ತಹಶೀಲ್ದಾರಿಂದ ಸಾಂತ್ವಾನ…

0
128

ಬಳ್ಳಾರಿ/ಹೂವಿನಹಡಗಲಿ :ಹೊಳಲು ಗ್ರಾಮದಲ್ಲಿ ಸಾಲಬಾದೆಯಿಂದ ಮೃತಪಟ್ಟ ರೈತನ ಮನೆಗೆ ತಹಶೀಲ್ದಾರ ರಾಘವೇಂದ್ರರಾವ್. ಕಂದಾಯ ನೀರೀಕ್ಷಕ ಮಹಮ್ಮದ್ ಅಲಿ, ಗ್ರಾಮ ಲೆಕ್ಕಾಧಿಕಾರಿ ದ್ಯಾಮಣ್ಣ, ಕೃಷಿ ಅಧಿಕಾರಿ ಶಿವಮೂರ್ತಿನಾಯ್ಕ್, ಜಿ.ಪಂ ಸದಸ್ಯ ಕೊಟ್ರೇಶ, ತಾ.ಪಂ ಸದಸ್ಯ ಬಸವರಾಜ, ಗ್ರಾ.ಪಂ ಅಧ್ಯಕ್ಷ ಹನುಮಂತಪ್ಪ ಹಾಗೂ ಮಾಜಿ ಶಾಸಕ ಚಂದ್ರನಾಯ್ಕ ಬೇಟಿನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರಲ್ಲದೆ. ತಹಶೀಲ್ದಾರ ರಾಘವೇಂದ್ರರಾವ್ ಮಾತನಾಡಿ ದಯಮಾಡಿ ರೈತರು ಸಾಲಕ್ಕೆ ಅಂಜಿ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು, ಆತ್ಮಹತ್ಯಯೊಂದೆ ಪರಿಹಾರವಲ್ಲ, ಇನ್ನುಮುಂದೆ ತಾಲೂಕಿನಲ್ಲಿ ಈ ರೀತಿ ಅತ್ಮಹತ್ತೆಗಳು ಆಗದಂತೆ ರೈತರಿಗೆ ಆತ್ಮಸ್ಥೈರ್ಯ ತುಂಬುವಂತ ನ್ನು ಹಾಕಿಕೊಳ್ಳಲಾಗುವುದು.ಮೃತ ರೈತನ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಪರಿಹಾರವನ್ನು ಕೊಡಿಸಲಾಗುವುದು. ಆದರೆ ರೈತರು ತಾವು ಹೊರಗಡೆ ಮಾಡಿದ ಕೈಸಾಲಕ್ಕೆ ಯಾರಾದರೂ ತೊಂದರೆ ಮಾಡಿದರೆ ಕೂಡಲೆ ನಮ್ಮ ಗಮನಕ್ಕೆ ತರಬೇಕು ಅಂತವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here