘಟನೆಯ ಸದಸ್ಯರು ಮತ್ತು ಸ್ಥಳೀಯರು ಶಾಸಕ ಅರವಿಂದ ಲಿಂಬಾವಳಿ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ ಜಾಜರ್್ರವರೊಂದಿಗೆ ಸಬೆಗಳನ್ನು ನಡೆಸಿ ಒತ್ತಾಯಿಸಿದರು. ಈ ಹಿನ್ನಲೇಯಲ್ಲಿ ಸಚಿವರ ಸೂಚನೆ ಮೇರೆಗೆ ಪರಿಶೀಲನೆ ನಡೆಸಿದ್ದೇವೆ. ಕುಂದಲಹಳ್ಳಿ ಹಾಗೂ ಹೋಪ್ಪಾಮ್ ಸಿಗ್ನಲ್ಗಳ ಬಳಿ ಶೀಘ್ರದಲ್ಲಿ ಅಂಡರ್ಪಾಸ್ ರಸ್ತೆ ನಿಮರ್ಿಸಿ ಸಿಗ್ನಲ್ ಪ್ರೀ ಮಾಡಿಕೊಡಲಾಗುವುದು. ಅಲ್ಲದೆ ನಲ್ಲೂರಹಳ್ಳಿ ಬೋರ್ವೇಲ್ ರಸ್ತೆಯನ್ನು ಅಭಿವೃದ್ದಿ ಪಡಿಸಲಾಗುವುದು. ದಿನ್ನೂರಿನ ವಿಪ್ರೋ ಸಂಸ್ಥೆಯು ರಸ್ತೆ ಅಭಿವೃದ್ದಿಗೆ ಸಿಎಸ್ಆರ್ ಫಂಡ್ ನೀಡಲಿದ್ದು ಇದನ್ನು ಬಳಸಿಕೊಂಡು ಇನ್ನುಳಿದ ಹಣವನ್ನು ಬಿಬಿಎಂಪಿ ಭರಿಸಲಿದೆ ಎಂದರು.
ಈ ಭಾಗದಲ್ಲಿ ವೈಟ್ಫೀಲ್ಡ್ನ ಪ್ರಮುಖ ರಸ್ತೆಯಲ್ಲಿ ಫುಟ್ಪಾತ್ಗಳು ಮತ್ತು ಚರಂಡಿಗಳು ಬ್ಲಾಕ್ ಆಗಿದೆ, ಫುಟ್ಪಾತ್ ಮೇಲೆ ಅಲವಡಿಸ ಲಾದ ಸ್ಲಾಬ್ಗಳು ಸಹ ಮುರಿದುಹೋಗಿವೆ, ಇದನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ ಮುಂದುವರಿದರೆ ಸೂಕ್ತ ಕ್ರಮ ಜರುಗಿಸುವುದಾಗೊ ಎಚ್ಚರಿಕೆ ನಿಡಿದರು.

ಬೈಟ್; ಜಯಶಂಕರ್ ವಿಶೇಷ ಆಯುಕ್ತರು ಬಿಬಿಎಂಪಿ.

ವೈಟ್ ಫೀಲ್ಡ್ನ ಕುಂದಲಹಳ್ಳಿ, ಹೋಪ್ಫಾಮ್ ಸೇರಿದಂತೆ ಹಲವು ಜಂಕ್ಷನ್ ಗಳಲ್ಲಿ ನಿರಂತರ ಸಂಚಾರ ದಟ್ಟಣೆ ಆಗುತ್ತಿತ್ತು, ಇದನ್ನು ತಪ್ಪಿಸಲು ರಸ್ತೆ ಅಗಲಿಕರಣ ಮತ್ತು ಅಂಡರ್ ಪಾಸ್ ನಿಮರ್ಿಸಲು ಬಿಬಿಎಂಪಿ ಮುಂದಾಗಿರುವದು ಶ್ಲಾಘನೀಯ, ಆದಷ್ಟು ಬೇಗನೆ ಈ ಕಾಂಗಾರಿ ಆರಂಬಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಿ.

LEAVE A REPLY

Please enter your comment!
Please enter your name here