ಮಾನವೀಯತೆ ಮೆರೆದ ಅಧ್ಯಕ್ಷ…

0
185

ಕೋಲಾರ/ಬಂಗಾರಪೇಟೆ: ನಮ್ನೂರು ಬಂಗಾರಪೇಟೆ ತಾಲ್ಲೂಕಿನ ಕದಿರೇನಹಳ್ಳಿ ಗ್ರಾಮದಲ್ಲಿ ಕಿಡ್ನಿ ವೈಪಲ್ಯ ದಿಂದ ನರಳುತ್ತಿದ್ದ ವಿದ್ಯಾರ್ಥಿ ಗೆ ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಕೋಲಾರ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.ಸ್ತ್ರೀ ಸಂಘಗಳಿಂದ ಡಿಸಿಸಿ ಬ್ಯಾಂಕ್ ನಲ್ಲಿ ಸಾಲ ಪಡೆದು ಸಕಾಲಕ್ಕೆ ಮರು ಪಾವತಿ ಮಾಡುತ್ತಿರುವವರ ಕಷ್ಟಕ್ಕೆ ನೆರವಾಗಲು ಚಿಂತಿಸಿ ಗೌಡರು ಮುಂದೆ ಬಂದಿದ್ದಾರೆ.ಕದಿರೇನಹಳ್ಳಿ ಗ್ರಾಮದಲ್ಲಿ ದುರ್ಗಮ್ನ ಲಕ್ಷ್ಮಿ ಎಂಬುವರು ವೀಣಾ ಸ್ತ್ರೀ ಸಂಘವನ್ನ ಸ್ಥಾಪಿಸಿ ಡಿಸಿಸಿ ಬ್ಯಾಂಕ್ ನಿಂದ ಸಾಲ ಪಡೆದಿದ್ದಾರೆ, ಆಕೆಯ ಮಗ ಅರುಣ್ (18) ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ ಜೊತೆಗೆ ಕಿಡ್ನಿ ವೈಪಲ್ಯ ದಿಂದ ನರಳುತ್ತಿದ್ದಾನೆ,ಇಂತಹ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲೂ ಬ್ಯಾಂಕ್ ಗೆ ಸಾಲ ಸಕಾಲಕ್ಕೆ ಪಾವತಿ ಮಾಡುತ್ತಿದ್ದಾರೆ ದುರ್ಗಮ್ನ, ಬಾಕಿ ಸಾಲ ವಸೂಲಿಗೆ ಬ್ಯಾಂಕ್ ಸಿಬ್ಬಂದಿ ಮಂಜುನಾಥ್ ಬೇಟಿ ನೀಡಿದಾಗ ದುರ್ಗಮ್ಮ ಮಗನ ಕಿಡ್ನಿ ವಿಚಾರ ತಿಳಿಯಿತು, ತಕ್ಷಣ ಬ್ಯಾಂಕ್ ನ ನಿರ್ದೇಶಕ ಕೃಷ್ಣೇಗೌಡರ ಗಮನಕ್ಕೆ ತಂದಿದ್ದಾರೆ, ಅವರು ಜಿಲ್ಲಾಧ್ಯಕ್ಷರ ಗಮನಕ್ಕೆ ಈ ವಿಷಯ ತಂದಿದ್ದಾರೆ, ತಕ್ಷಣ ಸ್ಪಂದಿಸಿದ ಗೌಡರು, ಗ್ರಾಮಕ್ಕೆ ಬೇಟಿ ನೀಡಿ ಚಿಕಿತ್ಸೆಗೆ 50,000 ರೂ ನೀಡಿ ಮಾನವೀಯತೆ ಪ್ರದರ್ಶಿಸಿದರು, ಅರುಣ್ ರ ಕಿಡ್ನಿ ಚಿಕಿತ್ಸೆಯ ಸಂಪೂರ್ಣ ಖರ್ಚು ವೆಚ್ಚ ತಾವೇ ಭರಿಸುವುದಾಗಿ ಹೇಳುವ ಮೂಲಕ ಪೋಷಕರಲ್ಲಿ ಉಂಟಾಗಿದ್ದ ಆತಂಕವನ್ನು ದೂರ ಮಾಡಿದ್ದಾರೆ, ಸ್ತ್ರೀ ಸಂಘಗಳ ಮಹಳಿಯರ ಸಬಲೀಕರಣಗಳಿಸಲು ಶೂನ್ಯ ಬಡ್ಡಿಯಲ್ಲಿ ಸಾಲವನ್ನ ಪ್ರತಿ ಸಂಘಕ್ಕೆ 5 ಲಕ್ಷ ಬ್ಯಾಂಕ್ ಮೂಲಕ ನೀಡಿ ಕ್ರಾಂತಿಯನ್ನು ಉಂಟುಮಾಡಿದ್ದಾರೆ, ಇದೀಗ ಸಂಘದ ಮಹಳಾ ಪ್ರತನಿಧಿಗಳ ಕುಟುಂಬದಲ್ಲಿ ಅನಾರೋಗ್ಯ ಕ್ಕೆ ತುತ್ತಾಗಿರುವವರ ಆರೋಗ್ಯಕ್ಕೆ ತಮ್ನ ವೈಯುಕ್ತಿಕ ಹಣದ ಮೂಲಕ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಲು ಆಸಕ್ತಿ ತೋರಿರುವ ಬ್ಯಾಲಹಳ್ಳಿ ಗೋವಿಂದಗೌಡರ ಮಾನವೀಯತೆ ಸೇವೆಗೆ ಒಂದು ರಾಯಲ್ ಸೆಲ್ಯೂಟ್..!

LEAVE A REPLY

Please enter your comment!
Please enter your name here