ಮಂಡ್ಯ/ಮಳವಳ್ಳಿ: ವಿಶ್ವಶಾಂತಿ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಖ್ಯಾತಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್ ರವರಿಗೆ ಅಭಿನಂದನಾ ಸಮಾರಂಭ ಮತ್ತು ಮೌಢ್ಯತೆಯ ಮಹಾಮಾರಿ ಅಂಟದಂತೆ ದೂರವಿರಿ ವಿಶೇಷ ಕಾಯ೯ಕ್ರಮ.

ಮಳವಳ್ಳಿ ತಾಲ್ಲೂಕಿನ ಬೋಸೇಗೌಡನದೊಡ್ಡಿ ಗ್ರಾಮದಲ್ಲಿ ನಡೆಯಿತು. ಕಾಯ೯ಕ್ರಮ ದಲ್ಲಿ ಅಭಿನಂದನಾ ಸ್ವೀಕರಿಸಿದ ಹುಲಿಕಲ್ ನಟರಾಜ್ ಮಾತನಾಡಿ, ಮೂಢನಂಬಿಕೆಎಂಬ ಮೌಢ್ಯತೆಎಂಬ ಮಹಾಮರಿಅಂಟದಂತೆ ದೂರವಿರುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಜನರನ್ನು ನಂಬಿಸಿ ಹೇಗೆ ಮೋಸ ಮಾಡುತ್ತಾರೆ ಎಂಬುವುದನ್ನು ಪ್ರಾಯೋಗಿಕ ತಿಳಿಸಿಕೊಟ್ಟರು, ಇದೇ ಸಂದಭ೯ದಲ್ಲಿ ವಿಶ್ವಶಾಂತಿ ಪ್ರತಿಷ್ಠಾನ ಟ್ರಸ್ಟ್ ಲೋಕಾರ್ಪಣೆ ಮಾಡಲಾಯಿತು, ನಂತರ ವಿಶ್ವಶಾಂತಿ ಪ್ರತಿಷ್ಠಾನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ವಿಧ್ಯಾನಂದ ತೀರ್ಥರು ಮಾತನಾಡಿ ವಿಶ್ವವು ಶಾಂತಿಯಿಂದ ಕೂಡಿರಲಿ ಅದಕ್ಕಾಗಿ ಈ ಟ್ರಸ್ಟ್ ಸ್ಥಾಪಿಸಿದ್ದು , ಮೌಢ್ಯತೆ ಯನ್ನು ಹೋಗಲಾಡಿ, ನಂಬಿಕೆ ದೀಪವನ್ನು ಪ್ರತಿಯೊಬ್ಬರಲ್ಲೂ ಮೂಡಿಸಬೇಕು ಎಂದು ತಿಳಿಸಿದರು, ಕಾಯ೯ಕ್ರಮ ದಲ್ಲಿ ಯಮದೂರುಸಿದ್ದರಾಜು, ಶಿವಲಿಂಗಯ್ಯ , ಸೇರಿದಂತೆ ಮತ್ತಿತ್ತರರು ಇದ್ದರು