ಉಜ್ವಲಾ ಯೋಜನೆ,ಸಿಲಿಂಡರ್ ಕಿಟ್ ವಿತರಣೆ

0
244

ಬಳ್ಳಾರಿ :ಪ್ರಧಾನಮಂತ್ರಿ ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಸಿಲಿಂಡರ್ ಕಿಟ್ ವಿತರಣೆ-ಕಂಟೋನ್ಮೆಂಟ್ ನ ಬಂಟ್ಸ್ ಙವನದಲ್ಲಿ ಆಯೋಜಿಸಿದ ಕಾರ್ಯಕ್ರಮ
-ಸ್ವಚ್ಛ ಇಂಧನ-ಉತ್ತಮ‌ ಜೀವನ ಧ್ಯೇಯದಡಿ ಸಿಲಿಂಡರ್ ಗಳ ವಿತರಣೆ

ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಇಲಾಖೆಯಿಂದ ಬಡ ಫಲಾನುಭವಿಗಳಿಗೆ ಸಿಲಿಂಡರ್ ಗಳ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಯಿತು.
ಕಂಟೋನ್ಮೆಂಟ್ ನ ಬಂಟ್ಸ್ ಭವನದಲ್ಲಿ ಇಂದು 7000 ಜನ ಫಲಾನುಭವಿಗಳಿಗೆ ಸಂಸದ ಬಿ.ಶ್ರೀರಾಮುಲು ಅವರಿಂದ ವಿತರಣೆ ಮಾಡಲಾಯಿತು.
ಬಳ್ಳಾರಿ ಜಿಲ್ಲೆಗೆ 25 ಸಾವಿರ ಸಿಲಿಂಡರ್ ಬಿಡುಗಡೆ ಆಗಿದ್ದು, ಮೊದಲ ಹಂತದಲ್ಲಿ 6,500 ಸಿಲಿಂಡರ್ ವಿತರಣೆ ಮಾಡಲಾಗುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ೭ ಕೋಟಿ ೨೫ ಲಕ್ಷ ಸಿಲಿಂಡರ್ ಗಳನ್ನು ಈಗಾಗಲೇ ದೇಶದ ಬಡ ಜನರಿಗೆ ನೀಡಿದ್ದಾರೆ.‌ ಕರ್ನಾಟಕದಲ್ಲಿ ೩೦ ಲಕ್ಷ ಸಿಲಿಂಡರ್‌ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ‌ಬಡ‌ಮಹಿಳೆಯರು ಆರೋಗ್ಯವಾಗಿರಲಿ ಎಂಬ ದೃಷ್ಟಿಯಿಂದ ಗ್ಯಾಸ್ ಸಿಲಿಂಡರ್ ಕಿಟ್ ನೀಡಲಾಗುತ್ತಿದೆ. ಮಹಿಳೆಯರ ಸಬ್ಸಿಡಿ ಹಣ ಅವರ ಅಕೌಂಟ್ ಗೆ ಜಮೆ‌ ಆಗುತ್ತೆ. ಆಧಾರ್ ಕಾರ್ಡ್ ಟ್ಯಾಗ್ ಮಾಡಿದ ಬಡವರ ಖಾತೆಗೆ ಹಣ ನೇರವಾಗಿ ಜಮೆ ಆಗುತ್ತದೆ. ಈ ಯೋಜನೆಯಿಂದ ನೇರವಾಗಿ ಅರ್ಹರಿಗೆ ತಲುಪುತ್ತದೆ ಅಂತ ಸಂಸದ ಬಿ.ಶ್ರೀರಾಮುಲು ಈವೇಳೆ ಹೇಳಿದ್ರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಡಿಸಿ ಡಾ.ರಾಮ್ ಪ್ರಸಾತ್ ಮನೋಹರ್, ಆಹಾರ ಇಲಾಖೆ ಉಪ ನಿರ್ದೇಶಕ ಶ್ರೀಧರ್, ಹೆಚ್ ಪಿ ಗ್ಯಾಸ್ ಇಂಡೇನ್ ಮತ್ತು ಭಾರತ್ ಕಂಪನಿಗಳ ವ್ಯವಸ್ಥಾಕರು ಈ ಸಂದರ್ಭದಲ್ಲಿ ಇದ್ರು.

ಬೈಟ್: ಬಿ.ಶ್ರೀರಾಮುಲು, ಸಂಸದರು, ಬಳ್ಳಾರಿ.

ಬೈಟ್: ೨) ಫರ್ಜಾನಾ, ಫಲಾನುಭವಿಗಳು, ಹುಸೇನ್‌ನಗರ, ಬಳ್ಳಾರಿ.

LEAVE A REPLY

Please enter your comment!
Please enter your name here