ಸಿಪಿಐಎಂ ಕಾರ್ಯಕರ್ತರ ದಿಢೀರ್ ಪ್ರತಿಭಟನೆ

0
311

ಬಳ್ಳಾರಿ /ಹೊಸಪೇಟೆ: ರಾಜ್ಯಸಭಾ ಸದಸ್ಯ ಸೀತಾರಾಮ್ ಯೆಚೂರಿ ಮೇಲಿನ ದಾಳಿಯನ್ನು ಖಂಡಿಸಿ, ಸಿಪಿಐಎಂ ಕಾರ್ಯಕರ್ತರು, ರೋಟರಿ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ನಗರದ ಶ್ರಮಿಕ ಭವನದಿಂದ ಮೆರವಣಿಗೆ ಮುಖಾಂತರ ಹೊರಟು ರೋಟರಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ರಾಜ್ಯಸಭಾ ಸದಸ್ಯ ಸೀತಾರಾಮ್ ಯೆಚೂರಿ, ನಡೆಸುತ್ತಿದ್ದ ಪತ್ರಿಕಾಗೋಷ್ಠಿಯಲ್ಲಿ ದಾಳಿ ನಡೆಸಿದ ಸಂಘ ಪರಿವಾರ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಕ್ರಮವನ್ನು ಖಂಡಿಸಿದರು.

ದಲಿತ ಹಕ್ಕುಗಳ ಹೋರಾಟ ಸಮಿತಿಯ ಮುಖಂಡ ಎಂ.ಜಂಬಯ್ಯನಾಯಕ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬರುವ ಪೂರ್ವದಲ್ಲಿ ಬ್ರಿಟೀಷರ ಏಜೆಂಟರಂತೆ ವರ್ತಿಸಿದ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ಢೋಂಗಿ ಭಕ್ತರು ದೇಶಭಕ್ತಿಯ ಹೆಸರಿನಲ್ಲಿ ದೊಂಬಿ, ಗಲಭೆಗೆ ಇಳಿದಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಬಂದ ನಂತರ ದೇಶದಲ್ಲಿ ಕೋಮುವಾದಿಗಳ ಅಟ್ಟಹಾಸ ಮಿತಿಮೀರಿದೆ. ಕೂಡಲೇ ಕೋಮುವಾದಿ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರಗಳನ್ನು ನಿಷೇಧಿಸಬೇಕು ಎಂದರು.

ವಕೀಲ ಎ.ಕರುಣಾನಿಧಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದಾಳಿ ನಡೆಸುತ್ತಿರುವ ಕೋಮುವಾದಿ ಸಂಘಟನೆಗಳು ಸಂವಿಧಾನ ಬಾಹೀರ ಕೃತ್ಯಗಳಿಗೆ ಇಳಿದಿವೆ.  ಪಕ್ಷಗಳ ಕಛೇರಿಗಳ ಮೇಲೆ ದಾಳಿ ಮಾಡುವುದು, ಬೆಂಕಿ ಹಚ್ಚುವುದು, ಮುಖಂಡರ ಮೇಲೆ ಹಲ್ಲೆ ಮಾಡುವುದು, ಕೇರಳ ರಾಜ್ಯದ ಮುಖ್ಯಮಂತ್ರಿಗಳ ತಲೆ ಕಡಿಯಲಾಗುವುದು ಎನ್ನುವ ಸಾರ್ವಜನಿಕ ಹೇಳಿಕೆಗಳನ್ನು ಕೊಡುವುದು ಸೇರಿದಂತೆ ಸಂವಿಧಾನ ವಿರೋಧಿ ಕೃತ್ಯಗಳಿಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಹಿಂಸಾಚಾರ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುವ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕೋಮುವಾದಿಗಳು ಗಾಳಿಗೆ ತೂರುತ್ತಿವೆ. ಇಂತಹ ವಾತಾವರಣ ದೇಶಕ್ಕೆ ಮಾರಕ ಎಂದು ಹರಿಯ್ದರು.

ಡಿವೈಎಫ್‌ಐ ಜಿಲ್ಲಾ ಮುಖಂಡ ಮಹೇಶ್ ಮಾತನಾಡಿ, ಪಕ್ಷದ ಕೇಂದ್ರ ಕಛೇರಿಗೆ ಅಕ್ರಮವಾಗಿ ಪ್ರವೇಶಿಸಿ ರಾಜ್ಯಸಭಾ ಸದಸ್ಯ ಸೀತಾರಂ ಯಚೂರಿಯವರ ಮೇಲೆ ದಾಳಿ ಮಾಡುವಷ್ಟರ ಮಟ್ಟಿಗೆ ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳು ಮುಂದುವರೆದಿವೆ. ಗುಂಡಾಗಿರಿ, ಹತ್ಯೆ, ದಾಳಿಗಳಿಗೆ ಇಳಿದಿರುವ ಫ್ಯಾಸಿಸಂ ದಾಳಿಗಳನ್ನು ಡಿವೈಎಫ್‌ಐ ಸಂಘಟನೆ ಉಗ್ರವಾಗಿ ಖಂಡಿಸುತ್ತದೆ ಎಂದರು.

ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡ ಯಲ್ಲಾಲಿಂಗ, ಎಂ.ಗೋಪಾಲ, ಚನ್ನಬಸಯ್ಯ, ಕೆ.ಎಂ. ಸಂತೋಷ್, ಕಲ್ಯಾಣಯ್ಯ, ಮಧುರ ಚೆನ್ನಶಾಸ್ತ್ರಿ, ಜೆ.ಪ್ರಕಾಶ್, ತಿರುಪತಿ, ಅನಂತಶಯನ, ಸಿದ್ಧಲಿಂಗೇಶ, ವಸಂತ ಕಲಾಲ್, ರುದ್ರಪ್ಪ, ಟಿ.ಚಂದ್ರಶೇಖರ್, ಕೆ.ಮೂರ್ತಿ, ಎಲ್.ರವಿ, ಹನುಮಂತ, ಶ್ರೀನಾಥ ಇದ್ದ

LEAVE A REPLY

Please enter your comment!
Please enter your name here