ಕೆರೆಯನೀರು ಕಲ್ಮಷ- ಸಾರ್ವಜನಿಕರ ಕಳವಲ

0
307

ಬೆಂಗಳೂರು (ಕೃಷ್ಣರಾಜಪುರ): ಕೆಆರ್ ಪುರ ಭಾಗದ ಜನರಿಗೆ ವಾಯುವಿಹಾರಕ್ಕಿರುವ ಏಕೈಕ ಕೆರೆ ವೆಂಗಯ್ಯನಕೆರೆ. ಇಲ್ಲಿಗೆ ಬರುವ ಜನರಿಗೆ ಈ ಕೆರೆ ಈಗ ರೋಗದ ಭೀತಿ ತಂದೊಡ್ಡಿದೆ, ಆರೋಗ್ಯ ರಕ್ಷಣೆಗಿಂದ ಆರೋಗ್ಯ ಹಾಳಾಗುವುದೇ ಹೆಚ್ಚಾಗಿದ್ದು ರೋಗರುಜಿನಗಳ ಅವಾಸ್ತಸ್ಥಾಣವಾಗಿ ಪರಿಣಮಿಸಿದೆ.
ಇತಿಹಾಸ ಪ್ರಸಿದ್ದ ವೆಂಗಯ್ಯನ ಕೆರೆಯನ್ನು ಕಳೆದ ಕೆಲ ವರ್ಷಗಳ ಹಿಂದೆ ಖಾಸಗಿಯವರು ಗುತ್ತಿಗೆ ಪಡೆದು ಅಭಿವೃದ್ದಿಗೊಳಿಸಿ ಹಗಲು ಕನಸಿನ ಕೆರೆಯಂದು ನಾಮಕರಣ ಮಾಡಿ ಕೆರೆಯಲ್ಲಿ ವಾಯುವಿಹಾರಕ್ಕೆ ತೆರಳುವವರಿಗೂ ದರ ವಿಧಿಸಲಾಗುತ್ತಿತ್ತು, ಜೊತೆಗೆ ಕೆರೆಯಲ್ಲಿ ದ್ವೀಪವನ್ನು ನಿರ್ಮಿಸಿ ಪ್ರೇಮಿಗಳಿಗೆ ಮತ್ತು ನವ ಜೋಡಿಗಳಿಗೆ ಉತ್ತಮ ಸುಂದರ ತಾನವಾಗಿ ನಿರ್ಮಿಸಲಾಗಿತ್ತು ಆದರೆ ಇದು ಸದುದ್ದೇಶಕ್ಕೆ ಬಳಕೆ ಆಗದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿತ್ತು. ಈ ಸಂಬಂಧ ದೂರುಗಳು ಬಂದ ಹಿನ್ನೆಲೆಯಲ್ಲಿ ಈಗ ಸಿಸಿ ಕ್ಯಾಮರಾಗಳನ್ನು ಬಳಸಿ ತೀವ್ರ ನಿಗಾವಹಿಸಿದ್ದಾರೆ, ಆದರೂ ಕೆರೆಗೆ ಹರಿದು ಬರುತ್ತಿರುವ ಕೊಳಚೆ ನೀರಿನಿಂದ ದುರ್ನಾತ ಬೀರಿ ರೋಗ ರುಜಿನಗಳ ಅವಾಸ್ತಸ್ಥಾನವಾಘಿ ಪರಿಣಮಿಸಿದೆ. ವ್ಯಂಗ್ಯಯನಕೆರೆ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋಂಟ್ಯಾತರ ವೆಚ್ಚದಲ್ಲಿ ಅಭಿವೃದ್ದಿಯಾಗಿರುವ ಕೆರೆ ಒಳಚರಂಡಿ ನೀರಿನಿಂದ ಕಲುಷಿತಗೊಂಡು ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದೆ.

