ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

0
208

ಹೊಸಪೇಟೆ:ತುಂಗಭದ್ರೆ ಹೂಳೆತ್ತುವ ಜಾತ್ರೆಗೆ ಕುರುಬ ಸಮಾಜ ದಿಂದ 55 ಸಾವಿರೂ ನೀಡಿ ಬೆಂಬಲಮಂಗಳವಾರಕ್ಕೆ 20ನೇ ದಿನಕ್ಕೆ ಕಾಲಿಟ್ಟಿದ್ದು, ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ.ಜಿಲ್ಲೆಯ ವಿವಿಧಡೆಯಿಂದ ಧಾನಿಗಳು, ರೈತರಿಗೆ ಬೆಂಬಲ ನೀಡಿದ್ದು, ಅಂದಾಜು 90ಸಾವಿರ ರೂ. ಹಾಗೂ 10 ಕ್ವಿಂಟಲ್ ಅಕ್ಕಿ ನೀಡಿದ್ದಾರೆ.ಮಠಾಧೀಶರ ಧರ್ಮಪರಿಷತ್ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಳೆದ ಮೇ.18ರಿಂದ ಆರಂಭವಾದ ಹೂಳೆತ್ತುವ ಕಾರ್ಯಕ್ಕೆ ನಗರದ 19ನೇ ವಾರ್ಡಿನ ಕುರಬರ ಯುವಕ ಸಂಘದ ವತಿಯಿಂದ 55 ಸಾವಿರ ರೂ. ಡಾ.ಬಿ.ಆರ್. ಅಂಬೇಡ್ಕರ್ ಸಂಘದ ವತಿಯಿಂದ 10ಸಾವಿರ, ದರೂರು ಗ್ರಾಮದ ರೈತರಿಂದ 5ಸಾವಿರ, ಬಳ್ಳಾರಿ ತಾಲ್ಲೂಕು ಚಾನಾಳ್ ಗ್ರಾಮದ ರೈತ ತಾತಯ್ಯನವರ ತಿಮ್ಮಪ್ಪ 5ಸಾವಿರ ಸೇರಿದಂತೆ ಸೋಮಲಾಪುರ ಗ್ರಾಮದ ರೈತರು, 10 ಕ್ವಿಂಟಲ್ ಅಕ್ಕಿಯನ್ನು ನೀಡಿ, ರೈತರಿಗೆ ಬೆಂಬಲ ನೀಡಿದ್ದಾರೆ.ಸುಮಾರು 6ದಶಕಗಳಿಂದ ಸತತವಾಗಿ ಹರಿದು ಬರುತ್ತಿರುವ ಹೂಳು ಜಲಾಶಯದ ನೀರಿನ ಸಂಗ್ರಹ ಸಾಮಾರ್ಥ್ಯವನ್ನು ತಗ್ಗಿಸಿದೆ. ಸರ್ಕಾರ ಜಲಾಶಯದಲ್ಲಿ ಹೂಳೆತ್ತೆವಂತೆ ರೈತರು, ಮಾಡಿದ ಎಲ್ಲಾ ಪ್ರಯತ್ನಗಳೂ ವಿಫಲವಾದ ಹಿನ್ನಲೆಯಲ್ಲಿ ವಿಧಿಯಿಲ್ಲದೇ ಸ್ವಯಂ ಪ್ರೇರಿತವಾಗಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಹೂಳೆತ್ತಲು ಪ್ರಾರಂಭ ಮಾಡಿದರು. ಹೂಳೆತ್ತು ಕೆಲಸ ಅಸಾಧ್ಯ ಎಂದು ತಿಳಿದಿದ್ದರೂ, ರೈತರು ಹೂಳೆತ್ತುವುದು ಸಾಧ್ಯವಿದೆ ಎಂದು ತೋರುವ ಕಾಯಕವನ್ನು ಮಾಡುತ್ತಿದ್ದಾರೆ. ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಜಲಾಶಯದ ಹೂಳೆತ್ತುವ ಕುರಿತು ಚರ್ಚೆ ನಡೆಬೇಕು ಎಂದು ಪಟ್ಟು ಹಿಡಿದು ಕುಳಿತ್ತಿದ್ದಾರೆ. ಈ ಕುರಿತು ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಶಾಸಕರು,ಸಂಸದರು, ರೈತರಿಗೆ ಬೆಂಬಲ ಸೂಚಿಸಿ, ಅಧಿವೇಶನದಲ್ಲಿ ಚರ್ಚೆ ಮಾಡಿ ಸರ್ಕಾರದ ಗಮನ ಸಳೆಯುವ ಭರವಸೆ ನೀಡಿದ್ದಾರೆ. ಸರ್ಕಾರ ತುಂಗಭದ್ರೆ ಹೂಳೆತ್ತುವ ವಿಷಯ ಗಂಭೀರವಾಗಿ ಪರಿಗಣಿಸುವ ಮೂಲಕ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ಜಿಲ್ಲೆಯ ರೈತರ ಒತ್ತಾಸೆಯಾಗಿದೆ. ಕಾದು ನೋಡಬೇಕು.

LEAVE A REPLY

Please enter your comment!
Please enter your name here