ಕರ್ತವ್ಯ ನಿಷ್ಟೆಗೆ ಮತ್ತೊಂದು ಹುದ್ದೆ

0
284

ಬೆಂಗಳೂರು/ದೊಡ್ಡಬಳ್ಳಾಪುರ: ಪ್ರಸ್ತುತ ಕೇಂದ್ರ ರೇಷ್ಮೆ ಮಂಡಳಿ ಆಧ್ವಕ್ಷರಾದ ಕೆ.ಎಂ.ಹನುಮಂತರಾಯಪ್ಪ ರವರು ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ಆಫ್ ಇಂಡಿಯಾದ (SMOI) ಅಧ್ಯಕ್ಷರಾಗಿ ಮತ್ತೊಂದು ಅಧಿಕಾರ ಸ್ವೀಕರಿಸಿದ್ದಾರೆ. ಈ ಸರಳ ಸಮಾರಂಭದಲ್ಲಿ ಮೇಲ್ಕಂಡ ಸಂಸ್ಥೆಯ ಅಧಿಕಾರಿಗಳು ಮತ್ತು ದೊಡ್ಡಬಳ್ಳಾಪುರ ನಗರದ ಮುಖಂಡರು ಹಾಜರಿದ್ದರು.

ವಿಶೇಷ ಎಂದರೆ ಇವರ ದಶಕಗಳ ರಾಜಕೀಯ ಜೀವನದಲ್ಲಿ ಯಾವುದೇ ಹುದ್ದೆಯ ಅಧಿಕಾರದ ಹಿಂದೆ ಬೀಳದೆ ಭಾರತೀಯ ಜನತಾ ಪಕ್ಷದ ಏಳ್ಗೆಗೆ ಶ್ರಮಿಸುತ್ತಾ ತಾನಾಯ್ತು ತನ್ನ ಕೆಲಸವಾಯ್ತು ಎಂದು ಶರಣರ ನುಡಿ ಕಾಯಕವೇ ಕೈಲಾಸ ಎಂಬಂತೆ ಕಾಯಕಯೋಗಿಯಾಗಿ ನೇಯ್ಗೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಇವರು ಜೀವನ ರೂಪಿಸಿಕೊಂಡು ಸರಳ ಸಜ್ಜನಿಕೆಯನ್ನು ಅಳವಡಿಸಿಕೊಂಡವರು.ಕೆಎಂ.ಹನುಮಂತರಾಯಪ್ಪ ದೊಡ್ಡಬಳ್ಳಾಪುರ ನಗರಸಭೆಗೂ ಹಲವುಬಾರಿ ಸದಸ್ಯರಾಗಿ ಆಯ್ಕೆಯಾಗಿ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದಾರೆ ಮತ್ತು ಯಡ್ಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಇವರ ಪಕ್ಷ ನಿಷ್ಟೆ ಗೆ ಕೆಎಂಹೆಚ್ ರನ್ನು ರಾಜ್ಯ ರೇಷ್ಮೆಮಾರಾಟ ಮಂಡಳಿ ಅಧ್ಯಕ್ಷರನ್ನಾಗಿಸಿ ಅಧಿಕಾರವಹಿಸಿದ್ದರು.ಸುಸೂತ್ರವಾಗಿ ಅಧಿಕಾರ ನಡೆಸಿದ ಇವರ ಆಡಳಿತಾವಧಿಯಲ್ಲಿ ಮಂಡಳಿಯು ಸಾಕಷ್ಟು ಆರ್ಥಿಕ ಸುಧಾರಣೆಕಂಡು ಅಭಿವೃದ್ಧಿ ಹೊಂದುವಂತಾಗಿದೆ.