ಕೆಆರ್ ಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವ್ಯಂಗಯ್ಯನಕೆರೆ ಪ್ರೇಮಿಗಳ ಮತ್ತು ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಿದೆ, ದಿನನಿತ್ಯ ಒತ್ತಡದಲ್ಲೆ ಬದುಕುವ ಜನತೆ ಕುಟುಂದೊಂದಿಗೆ ಮತ್ತು ಸ್ನೇಹಿತರೊಡನೆ ಸಂತೋಷದ ಸಮಯ ಕಳೆಯಲು ಸೂಕ್ತ ತಾಣವಾಗಿತ್ತು, ಆದರೆ ಕೆಆರ್‍ಪುರದ ಸುತ್ತ ಮುತ್ತಲ ಒಳಚರಂಡಿ ನೀರು ಕೆರೆಯ ನಾಲ್ಕು ಭಾಗಗಳಿಂದಲೂ ನೇರವಾಗಿ ಸೇರುತ್ತಿರುವುದು ಕೆರೆಯ ನೀರನ್ನು ಸಂಪೂರ್ಣವಾಗಿ ಕಲುಷಿತಗೊಳಿಸುತ್ತಿರುವುದು ದುರ್ವಾಸನೆ ಹೊರಹೊಮ್ಮಲು ಕಾರಣವಾಗಿದೆ, ಕೊಳಕುಗೊಂಡ ನೀರಿನಲ್ಲಿ ಕ್ರಿಮಿಕೀಟಗಳು ಉತ್ಪತ್ತಿಗೊಂಡು ಸಾಂಕ್ರಾಮಿಕ ರೋಗಗಳು ಹರಡುವ ತಾಣ ವಾಗಿ ಮಾರ್ಪಟ್ಟಿದೆ, ಬೊಟಿಂಗ್ ಸೇರಿದಂತೆ, ವಾಯು ವಿಹಾರಕ್ಕೆಂದು ಬರುವ ಜನರು ನೀರಿನ ದುರ್ವಾಸನೆ ಸಹಿಸಲಾಗದೆ ಕೆರೆಯಿಂದ ದೂರವಾಗುತ್ತಿದ್ದಾರೆ. ಸಂಜೆ ವೇಳೆ ಗುಂಪು ಗುಂಪಾಗಿ ಬರುವ ಸೊಳ್ಳೆಗಳು ವಿಹಾರಕ್ಕೆ ಬರುವ ವೃದ್ಧರು, ಮಕ್ಕಳನ್ನು ಒಮ್ಮೆಲೆಯೆ ಮುತ್ತಿಕೊಳ್ಳುತ್ತಿದೆ, ಸೊಳ್ಳೆ ಕಾಟದಿಂದ ವಾಯು ವಿಹಾರಿಗಳು ಇತ್ತ ಸುಳಿಯದಂತಾಗಿದ್ದು, ರೋಗಗಳು ಹರಡುವ ಭೀತಿಯಲ್ಲಿ ಸಾರ್ವಜನಿಕರು ಕೆರೆಯನ್ನು ಮರೆಯುತ್ತಿದ್ದಾರೆ. ದೇಶ ವಿದೇಶದಿಂದ ವಲಸೆ ಬರುವ ನಾನಾ ಬಗೆಯ ಪಕ್ಷಿಗಳು ಕೆರೆಗೆ ಬರುವುದು ಸಹಜವಾಗಿದ್ದು, ಇದು ಪ್ರವಾಸಿಗರನ್ನು ಸೆಳೆಯುತ್ತಿತ್ತು, ಕೆರೆಯ ನೀರಿನ ದುರ್ವಾಸನೆ ಪ್ರಕೃತಿಯ ಸೊಬಗು ಸವೆಯಲು ಬರುವವರನ್ನು ತನ್ನಿಂದ ದೂರವಿರುವಂತೆ ಮಾಡಿದೆ, 64ಎಕರೆ ವಿಸ್ತೀರ್ನವುಳ್ಳ ಈ ಕೆರೆಯನ್ನು 2003ರಲ್ಲಿ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವು 201.ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿ ಸಾರ್ವಜನಿಕ ಸಹಭಾಗಿತ್ವ ಯೋಜನೆಯಡಿ ಖಾಸಗಿಯವರಿಗೆ 15ವರ್ಷಗಳ ಕಾಲಕ್ಕೆ ಗುತ್ತಿಗೆ ನೀಡಿತ್ತು, ಬಿಬಿಎಂಪಿ ಮತ್ತು ಬಿಡಬ್ಲ್ಯೂಎಸ್‍ಎಸ್‍ಬಿ ಕೆಆರ್‍ಪುರದ ಸುತ್ತಮುತ್ತಲ ಚರಂಡಿ ನೀರನ್ನು ಕೆರೆಗೆ ಬಿಡುತ್ತಿದೆ ಇದರಿಂದ ಕೆರೆಯ ನೀರು ಸಂಪೂರ್ಣ ಕಲುಷಿತವಾಗಿದೆ, ಕೆರೆಗೆ ಭೇಟಿ ನೀಡುವ ಜನರ ಸಂಖ್ಯೆ ಕಡಿಮೆಯಾಗಿದ್ದು, ಮಕ್ಕಳ ಆಟಿಕೆಗಳು, ನೀರಿನ ಕಾರಂಜಿ, ಮೂಲೆಗೆ ಬಿದ್ದಿವೆ. ಹಗಲುಕನಸಿನ ಕೆರೆ ಹೆಸರಿಗೆ ತಕ್ಕಂತೆ ಇರಬಹುದಾಗಿತ್ತು, ಆದರೆ ನಿರ್ವಣೆಯ ಕೊರತೆ ಕೆರೆಗೆ ಇಟ್ಟ ಹೆಸರನ್ನು ಸುಳ್ಳಾಗಿಸುವಂತಾಗಿದೆ ಎಂಬುದು ಸಾರ್ವಜನಿಕರ ಅಳಲು. ನಗರದ ತ್ಯಾಜ್ಯದ ನೀರು ರಾಸಾಯನಿಕಗಳು ಕೆರೆಗೆ ನೇರವಾಗಿ ಹರಿದು ಬರುತ್ತಿರುವುದರಿಂದ ಕೆರೆಯಲ್ಲಿ ವಾಸಿಸುವ ವಿವಿಧ ಬಗೆಯ ಪ್ರಾಣಿ ಸಂಕುಲದ ಜೀವಕ್ಕೆ ಹಾನಿ ಮಾಡುತ್ತಿರುವುದನ್ನು ತಳ್ಳಿಹಾಕುವಂತಿಲ್ಲ, ಸರ್ಕಾರ ಉತ್ತಮ ನಗರ ನಿರ್ಮಾಣಕ್ಕೆ ಕೆರೆಯನ್ನು ಅಭಿವೃದ್ಧಿಗೊಳಿಸಿ ಕೆರೆಯ ಮಧ್ಯ ಭಾಗದಲ್ಲಿ ದ್ವೀಪ ನಿರ್ಮಿಸಿತ್ತಾದರೂ ಜನತೆಯ ಬಳಕೆಗೆ ಬರುತ್ತಿಲ್ಲವೆಂಬುದೇ ಸತ್ಯ, ಹಾಗು ಕೆರೆ ಅಭಿವೃದ್ಧಿ ಪ್ರಾಧಿಕಾರ ಕೆರೆಗಳ ಅಭಿವೃದ್ಧಿಯಲ್ಲಿವಹಸಿರುವ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಸ್ಥಳೀಯ ನಿವಾಸಿ ಗೋಪಾಲ್ ಗೌಡ ದೂರಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಎಚ್ಚೆತ್ತುಕೊಂಡು ಕೆರೆಯ ಸೊಬಗನ್ನು ಉಳಿಸಬೇಕಿದೆ. ವ್ಯಂಗಯ್ಯನ ಕೆರೆ ಕಾಳಜಿಯಿದೆ ಒಳಚರಂಡಿ ನೀರು ಕೆರೆಗೆ ಸೇರುತ್ತಿರುವ ಬಗ್ಗೆ ಬಿಡಬ್ಲ್ಯೂ ಎಸ್ ಎಸ್ ಬಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಆದಷ್ಟು ಬೇಗನೆ ಕೊಳಚೆ ನೀರು ಕೆರೆಗೆ ಸೇರದಂತೆ ಬೇರ್ಪಡಿಸಿ ಸಮಸ್ಯೆ ಬಗೆಹರಿಲಾಗುವುದೆಂದು ಪಾಲಿಕೆ ಸದಸ್ಯೆ ಕೆ.ಪೂರ್ಣಿಮಶ್ರೀನಿವಾಸ್ ತಿಳಿಸಿದ್ದಾರೆ.