ಮಳೆಯಿಂದ ಹದಗೆಟ್ಟಿರುವ ರಸ್ತೆ,ಕುಸಿತ ಅಗ್ನಿ ಶಾಮಕ ವಾಹನ..

0
343

ಚಿಕ್ಕಬಳ್ಳಾಪುರ/ ಚಿಂತಾಮಣಿ:-ತಾಲ್ಲೂಕಿನಾದ್ಯಂತ ಕಳೆದ ಕೆಲ ದಿನಗಳಿಂ ಬಾರಿ ಮಳೆಯಾಗುತ್ತಿದ್ದು ವಾಹನ ಸವಾರರ ಪರದಾಟ ಹೇಳತೀರದ್ದಾಗಿದ್ದು ಹದಗೇಟ್ಟ ರಸ್ತೆಯಲ್ಲಿ ಅಗ್ನಿಶಾಮಕ ವಾಹನ ಕುಸಿದಿರುವ ಘಟನೆ ನಗರದ ಹೋರವಲಯದ ಕರಿಯಪ್ಪಲ್ಲಿಯಿಂದ ವರದಿಯಾಗಿದೆ.

ಕಳೆದ ಕೆಲ ವರ್ಷ ಗಳಿಂದ ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗದೆ ಸಂಕಷ್ಷಕ್ಕೆ ಈಡಾಗಿದ್ದ ಜನತೆ ಇದೀಗ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮತ್ತು ಹದಗೆಟ್ಟಿರುವ ರಸ್ತೆಗಳಲ್ಲಿ ಒಡಾಡಲು ಪರದಾಡುತ್ತಿರುವ ಪರಿಸ್ಥಿತಿ ಎದುರಾಗಿದೆ.
ಗುರುವಾರ ರಾತ್ರಿ ಸುರಿದ ಮಳೆಗೆ ನಗರದ ಹೊರವಲಯದಲ್ಲಿ ರುವ ಅಗ್ನಿಶಾಮಕ ಠಾಣೆಗೆ ಹೋಗುವ ರಸ್ತೆಯು ಸಂಪೂರ್ಣ ಕುಸಿದಿರುವ ಪರಿಣಾಮ ಅಗ್ನಿಶಾಮಕ ವಾಹನ ನೆಲದಲ್ಲಿ ಹುದುಗಿ ಹೋಗಿದ್ದು ಕೂಡಲೇ ಸದರಿ ರಸ್ತೆಯನ್ನು ಸರಿಪಡಿಸುವಂತೆ ಸಾರ್ವಜನಿಕರು ಅಧಿಕಾರಿಗಳು ಮತ್ತಿತರರು ಜನಪ್ರತಿನಿದಿಗಳನ್ನು ಒತ್ತಾಯಿಸಿದ್ದಾರೆ.

ಇಮ್ರಾನ್ ಖಾನ್ ಆರ್.ಕೆ
ನಮ್ಮೂರ ಟಿವಿ ಚಿಂತಾಮಣಿ.