ಬೆಂಗಳೂರು/ಮಹದೇವಪುರ

0
129

ಬೆಂಗಳೂರು/ಮಹದೇವಪುರ: ಶತಮಾನಗಳ ಮಾನವನ ಸ್ವಾರ್ಥಕ್ಕೆ ಹವಾಮಾನದಲ್ಲಾದ ವೈಪರಿತ್ಯ ಮತ್ತು ಅದರ ನಿಯಂತ್ರಣಕ್ಕೆ ಅರಿವು ಮೂಡಿಸಲು ಕೇಂದ್ರ ಸಕರ್ಾರದ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗು ರೈಲ್ವೆ ಅಲ್ಲದೆ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಟ್ರೈನ್ನೊಳಗೆ ಎಕ್ಸಿಬಿಷನ್ ನಿಮರ್ಿಸಿ ಮಕ್ಕಳಿಗೆ ಮತ್ತು ಸಾರ್ವಜನಿಕರಲ್ಲಿ ಅರಿವಿಗೆ ಕೇಂದ್ರ ಮುಂದಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.ಇಲ್ಲಿನ ವೈಟ್ಫೀಲ್ಡ್ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಸಕರ್ಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪ್ರಾರಮಭಿಸಿರುವ ರೈಲ್ವೆ ಎಕ್ಸಿಬಿಷನ್ ಇಂದು ನಗರದ ವೈಟ್ಫೀಲ್ಡ್ನ ರೈಲ್ವೆ ನಿಲ್ದಾಣದಲ್ಲಿ ನಿಂತಿತ್ತು, ನೋಡಲು ಅತ್ಯಂತ ಆಕರ್ಷಣೀಯ ಚಿತ್ರಕಲೆಗಳ ಚಿತ್ತಾರವಿರುವ ರೈಲು ಹೊರಗಿನಿಂದಲೇ ಮಕ್ಕಳ ಚಿತ್ತ ಸೆಳೆಯುವ ಎಲ್ಲಾ ಲಕ್ಷಣ ಹೊಂದಿದೆ, ಇನ್ನು ರೈಲಿನ ಒಳಕ್ಕೆ ಹೊರಟರೆ ಸಾಕು ಪ್ರಕೃತಿಯ ಕುರಿತ ಉಪಯುಕ್ತ ಮಾಹಿತಿಗಳ ಭಂಡಾರ, ವಿನ್ಯಾಸದಿಂದ ನಿಮರ್ಿಸಿರುವ ವಸ್ತುಗಳ ಪ್ರದರ್ಶನ ವಿತ್ತು, ಇದನ್ನು ನೋಡಲು ಬಂದ ಶಾಲಾ ಮಕ್ಕಳು ಒಂದೊಂದೆ ಪ್ರಕೃತಿ ಮಾದರಿಗಳನ್ನು ನೋಡುತ್ತಾ ಮಂತ್ರ ಮುಗ್ದರಾದರು, ನೈಸಗರ್ಿಕ ಸಂಪನ್ಮೂಲಗಳ ಅಪರಿಮಿತ ಬಳಕೆ, ಪ್ರಪಂಚದಾದ್ಯಂತ ಕೈಗಾರಿಕೆಗಳ ಹೆಚ್ಚುವಿಕೆ, ವಾಹನಗಳ ಅಪರಿಮಿತ ಬಳಕೆ ಇಂತಹ ಹಲವು ಸಂಗತಿಗಳು ವಾಯುಮಂಡಲದಲ್ಲಿ ಜಲ, ವಾಯು, ಭೂಮಿ, ಅಲ್ಲದೆ ಹವಾಮಾನದಲ್ಲಿ ವೈಪರಿತ್ಯ ಸೃಷ್ಟಿಸಿದೆ, ಈ ರೀತಿಯ ಜಾಗೃತಿ ದೇಶದ ರಾಜಕಾರಣಿಗಳು, ಬಂಡವಾಳ ಶಾಹಿಗಳು ಕೈಗಾರಿಕಾ ಸ್ಥಾಪಕರು ಸೇರಿದಂತೆ ಹಣವಂತರಿಗೆ ತಿಳಿದರೆ ಪ್ರಕೃತಿಯ ಮಹತ್ವ ತಿಳಿದು ಸಾರ್ವಜನಿಕರು ಪರಿಸರ ರಕ್ಷಣೆಯಲ್ಲಿ ತೊಡಗಲಿದ್ದಾರೆಂದು ಸವರ್ೋಚ್ಚ ನ್ಯಾಯಾಲಯದ ನಿವೃತ್ತ ನ್ಯಾ. ಗೋಪಾಲ್ ಗೌಡ ತಿಳಿಸಿದರು.