ಮಾದರಿ ರೈತನ ಗೋಟ್ ಪಾರಂ,

0
1001

ಕೃಷಿಕರ ಗಮನ ಸೆಳಿದಿದೆ ಅಧಿಕ ಲಾಭಂಶದ ಪಾರಂ
::::
ಬಾಗಲಕೋಟೆ/ಹೀರೆಪಡಸಲಗಿ:ಆಡು ಸಾಕಾಣಿಕೆ ಮತ್ತು ಹೈನುಗಾರಿಕೆ, ಭೂಮಿ ನಂಬಿ ಬೆಳೆ ಬೆಳೆಯೋ ರೈತನಿಗೆ ಭೂತಾಯಿ ಕೈಹಿಡಿಯದೇ ಹೋದಾಗ ರೈತ ಸಮೂಹವನ್ನು ಕೈ ಹಿಡಿದ ಕಸಬುಗಳು. ನಗರೀಕರಣ ಹೆಚ್ಚಾಗುತ್ತಿದ್ದಂತೆ ಮನೆಗಳಲ್ಲಿ ಹಸು, ಆಡು, ಕುರಿ ಕಟ್ಟುವುದು ನಿಂತಿಹೋಗಿವೆ. ಹೀಗಾಗಿ ಆಡು ಸಾಕಾಣಿಕೆ ಮತ್ತು ಹೈನುಗಾರಿಕೆ ಕಸಬುಗಳು ಜೋರಾಗೆ ನಡೆಯುತ್ತಿವೆ. ಅಲ್ಲದೇ ಭೀಕರ ಬರದಿಂದ ಕಂಗೆಟ್ಟಿದ್ದ ರೈತನಿಗೆ ಕಡಿಮೆ ಖರ್ಚಿನಲ್ಲೇ ಅಧಿಕ ಆದಾಯ ಗಳಿಸುವ ಕಸಬು ಇವಾಗಿವೆ. ಹೈನುಗಾರಿಕೆ ಮಾಡುವ ಕೆಲ ರೈತರು ಮೇವುನ ಕೊರತೆ ನೀರಿನ ಕೊರತೆಯಿಂದ ಕಸಬನ್ನು ನಿಲ್ಲಿಸುತ್ತಿದ್ದಾರೆ. ಆದ್ರೆ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದ ಹಣಮಂತ ಕಾತ್ರಾಳ ಮಾತ್ರ ಇಂತಹ ಸಮಸ್ಯೆಗನ್ನು ಬದಿಗೊತ್ತಿ ಹೈನುಗಾರಿಕೆ ಜೊತೆಗೆ ಆಡು ಸಾಕಾಣಿಕೆ ಮಾಡುತ್ತ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಮೊದಲು ಕೇವಲ ಕಬ್ಬು ಮೆಕ್ಕೆ ಜೊಳ ಸೇರಿಂದತೆ ಮುಂತಾದ ಬೆಳೆಗಳನ್ನು ಬೆಳೆಯುತ್ತದ್ದ ಹಣಮಂತ ಬರಗಾಲದಿಂದಾಗಿ ಕೈಸುಟ್ಟುಕೊಂಡಿದ್ದೇ ಹೆಚ್ಚು. ಹೀಗಾಗಿ ಹೊಸ ಪ್ಲಾನ್ ಮಾಡಿದ ಇವರು, ಸುಮಾರು 5 ಎಕರೆ ಜಮೀನಿನಲ್ಲಿ ಆಡು ಸಾಕಾಣಿಕೆ ಹಾಗೂ ಹೈನುಗಾರಿಕೆ ಮಾಡುತ್ತಿದ್ದಾರೆ. ಸ್ವಂತ ಅನುಭವ ಪಡೆಯಲು ದೇಶೀ ತಳಿಯ 50 ಜವಾರಿ ಮೇಕೆಗಳೊಂದಿಗೆ ಆರಂಭವಾಗಿದ್ದ ಆಡು ಸಾಕಾಣಿಕೆ ಕೇಂದ್ರದಲ್ಲಿ, ಇಂದು ರಾಜ್ಯದ ಮತ್ತು ವಿದೇಶಿ ತಳಿಗಳ ಮೇಕೆಗಳು ಒಳಗೊಂಡು ಒಟ್ಟು 500 ಮೇಕೆಗಳು ಜೊತೆಗೆ 260 ಮೇಕೆಮರಿಗಳು ಬೆಳೆದಿ ನಿಂತಿವೆ. ಮುಂಬರುವ ದಿನಗಳಲ್ಲಿ 5 ಸಾವಿರವರೆಗೆ ಹೆಚ್ಚಿಸಬೇಕು ಎನ್ನುವ ಗುರಿ ಹೊಂದಿದ್ದಾರೆ ಹಣಮಂತ ಕಾತ್ರಾಳ.

