ಸಿಪಿಐ(ಎಂ) ಹಾಗೂ ವಿವಿದ ಸಂಘಟನೆಗಳು ಪ್ರತಿಭಟನೆ

0
163

ಮಂಡ್ಯ/ ಮಳವಳ್ಳಿ: ಸಿಪಿಐ(ಎಂ) ನ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಹಾಗೂ ಸಂಸದ ಸೀತಾರಾಮ ಯೆಚೂರಿಯವರ ಮೇಲೆ ಹಲ್ಲೆ ಯತ್ನ ಹಾಗೂ ಮಧ್ಯ ಪ್ರವೇಶದಲ್ಲಿ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಸಿ 6ಮಂದಿ ರೈತರ ಹತ್ಯೆ ಮಾಡಿರುವ ಬಿಜೆಪಿ ಹಾಗೂ ಆರ್ ಎಸ್ ಎಸ್ ಗುಂಡಾಗಿರಿಯನ್ನು ಖಂಡಿಸಿ ಮಳವಳ್ಳಿಪಟ್ಟಣದಲ್ಲಿ  ಸಿಪಿಐ(ಎಂ) ಹಾಗೂ ವಿವಿದ ಸಂಘಟನೆಗಳು ಪ್ರತಿಭಟನೆ ನಡೆಸಿದರು.   ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗ  ಕೇಂದ್ರ ಸಕಾ೯ರ ಹಾಗೂ ಆರ್ ಎಸ್ ಎಸ್ ವಿರುದ್ದ ದಿಕ್ಕಾರ ಕೂಗಿದರು     ಇದೇ ಸಂದಭ೯ದಲ್ಲಿ ಜನವಾದಿ ಮಹಿ ಳಾ ಸಂಘಟನೆ ಅಧ್ಯಕ್ಷೆ  ದೇವಿ ಮಾತನಾಡಿ, ಮೋದಿ ಸಕಾ೯ರ ಆಡಳಿತದಲ್ಲಿ ಕುಟೀಲ ತಂತ್ರಗಾರಿಕೆ, ನಯವಂಚಕತನ, ಕೋಮುವಾದಿತನ , ಫ್ಯಾಸಿಸ್ಟ್ ನೀತಿಗಳು ಹೆಚ್ಚಾಗಿ ಬಂಡವಾಳಶಾಹಿ, ಬಹುರಾಷ್ಟ್ರೀಯ ಕಂಪನಿಗಳ ಪರವಾದ ನೀತಿಗಳು ಹಾಗೂ ರೈತ ಕಾರ್ಮಿಕ, ಜನಸಾಮಾನ್ಯರ ವಿರೋಧಿ ನೀತಿಗಳ ವಿರುದ್ದ ಸಂಸತ್ತಿನ ಒಳಗೆ ಮತ್ತು ಹೊರಗೆ ದಿಟ್ಟತನ ದಿಂದ ಸಿಪಿಐ(ಎಂ) ಪಕ್ಷ  ಸೀತಾರಾಮಯೆಚೂರಿರವರು ಹೋರಾಟ ಮಾಡುತ್ತಿದ್ದು ಇದನ್ನು ಸಹಿಸದ ಬಿಜೆಪಿ ಹಾಗೂ ಆರ್ ಎಸ್ಎಸ್ ಮುಖಂಡರು ಹಲ್ಲೆಗೆ ಯತ್ನ ನಡೆಸಿದ್ದಾರೆ  ಎಂದುಆರೋಪಿಸಿದ್ದರು. ಇದಲ್ಲದೆ ಮಧ್ಯಪ್ರದೇಶ ದಲ್ಲಿ  ಒಂದು ವಾರದಿಂದ ರೈತರು  ಸಾಲ ಮನ್ನಾಕ್ಕಾಗಿ ಮತ್ತು ಈರುಳ್ಳಿ ಬೆಲೆ ಸೇರಿದಂತೆ ಇತರೆ ಬೆಳೆಗಳಿಗೆ ಬೆಂಬಲ ಬೆಲೆ ಗಾಗಿ ಒತ್ತಾಯಿಸಿ ಹೋರಾಟ ಮಾಡುತ್ತಿದ್ದ 6 ರೈತರ ಹತ್ಯೆ ಮಾಡಿರುವ ಬಿಜೆಪಿ ಸಕಾ೯ರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವಣ್ ರವರು ಕೂಡಲೇ ರಾಜೀನಾಮೆ ನೀಡುವಂತೆ  ಎಂದು ಒತ್ತಾಯಿಸಿದರು.     ಪ್ರತಿಭಟನೆಯಲ್ಲಿ  ಪ್ರಾಂತ ರೈತ. ಸಂಘದ ಭರತ್ ರಾಜ್, ಸಿಪಿಐಎಂ ಜಿ ರಾಮಕೃಷ್ಣ, ಸುನೀತಾ.ಗುರುಸ್ವಾಮಿ. ಕೃಷ್ಣೇಗೌಡ,  ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here