ರೈತರ ಮೇಲೆ ದೌರ್ಜನ್ಯ

0
169

ತಿಂಗಳಾದರೂ ಬಿಡುಗಡೆಯಾಗಿಲ್ಲ ರೈತರ ಜಾನುವಾರುಗಳು

ತುಮಕೂರು/ಗುಬ್ಬಿ: ಗೋ ರಕ್ಷಣೆ ಹೆಸರಲ್ಲಿ ಧ್ಯಾನ್ ಪೌಂಡೇಷನ್ ನ ಗೋ ಶಾಲೆಯವರಿಂದ ರೈತರ ಮೇಲಿನ ದೌರ್ಜನ್ಯ ಮುಂದುವರೆದಿದೆ. ಈ ಗೋ ಶಾಲೆಯಲ್ಲಿ ಬಂಧಿಯಾಗಿದ್ದ ಬೆಳಗಾವಿ ಜಿಲ್ಲೆಯ ರೈತರ ಜಾನುವಾರುಗಳು ಇನ್ನೂ ಬಿಡುಗಡೆಯಾಗಿಲ್ಲ. ತಮ್ಮ ಹಸುಗಳಿಗಾಗಿ ರೈತರು ಹೆಂಡತಿ- ಮಕ್ಕಳ ಸಮೇತ ಬಂದು ಗೋ ಶಾಲೆ ಎದುರು ರೋಧಿಸುತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಊಟ ನಿದ್ದೆ ಇಲ್ಲದೆ ರೈತರು ಕಣ್ಣೀರಿಡುತಿದ್ದಾರೆ. ಹಸುಗಳನ್ನು ಬಿಡುವಂತೆ ಕೋರ್ಟ ಆದೇಶವಾದ್ರೂ ಧ್ಯಾನ್ ಪೌಂಡೇಷನ್ ರವರು ಕ್ಯಾರೇ ಅನ್ನುತಿಲ್ಲ. ಇನ್ನೂ ಜಾನುವಾರುಗಳನ್ನು ಬಿಡಿಸಿ ಕೊಡಬೇಕಾದ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ರೈತರ ಸಂಕಷ್ಟದ ಅರಿವಿದ್ದರೂ ದಿವ್ಯ ನಿರ್ಲಕ್ಷ ತೋರಿದ್ದಾರೆ. ಖಸಾಯಿ ಖಾನೆಗೆ ಸಾಗಿಸುತಿದ್ದಾರೆ ಎಂಬ ಆರೋಪದ ಮೇಲೆ ಮೇ ೨೫ ರಂದು ೪೦ ಹಸುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ವರದಿ: ವಿ.ಬಿ

LEAVE A REPLY

Please enter your comment!
Please enter your name here