ಕೆರೆಯ ಸ್ವಚ್ಚತಾ ಕಾರ್ಯಗಳ ಬಗ್ಗೆ ಕೇಂದ್ರಕ್ಕೆ ವರದಿ

0
138

ಬೆಂಗಳೂರು/ಮಹದೇವಪುರ:ಬೆಳ್ಳಂಡೂರುಹಾಗೂ ವತರ್ೂರು ಕೆರೆಗಳಿಗೆ ಕೇಂದ್ರ ನಗರಾಭಿವೃದ್ದಿ ಸಮಿತಿ ಅಧ್ಯಕ್ಷ ಪಿನಾಕಿ ಮಿಶ್ರಾ ತಮ್ಮ ಸಂಸದೀಯ ಸಲಹಾ ಸಮಿತಿಯ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಕೆರೆಗಳ ಶುದ್ದಿಕರಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿವೆಯಾದರೂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಸದ್ಯ ಕೆಂದ್ರ ನಗರಾಭಿವೃದ್ದಿ ತಂಡ ಎರಡು ಕೆರೆಗಳ ಪರೀಶೀಲನೆಗೆ ಆಗಮಿಸಿದ್ದು ಇಲ್ಲಿನ ಸ್ವಚ್ಚತಾ ಕಾರ್ಯಗಳ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಲಿದ್ದಾರೆ.
ಈ ವೇಳೆ ಮಾತನಾಡಿದ ಕೇಂದ್ರ ನಗರಾಭಿವೃದ್ದಿ ಸಮಿತಿ ಅಧ್ಯಕ್ಷ ಪಿನಾಕಿ ಮಿಶ್ರಾ ಪರೀಶೀಲನೆಗೆ ಇಲ್ಲಿಗೆ ಬರಲು 3 ಗಂಟೆಗಳಾಗಿವೆ. ಇದರಿಂದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಅತಿಯಾಗಿದೆ ಎಂದು, ಹಾಗೇಯೆ ವಾಯು ಮಾಲಿನ್ಯವು ಹೆಚ್ಚಾಗಿದ್ದು, ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿಗೆ ಬೆಳ್ಳಂಡೂರು, ವತರ್ೂರು ಕೆರೆಗಳ ನೊರೆ, ದುವರ್ಾಸನೆ ಅಪಖ್ಯಾತಿಯನ್ನು ತಂದುಕೊಟ್ಟಿರುವುದು ಬೇಸರದ ಸಂಗತಿ ಎಂದರು.
ಈಗಾಗಲೇ ಸಂಸದ ಪಿ.ಸಿಮೋಹನ್, ಕೇಂದ್ರ ಸಚಿವ ನಿತಿನ್ಗಡ್ಕರಿಯೊಂದಿಗೆ ಬೆಂಗಳೂರು ನಗರದಲ್ಲಿ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದ್ದು ಅವರು ಸಮಸ್ಯೆಗಳಿಗೆ ಸ್ಪಂದಿಸಿ ಅನುದಾನವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ. ಸಮಸ್ಯೆಗಳ ಬಗ್ಗೆ ಸ್ಪಷ್ಟಚಿತ್ರಣವನ್ನು ಕೇಂದ್ರಕ್ಕೆ ವರದಿ ಸಲ್ಲಿಸಿ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದರು.ಹಸಿರು ನ್ಯಾಯಾಧಿಕರಣ ಬೀಸಿರುವ ಛಾಟಿಗೆ ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆಯಿದ್ದು, ಈಗಾಗಲೇ ಬೆಳ್ಳಂಡೂರು ಕೆರೆಯ ಸುತ್ತಮುತ್ತಲು ಕಲುಷಿತ ನೀರನ್ನು ಕೆರೆಗೆ ನೇರವಾಗಿ ಬಿಡುತ್ತಿದ್ದ ಕಾಖರ್ಾನೆಗಳನ್ನು ಮುಚ್ಚಿಸಲಾಗಿದೆ, ಅವರ ವಿರುದ್ದ ಕಠಿಣ ಕ್ರಮವನ್ನು ಸಹ ಕೈಗೊಳ್ಳಲಾಗಿದೆ. ಅಪಾಟರ್್ಮೆಂಟ್ಗಳಲ್ಲಿ ಎಸ್ಟಿಪಿ ಪ್ಲಾಂಟ್ಗಳನ್ನು ಕಡ್ಡಾಯಗೊಳಿಸಿದ್ದರೂ ಯಾರೊಬ್ಬರು ಸರಿಯಾಗಿ ಅಳವಡಿಸಿಕೊಂಡಿಲ್ಲ. ಇದರ ವಿರುದ್ದವು ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದರು. ಸಂಸದ ಪಿ.ಸಿ.ಮೋಹನ್ ಮಾತನಾಡಿ, ಇಲ್ಲಿನ ಸಮಸ್ಯೆಗಳನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಸಲುವಾಗಿ ಕೇಂದ್ರ ನಗರಾಭಿವೃದ್ದಿ ಸಮಿತಿಯನ್ನು ಇಲ್ಲಿಗೆ ಕರೆತರಲಾಗಿದ್ದು, ಇವರ ಮುಖಾಂತರ ಇನ್ನಷ್ಟು ಒತ್ತಡ ತಂದು ಕೆರೆಗಳ ಅಭಿವೃದ್ದಿ ಮಾಡುವತ್ತ ಗಮನಹರಿಸಲಾಗುತ್ತಿದೆ. ಅಲ್ಲದೇ ಬೆಂಗಳೂರಿನ ಸರ್ವತೊಮುಖ ಅಭಿವೃದ್ದಿಗಾಗಿ ಹೆಚ್ಚಿನ ಅನುದಾನವನ್ನು ತರುವುದು ನಮ್ಮ ಗುರಿಯಾಗಿದ್ದು ಈ ಮುಖಾಂತರ ಅದು ಈಡೇರಲಿದೆ ಎಂದರು.ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಕೆ.ಸಿ ರಾಮಮೂತರ್ಿ, ಶಾಸಕ ಅರವಿಂದಲಿಂಬಾವಳಿ, ಪಾಲಿಕೆ ಸದಸ್ಯರಾದ ಎಸ್.ಮುನಿಸ್ವಾಮಿ, ಆಶಾಸುರೇಶ್, ಪಾಲಿಕೆ ಬಿಡಿಎ ಮತ್ತು ಮೆಟ್ರೋ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here