ಬೈಕ್ ರೈಡ್ ಮೂಲಕ ಹಂಪಿಗೆ…

0
413

ಬಳ್ಳಾರಿ /ಹೊಸಪೇಟೆ:ಒತ್ತಡ ಬದುಕು, ಟ್ರಾಫಿಕ್ ಸಮಸ್ಯೆಗೆ ಬೇಸತ್ತ ಬೆಂಗಳೂರಿಗರು, ಸಾಲು ರಜೆ ಹಿನ್ನಲೆಯಲ್ಲಿ ಬೈಕ್ ರೈಡ್ ಮೂಲಕ ಐತಿಹಾಸಿಕ ಹಂಪಿಗೆ ಬೇಟಿ ನೀಡಿ, ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು.

ಸಾಲು, ಸಾಲು ರಜೆಯ ಹಿನ್ನಲೆಯಲ್ಲಿ ತಮ್ಮ ಪರಿವಾರ ಸಮೇತ ಹಂಪಿಯ ಕಡೆ ಮುಖ ಮಾಡಿದ ಹತ್ತಾರು ಕುಟಂಬದ ಸದಸ್ಯರು, ಪ್ರೀ ರ್ಸ್ಪೈಟ್ ಮೋಟರ್ ಸೈಕಲ್ ಕ್ಲಬ್‌ವತಿಯಿಂದ ಬೆಂಗಳೂರಿನಿಂದ ಬೈಕ್ ಮೂಲಕ ಹಂಪಿಗೆ ಪ್ರವಾಸ ಕೈಗೊಂಡರು.

ಸಾಲು ರಜೆ ಬರುತ್ತಿದಂತಯೇ ಪ್ರೇಕ್ಷಣೀಯ ಸ್ಥಳಗಳಿಗೆ ಬೇಡಿ ನೀಡು ಪರಿಪಾಠವನ್ನು ರೂಢಿಸಿಕೊಂಡಿರುವ ಇವರು, ಇದೀಗ ತಮ್ಮ ಕುಟುಂಬದ ಸದಸ್ಯರೊಂದಿಗೆ ಕಳೆದ ಎರಡು ದಿನಗಳಿಂದ ಹಂಪಿಯಲ್ಲಿ ವ್ಯಾಸ್ತವ್ಯ ಹೂಡಿದ್ದಾರೆ.

ಪತ್ನಿ ಮಕ್ಕಳು, ಬಂಧು-ಮಿತ್ರರೊಂದಿಗೆ ಹಂಪಿಯ ಪ್ರಸಿದ್ಧ ಸ್ಮಾರಕಗಳಿಗೆ ಬೇಟಿ ನೀಡಿ, ಸಂಭ್ರಮಿಸಿದರು.

ವಿಜಯ ವಿಠಲ, ಗೆಜ್ಜಲ ಮಂಟಪ, ರಾಣಿ ಸ್ನಾನ ಗೃಹ, ಪುಷ್ಕರಣಿ, ಮಹಾನವಮಿ ದಿಬ್ಬ, ಕಮಲ ಮಹಲ್, ಗಜಶಾಲೆ, ಉಗ್ರನರಸಿಂಹ, ಬಡವಿಲಿಂಗ ಹಾಗೂ ವಿರೂಪಾಕ್ಷೇಶ್ವರ ದೇವಾಲಯವನ್ನು ವೀಕ್ಷಣೆ ಮಾಡುವ ಮೂಲಕ ತಮ್ಮ ಬೇಸರವನ್ನು ದೂರ ಮಾಡಿಕೊಂಡರು.

ಒಟ್ಟು 28 ಬೈಕ್ ಹಾಗೂ 5 ಕಾರುಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಜನರು, ಹಂಪಿಯಲ್ಲಿ ತಮ್ಮ ರಜೆ ದಿನಗಳ ಖುಷಿ ಅನುಭವಿಸಿ, ಬೆಂಗಳೂರಿಗೆ ಮರಳಿದರು.

LEAVE A REPLY

Please enter your comment!
Please enter your name here