ಸಂಚಾರಿ ಪೋಲಿಸಪ್ಪನಿಗೆ ತರಾಟೆ

0
338

ಬಳ್ಳಾರಿ / ಬಳ್ಳಾರ : ವಾಹನ ಚಾಲಕರಿಗೆ ಪೋಲಿಸರು ಪರವಾನಿಗೆ ಸಭ್ಯತೆಯಿಂದ ಕೇಳಿ ಪಡೆದು ಪರಿಶೀಲನೆ ನಡೆಸುವುದು ಸಾಮಾನ್ಯ. ಅದ್ರೇ ಇಲ್ಲೊಬ್ಬ ಸಂಚಾರಿ ಪೇದೆ ಚಾಲಕನ ಪರವಾನಿಗೆಯನ್ನು ಅವಾಚ್ಯ ಶಬ್ದಗಳಿಂದ ಕೇಳಿ ನಿಂದಿಸಲ್ಲದೆ ದರ್ಪ ಮೆರೆದಿರುವ ಘಟನೆ ಬಳ್ಳಾರಿ ಮೋತಿ ವೃತ್ತದ ಬಳಿ ನಡೆದಿದೆ. ಮೋತಿ ವೃತ್ತದಲ್ಲಿ ರಷೀದ್ ಎಂಬುವರಿಗೆ ಪರವಾನಿಗೆ ಕೇಳಿದ ಹಿನ್ನಲೆಯಲ್ಲಿ ಅವರು ಪರವಾನಿಗೆಯನ್ನು ವಾಹನದ ಮೇಲೆ ಕೂತು ನೀಡಿದ್ದಾರೆ. ಆಕ್ರೋಶ ಗೊಂಡ ಪೇದೆ ವಾಹನದಿಂದ ಕೇಳಗೆ ಇಳಿದು ಡಿಎಲ್ ತೋರಿಸುವಂತೆ ಅವಾಚ್ಯ ಶಬ್ದಗಳಿಂದ ಸತತವಾಗಿ ನಿಂದಿಸಿದ್ದಾನೆ. ಕೂಪಿತಗೊಂಡ ವಾಹನ ಚಾಲಕ ರಷೀದ್ ಮತ್ತು ಪೋಲಿಸಪ್ಪನ ಮಧ್ಯೆ ಕೆಲ ಕಾಲ ವಾಗ್ವಾದ ಏರ್ಪಟ್ಟಿತ್ತು. ನಂತರ ಸ್ಥಳದಲ್ಲಿ ಜಮಾಯಿಸಿದ ಜನ್ರು ಪೋಲಿಸಪ್ಪ ಕ್ಷಮೇ ಕೇಳುವಂತೆ ಅಗ್ರಹಿಸಿದರು.ಕೊನೆಗೂ ಮಣಿದ ಪೇದೆ ಕ್ಷಮೇಯಾಚಿಸಿದ್ದಾನೆ. ಇನ್ನೂ ತನ್ನ ಹೆಸರು ಇರುವ ಬ್ರ್ಯಾಡ್ಜ್ನು ತೆಗೆದು ಕಿಸೆಯಲ್ಲಿ ಇರಿಸಿದರಿಂದ ಹೆಸರು ತಿಳಿದುಬಂದಿಲ್ಲ.

LEAVE A REPLY

Please enter your comment!
Please enter your name here