ಬೈಟ್: ನ್ಯಾ. ಗೋಪಾಲ್ ಗೌಡ, ನಿವೃತ್ತ ನ್ಯಾಯಮೂತರ್ಿ ಸವರ್ೋಚ್ಚ ನ್ಯಾಯಾಲಯ.ವಾಯುಮಂಡಲದಲ್ಲಿನ ವೈಪರಿತ್ಯ ಹಲವು ದುಷ್ಪರಿಣಾಮಗಳ ಹುಟ್ಟುವಿಕೆಗೆ ಕಾರಣವಾಗುತ್ತಿದೆ, ಇದರ ಸಂಭವಕ್ಕೆ ಕಾರಣ ಮತ್ತು ಇದರ ನಿಯಂತ್ರಣದ ಕುರಿತು ಮಕ್ಕಳಿಗೆ ಮಾಹಿತಿ ನೀಡಲು ಮನರಂಜನಾತ್ಮಕ ಮತ್ತು ಕ್ರಿಯಾಶೀಲ ಪದ್ದತಿಯನ್ನು ಕೇಂದ್ರ ಅಳವಡಿಸಿಕೊಂಡಿರುವುದು ಉತ್ತಮ ಬೆಳವಣಿಗೆ, ನಮ್ಮ ದೇಶದಲ್ಲಿ ಬೇರೆ ರಾಷ್ಟ್ರಗಳಿಗಿಂತ ನೈಸಗರ್ಿಕ ಸಂಪನ್ಮೂಲ ಹೆಚ್ಚಿದೆ ಆದರೆ ಸ್ವಾರ್ಥ ಬದುಕಿನಿಂದ ನೈಸಗರ್ಿಕ ಸಂಪನ್ಮೂಲಗಳು ದುರುಪಯೋಗವಾಗುತ್ತಿವೆ ಎಂದರು.    ಜಗತ್ತಿನಾದ್ಯಂತ ಆಧುನಿಕಯುಗದ ಭರಾಟೆಯಿಂದ ಪರಿಸರದ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬೀರಿದೆ, ಅಲ್ಲದೆ ಹವಾಮಾನದಲ್ಲಿ ಹಲವು ವೈಪರಿತ್ಯಗಳಿಗೆ ಕಾರಣವಾಗಿದೆ, ಈ ಬೆಳವಣಿಗೆ ಪ್ರಕೃತಿಯ ಮೇಲೆ ಬೀರಿರುವ ಪ್ರಭಾವ ಹಲವು ದುಷ್ಪರಿಣಾಮಗಳಿಗೆ ಎಡೆಮಾಡುತ್ತಿದೆ. ಬೈಟ್: ವಸಂತ ಕವಿತ, ಪ್ರಾಧ್ಯಾಪಕರು.ಒಟ್ಟಾರೆ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮಾಡಿರುವುದು ಉತ್ತಮ ಕಾರ್ಯ ಇದರಿಂದ ದೇಶದಾದ್ಯಂತ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಟ್ರೈನ್ ಎಕ್ಸಿಬಿಷನ್ ಉತ್ತಮ ಕಾರ್ಯ ಇದರ ಲಾಭ ಮತ್ತಷ್ಟು ಮಕ್ಕಳು ಮತ್ತು ಸಾರ್ವಜನಿಕರಿಗೆ ದೊರೆತರೆ ಪರಿಸರ ರಕ್ಷಣೆ ಸಾಧ್ಯವಾಗಲಿದೆ.

LEAVE A REPLY

Please enter your comment!
Please enter your name here