 

ದೇಶಿ ಮೇಕೆ ತಳಿಗಳಾದ ರಾಜಸ್ಥಾನದ ಜಮುನಾಪಾರಿ, ಪಂಜಾಬನ ಬಿಟಲ್, ಶಿರೋಹಿ, ಉಸ್ಮಾನಾಬಾದಿ, ಜವಾರಿ ಮೇಕೆಗಳು ಮತ್ತು ಸೌತ್ ಆಪ್ರಿಕಾ ಮೂಲದ ಬೋಯರ್, ಮತ್ತು ಗುಜರಾತ, ಮೋಳಿ ಎಮ್ಮೆಗಳನ್ನು ಸಾಕುತಿದ್ದು, ಇವುಗಳಿಗಾಗಿ ಸುಮಾರು 1 ಎಕರೆಯಲ್ಲಿ ಶೆಡ್ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ರಾಸುಗಳಿಗೆ ಶುದ್ದವಾದ ಕುಡಿಯುವ ನೀರಿನ ಪೂರೈಕೆ, ಮೇವು ಪೂರೈಕೆಗೆ ಪ್ರತ್ಯೇಕವಾಗಿ ವ್ಯವಸ್ತೆ ಕಲ್ಪಿಸಿದ್ದಾರೆ. ಅಲ್ಲದೇ ರಾಸುಗಳ ಮೇವಿಗಾಗಿ ಕಬ್ಬಿನ ಗರಿ, ರೇಷ್ಮೆ, ಚೊಗಚಿ,ಬೆಳೆಸುತ್ತಿದ್ದಾರೆ. ಇನ್ನು ಹೆಚ್ಚಾಗಿ ಒಣ ಮೇವು ತಿನ್ನುವದರಿಂದ, ಬಿಳಿ ಜೋಳ, ಗೋವಿನಜೋಳ, ತೊಗರಿಹೊಟ್ಟು, ಶೇಂಗಾ ಹೊಟ್ಟು, ಮುಂತಾದವುಗಳನ್ನು ವ್ಯವಸ್ಥಿತವಾಗಿ ಪ್ರತ್ಯೇಕವಾಗಿ ಸಂಗ್ರಹಿಸಿದ್ದಾರೆ. ತಲಾ ಒಂದು ಒಂದು ಆಡುಗಳು ವರ್ಷಕ್ಕೆ ನಾಲ್ಕು ಮರಿಗಳನ್ನು ಹಾಕುತ್ತವೆ. ಹುಟ್ಟಿದ ಮರಿಗಳು ಕೇವಲ ಮೂರ್ನಾಲ್ಕು ತಿಂಗಳಲ್ಲಿ 100 ರಿಂದ 120 ಕೆಜಿವರೆಗೆ ತೂಕವನ್ನು ಹೊಂದಿರುತ್ತವೆ. ಹೀಗಾಗಿ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯಾ ಪಡೆಯುತ್ತಿದ್ದಾರೆ.

ಇನ್ನು ಕೃಷಿ ಜೊತೆಗೆ ಉದ್ಯಮವನ್ನೂ ನೋಡಿಕೊಳ್ಳುವು ಇವರು ದಿನನಿತ್ಯ ಕುಟುಂಬದ ಸಮೇತ ಬೆಳಿಗ್ಗೆ 06 ಘಂಟೆಯಿಂದಲೇ ಆಳುಗಳೊಂದಿಗೆ ತಾವೂ ಕೂಡ ಕೊಟ್ಟಿಗೆ ಸ್ವಚ್ಚ ಗೊಳಿಸಿ, ಮೇವು ಹಾಕಿ, ಮೇಕೆ ಮರಿಗಳಿಗೆ, ಎಮ್ಮೆ ಕರುಗಳಿಗೆ ಹಾಲುಣಿಸಿ ತಮ್ಮ ಮಕ್ಕಳಂತೆ ಆರೈಕೆ ಮಾಡುತ್ತಾರೆ. ಅಲ್ಲದೇ ಆಡು ಸಾಕಾಣಿಕೆ ಬಗ್ಗೆ ಮಾಹಿತಿ ಪಡೆಯಲು ಇಲ್ಲಿಗೆ ನಿತ್ಯ ಬರುವ ಸುತ್ತಮುತ್ತಲ ರೈತರಿಗೆ ಮಾಹಿತಿ ನೀಡುತ್ತಾರೆ.

ಒಟ್ನಲ್ಲಿ ಕಳೆದ ಮೂರ್ನಾಲ್ಕು ವರ್ಷದಿಂದ ಆಡು ಸಾಕಾಣಿಕೆ ಆರಂಭಿಸಿದ ಹನಮಂತ, ಭಾರಿ ಯಶಸ್ಸು ಕಂಡಿದ್ದಾರೆ. ಅಲ್ಲದೇ ಸುತ್ತಮುತ್ತಲ ಜನರಿಗೂ ಕೂಡ ಇಂತಹ ವಿಶಿಷ್ಟಿ ತಳಿಗಳ ಆಡು ಸಾಕಾಣಿಕೆ ಮಾಡುವುದರ ಬಗ್ಗೆ ಮಾಹಿತಿ ನೀಡುತ್ತ ಅವರನ್ನೂ ಸ್ವಾವಲಂಬಿಗಳಾಗಿ ಬದುಕಲು ಕಾತ್ರಾಳರವರು ಮಾದರಿಯಾಗಿದ್ದಾರೆ.