ಒಂದು ಮುಖ್ಯವಿಚಾರ ಇವರ ಅಧಿಕಾರಾವಧಿಯಲ್ಲಿ ತಮಗೆ ಸರ್ಕಾರ ನೀಡುವ ಅಷ್ಟೂ ಗೌರವದನವನ್ನು ಅವರ ಸಹಪಾಟಿಗಳಾದ ಬಿಜೆಪಿ ಪಕ್ಷದ ದಶಕಗಳಿಂದ ಪಕ್ಷಕ್ಕಾಗಿ ಹಗಳಿರುಲು ದುಡಿದ ಕಾರ್ಯಕರ್ತರಿಗಾಗಿ ಮೀಸಲಿಟ್ಟು ಅವರನ್ನು ಸನ್ಮಾನಿಸಿ ಆರ್ಥಿಕ ಸಹಕಾರ ನೀಡಿದ ಮಹಾನ್ ವ್ಯಕ್ತಿ.ದೊಡ್ಡಬಳ್ಳಾಪುರದಲ್ಲಿ ಈತನನ್ನು ಹತ್ತಿರದಿಂದ ಬಳ್ಳವರು ಸಾಕಷ್ಟು ಜನ ಇವರಿಗೆ ನೀಡಿವ ಬಿರುದು “ದೊಡ್ಡಬಳ್ಳಾಪುರದ ವಾಜಿಪೇಯಿ” ಇಂತಹ ವ್ಯಕ್ತಿಯನ್ನು ಗುರುತಿಸಿದ ಪ್ರಧಾನ ಮಂತ್ರಿ ನರೇಂದ್ರಮೋದಿ ಆಡಳಿತದ ಕೇಂದ್ರಸರ್ಕಾರ ಕೆಎಂ.ಹನುಮಂತರಾಯಪ್ಪ ನವರಿಗೆ ಹತ್ತು ತಿಂಗಳ ಹಿಂದೆಯಷ್ಟೇ ಕೇಂದ್ರ ರೇಷ್ಮೆಮಂಡಳಿ ಅಧ್ಯರನ್ನಾಗಿ ಅಧಿಕಾರನೀಡಿತ್ತು,ಆ ದಿನ ಕೆಎಂ.ಹೆಚ್ ರವರಿಗೆ ನನಗೆ ಕೇಂದ್ರ ಸರ್ಕಾರ ಅಧ್ಯಕ್ಷಗಿರಿ ನೀಡಿತೆ ಎಂಬ ಆಶ್ಚರ್ಯ ವ್ಯಕ್ತಪಡಿಸಿದ್ದುಂಟು ಆದರೇ ಕೇಂದ್ರ ಸರ್ಕಾರ ನೀಡಿದ ಅಧಿಕಾರವನ್ನು ಎಲ್ಲೂ ದುರುಪಯೋಗ ಪಡೆಸಿಕೊಳ್ಞದೇ ಹಗಳಿರುಲು ದೇಶದ ಮೂಲೆ ಮೂಲಯಲ್ಲಿ ಸುತ್ತುತ್ತಾ ರೇಷ್ಮೇ ಬೆಳೆಗಾರ ರೈತರ ಕುಂದು ಕೊರತೆಗಳನ್ನು ಆಳಿಸಿ ಅವರ ಸಮಸ್ಯೆಗಳನ್ನು ಬಗೆಹರಿಸುವಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡ ಇವರು ಮೂಲತಹ ರೈತಕುಟುಂಬದಿಂದ ಬಂದವರೇ ಎಂಬುದು ಇಲ್ಲಿ ಶ್ಮರಿಸಲೇ ಬೇಕು.

ಒಟ್ಟಾರೆ ಹೇಳ ಬೇಕೆಂದರೆ ಇವರ ಶ್ರಮಕ್ಕೆ ಮತ್ತು ಕರ್ತವ್ಯ ನಿಷ್ಟೆಗೆ ತಕ್ಕ ಅಧಿಕಾರ ಮತ್ತು ಮತ್ತೊಂದು ಅಧಿಕಾರವನ್ನು ನೀಡಿದ ಕೇಂದ್ರ ಸರ್ಕಾರದ ನಿರ್ಧಾರ ಸೂಕ್ತವಾಗಿದೆ.ಮತ್ತು ಸ್ವಾಗತಾರ್ಹವಾಗಿದೆ ಎಂದರೆ ತಪ್ಪಾಗಲಾರದು.

LEAVE A REPLY

Please enter your comment!
Please enter your name here