ಕಾವಲು ಸಮಿತಿ ಉದ್ಘಾಟನಾ ಕಾರ್ಯಕ್ರಮ.

0
212

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ತಾಲ್ಲೂಕಿನ ಆನೂರು ಗ್ರಾಮದಲ್ಲಿ ನೂತನ ಪಂಚಾಯಿತ್ ಕಾವಲು ಸಮಿತಿ ಉದ್ಘಾಟನಾ ಕಾಯ೯ಕ್ರಮ ಆನೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ನಡೆಯಿತು.
ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಂಚಾಯಿತಿ ಕಾವಲು ಸಮಿತಿಯ ರಾಜ್ಯದ್ಯಕ್ಷ , ಜನರಿಗೆ ತಲುಪಬೇಕಾದ ಸೌಲಭ್ಯಗಳು ಸರಿಯಾಗಿ ತಲುಪುವ , ಮತ್ತು ಪಂಚಾಯಿತಿಗಳಲ್ಲಿನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟಲು ಪಂಚಾಯಿತಿ ಕಾವಲು ಸಮಿತಿ ರಚಿಸಿದ್ದು, ನಮ್ಮ ಸಮಿತಿಯು ಜನಗಳ ಹಕ್ಕುಗಳ ಪರ ಹೋರಾಡಲಿದೆ. ಯಾವುದೇ ಪ್ರಭಾವಿ ವ್ಯಕ್ತಿಗಳಿಗೆ , ಭಷ್ಟಾಚಾರಕ್ಕೆ ಬೆದರಿಕೆಗೆ , ಯಾವುದೇ ಆಮಿಶಾಗಳಿಗೆ ಹೆದರದೆ ಕೆಲಸ ಮಾಡುವುದು ನಮ್ಮ ಸಮಿತಿಯ ಉದ್ದೇಶ ಎಂದು ಹೇಳಿದರು.

ಇದೇ ಸಂದಭ೯ದಲ್ಲಿ ತಾಲ್ಲೂಕು ಕಾಯ೯ನಿವ೯ಹಣಾಅಧಿಕಾರಿ ವೆಂಕಟೇಶ್, ಆನೂರು ಪ.ಕಾ. ಸಮಿತಿ ಅಧ್ಯಕ್ಷ ಅಶ್ವಥನಾರಾಯಣ, ಹಾಸನ ಜಿಲ್ಲಾಧ್ಯಕ್ಷ ಬಸವರಾಜಪ್ಪ , ಶಿಡ್ಲಘಟ್ಟ ತಾಲ್ಲೂಕು ಪ.ಕಾ. ಸಮಿತಿ ಅಧ್ಯಕ್ಷ ಎಂ.ಎನ್.ನಾಗಭೂಷಣ್, ಉಪಾಧ್ಯಕ್ಷ, ಎಂ. ಮನೀಷ್, ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here