ಟವರ್ ನಿರ್ಮಾಣಕ್ಕೆ ತೀವ್ರ ವಿರೋಧ

0
128

ಬೆಂಗಳೂರು/ಮಹದೇವಪುರ : ಜನವಸತಿ ಬಡಾವಣೆಯಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮೊಬೈಲ್ ಟವರ್ ಅಳವಡಿಸುವುದನ್ನು ಬಳಸ ಬಾರದೆಂದು ನ್ಯಾಯಾಲಯ ಸ್ಪಷ್ಟವಾದ ಆದೇಶ ನೀಡಿದ್ದರೂ ಸಹ ಮಾರತ್ಹಳ್ಳಿ ಬಳಿಯ ಅಯ್ಯಪ್ಪ ಬಡಾವಣೆಯಲ್ಲಿ ಒಡಾಫೋನ್ ಟವರ್ ಅಡಲಡಿಸಲು ಮುಂದಾಗಿರುವುದನ್ನು ವಿರೋಧಿಸಿ ಸ್ಥಳಿಯರು ಪ್ರತಿಭಟನೆ ನಡೆಸಿದರು.

ಮಹದೇವಪುರ ಕ್ಷೇತ್ರದ ಮಾರತ್ಹಳ್ಳಿಯ ಅಯ್ಯಪ್ಪಲೇಔಟ್ನಲ್ಲಿ  ಜನರ ವಿರೋಧದ ನಡುವೆಯೂ ಗಜೇಂದ್ರ ರೆಡ್ಡಿರವರು ತಮ್ಮ ಮನೆ ಮೇಲೆ ಮೊಬೈಲ್ ಟವರ್ ಅಲವಡಿಸುತ್ತಿದ್ದಾರೆ, ಸಂಬಂಧ ಪಟ್ಟ ಅಧೀಕಾರಿಗಳಿಗೆ ದೂರು ನೀಡಿದರೂ ರಾಜಾರೋಷವಾಗಿ ನಿರ್ಮಿಸಲಾಗುತ್ತಿದೆ, ಎಂದು ಆರೋಪಿಸಿ  ಪ್ರತಿಭಟನೆ ನಡೆಸಿದರು.

ಸ್ಥಳೀಯ ನಾಗರಿಕರು ಮೊಬೈಲ್ ಟವರ್ನಿಂದಾಗುವ ದುಷ್ಪರಿಣಾಮಗಳಿಂದ ಆಗಬಹುದಾದ ತೊಂದರೆಗಳ ಬಗ್ಗೆ ಬಿಬಿಎಂಪಿ ಜಂಟಿ ಆಯುಕ್ತರ ಬಳಿ ಈಗಾಗಲೇ ಮನವಿ ಸಲ್ಲಿಸಿದ್ದಾರೆ ಜಂಟಿ ಆಯುಕ್ತರು, ಮನೆ ಮಾಲೀಕರಿಗೆ ಟವರ್ ನಿರ್ಮಾಣ ಮಾಡದಂತೆ ಸೂಚಿಸಿದ್ದರೂ ಟವರ್ ನಿರ್ಮಾಣ ದಲ್ಲಿ ತೊಡಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ರಾಮರೆಡ್ಡಿ  ಈ ಭಾಗದಲ್ಲಿ ಈಗಾಗಲೇ 6 -7 ವರ್ಷಗಳಿಂದ ಟಾಟಾ ಡೊಕೊಮೋ ಟವರ್ ಕಾರ್ಯ ನಿರ್ವಹಿಸುತ್ತಿದೆ, ಅದರಿಂದ ಅನೇಕ ರೀತಿಯ ತೊಂದರೆಗಳಾಗುತ್ತಿದ್ದು ಸ್ವತಃ  ಟವರ್ ಬಳಸಿದ ಮನೆ ಮಾಲೀಕರಿಗೆ  ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ, ಟವರ್ ತೆಗೆಸಲು ಮುಂದಾಗಿರುವುದಾಗಿ ತಿಳಿಸಿದರು. ಆದರೆ 15 ವರ್ಷಗಳ ಅಗ್ರಿಮೆಂಟ್ ಮಾಡಿಕೊಂಡಿರುವುದನ್ನು ಲೆಕ್ಕಿಸದೆ ಟಾಟಾ ಡೊಕೊಮೋ ಕಂಪೆನಿಗೆ ಕೂಡಲೆ ಟವರ್ ಬದಲಾಯಿಸುವಂತೆ ಕೋರಿದ್ದು, ಮತ್ತೆ ಈ ಭಾಗದಲ್ಲಿ ಇನ್ನೊಂದು ಟವರ್ ನಿರ್ಮಿಸಿ ಇಲ್ಲಿ ವಾಸಿಸುವ ಗರ್ಭಿಣಿ ಹೆಂಗಸರು ಮತ್ತು ಮಕ್ಕಳಿಗೆ ಆಗಬಹುದಾದ ದುಷ್ಪರಿಣಾಮಗಳನ್ನು ತಪ್ಪಿಸಬೇಕೆಂದು ಮನವಿ ಮಾಡಿದರು.

ಸ್ಥಳೀಯ ನಿವಾಸಿಯಾದ ಸುದಾರವರು ಮಾತನಾಡಿ ಮೊಬೈಲ್ ಟವರ್ ಅಲೆಗಳು ಮಕ್ಕಳ ಮೇಲೆ ದುಷ್ಪರಿನಾಮ ಬೀರುತ್ತದೆ ಎಂದು ಸಕರ್ಾರ ನಿರ್ಭಂದ ಹೇರಿದ್ದರೂ ಟವರ್ ನಿರ್ಮಾಣದಲ್ಲಿ ತೊಡಗಿರವುದು ಅವರ ಸ್ವಾರ್ಥಕ್ಕಾಗಿ ಎಂದು ಆಪಾಧಿಸಿದರು. ಕೂಡಲೆ ನಿರ್ಮಾಣ ಮಾಡುತ್ತಿರುವ ಟವರ್ ಕಾಮಗಾರಿ ನಿಲ್ಲಸಿ ಆಗಬಹುದಾದ ತೊಂದರೆ ತಪ್ಪಿಸಬೆಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ. ಈಗಾಗಲೇ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕರು ಹಾಗು ಪಾಲಿಕೆ ಆರೋಗ್ಯಾಧಿಕಾರಿಗಳಲ್ಲಿ ದೂರು ಸಲ್ಲಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜನಾರ್ಧನ್ ರೆಡಿ, ಚಂದ್ರಾರೆಡ್ಡಿ, ನವೀನ್, ಸುಧಾ, ತೇಜಸ್ವಿ, ಸುರೆಸ್, ಶಿವಮ್, ಮೋಹನ್ ರೆಡ್ಡಿ ಸೇರಿದಂತೆ ಮತ್ತಿತರರಿದ್ರು.

 

LEAVE A REPLY

Please enter your comment!
Please enter your name here