ರೈತನಿಗೆ ಬಂತು ೧ ರೂಪಾಯಿ ಬೆಳೆಹಾನಿ ಪರಿಹಾರ

0
115

ಬಾಗಲಕೋಟೆ:/ಸೋಮಲಾಪೂರ: ಗ್ರಾಮದಲ್ಲಿ ಘಟನೆ‌. ಬೆಳೆಹಾನಿ ಪರಿಹಾರ ನಿರೀಕ್ಷೆಯಲ್ಲಿದ್ದ ರೈತರೊಬ್ಬರಿಗೆ ಕೇವಲ ಒಂದು ರೂಪಾಯಿ ಜಮಾ ಆಗುವುದರ ಮೂಲಕ ಅಚ್ಚರಿ ಮೂಡಿಸಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೋಲಾಪೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುರೇಶ ಎಂಬಾತನೇ ೧ ರೂಪಾಯಿ ಪರಿಹಾರ ಪಡೆದ ರೈತ. ರೈತ ಸುರೇಶನಿಗೆ ೧೦,೮೦೦ ರೂಪಾಯಿ ಬೆಳೆ ಹಾನಿ ಪರಿಹಾರ ಬರಬೇಕಿತ್ತು. ಆದ್ರೆ ಬ್ಯಾಂಕ್ ಗೆ ಹೋಗಿ ಚೆಕ್ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ರೈತ ಅಚ್ಚರಿಗೊಂಡಿದ್ದಾನೆ. ಈ ಮದ್ಯೆ ತಹಶೀಲ್ದಾರ ಸಂಪಗಾಂವಿ ಅವರನ್ನು ರೈತ ಸಂಪಕಿ೯ಸಿದ್ದು, ತಾಂತ್ರಿಕ ದೋಷದ ಕಾರಣ ಈ ರೀತಿಯಾಗಿದ್ದು, ಸರಿಪಡಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಮಧ್ಯೆ ೨೦ ಜನ ರೈತರಿಗೂ ಇದೇ ರೀತಿಯಾಗಿದೆ ಆರೋಪ ಕೇಳಿ ಬಂದಿದೆ.

LEAVE A REPLY

Please enter your comment!
Please enter your name here