ಹ್ಯಾಟ್ರಿಕ್ ಗೆಲುವಿಗಾಗಿ ಲಿಂಬಾವಳಿ ನಾಮಪತ್ರ ಸಲ್ಲಿಕೆ..

0
148

ಬೆಂಗಳೂರು/ಮಹದೇವಪುರ:- ಕಳೆದ 10 ವರ್ಷಗಳಿಂದ ಕ್ಷೇತ್ರವನ್ನು ಅಭಿವೃದ್ದಿ ಪಡಿಸಿರುವುದರ ಬಗ್ಗೆ ಹಾಗೂ ಮುಂದಿನ 5 ವರ್ಷಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಪೂರ್ಣ ಮಾಹಿತಿಯನ್ನು ಒಳಗೊಂಡ ಕೈಪಿಡಿಯನ್ನು ಕ್ಷೇತ್ರದ ಜನರ ಮನೆ ಮನೆಗೆ ನೀಡಲಾಗಿದ್ದು ಮತದಾರರು ಕಾಂಗ್ರೆಸ್ ಬದಲಿಸಿ ಬಿಜೆಪಿ ಪಕ್ಷ ಗೆಲ್ಲಿಸಲು ಮಹದೇವಪುರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಲಿಂಬಾವಳಿ ಮತದಾರರಲ್ಲಿ ಮನವಿ ಮಾಡಿದರು.
ಇಲ್ಲಿನ ತಾಲ್ಲೂಕು ಕಛೇರಿಯಲ್ಲಿ ಮೂರನೆ ಭಾರಿಗೆ ಹ್ಯಾಟ್ರಿಕ್ ವಿಜಯಕ್ಕಾಗಿ ಸಂಸದ ಪಿ.ಚಿ.ಮೋಹನ್ ಹಾಗು ತಮ್ಮ ಪತ್ನಿಯೊಂದಿಗೆ ನಾಮ ಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ 10 ವರ್ಷಗಳಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳ ಪೂರ್ಣ ವಿವರ ಹಾಗೂ ಈ ಬಾರಿ ಆಯ್ಕೆಯಾಗಿ 5 ವರ್ಷಗಳಲ್ಲಿ ಹಮ್ಮಿಕೊಳ್ಳಲಾಗುವ ಯೋಜನೆಗಳ ಪೂರ್ಣ ವಿವರ ಒಳಗೊಂಡ ಕೈಪಿಡಿ ಈಗಾಗಲೆ ಜನರ ಕೈಸೇರಿದ್ದು ಉಳಿಕೆಯಿರುವ ಜನರಿಗೆ ಕಾರ್ಯಕರ್ತರು ತಲುಪಿಸುವ ಕಾರ್ಯ ಮಾಡುತ್ತಾರೆ ಎಂದರು. ಕಳೆದ 5 ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸಕರ್ಾರವಿದ್ದು ಈ ಕ್ಷೇತ್ರಕ್ಕೆ ಬರಬೇಕಾದ ಅನುದಾನದಲ್ಲಿ ತಾರತಮ್ಯ ಮಾಡಿದ್ದರಿಂದ ಅಭಿವೃದ್ದಿಯಲ್ಲಿ ಸ್ವಲ್ಪ ಕಡಿಮೆಯಾಯಿತು ಎಂದರು. ಆದರೆ ಮುಂದಿನ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸಕರ್ಾರ ಅಧಿಕಾರಕ್ಕೆ ಬರಲಿದ್ದು ಈ ಕ್ಷೆತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ದಿ ಪಡಿಸಲಾಗುವುದೆಂದರು. ಮಹದೇವಪುರ ಬೆಂಗಳೂರು ನಗರದ ವಿಧಾನ ಸಭಾ ಕ್ಷೇತ್ರಗಳ ಪೈಕಿ ಹೆಚ್ಚಿನ ಕಂದಾಯ ಬಿಬಿಎಂಪಿ ಗೆ ಬರಲಿದ್ದು ಸರ್ಕಾರ ಅಭಿವೃದ್ದಿಗೆ ಮಾತ್ರ ಸಮರ್ಪಕವಾಗಿ ಹಣ ಬಿಡುಗಡೆ ಮಾಡಿತ್ತಿಲ್ಲ ಎಂದರು. ಇದಕ್ಕೆಲ್ಲ ತೆರೆ ಎಳೆದು ಮುಂದಿನ ಅವದಿಯಲ್ಲಿ ನೆಮ್ಮೆಲ್ಲರ ಆಶರ್ಿವರ್ಾದದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇದೆಲ್ಲ ತಾರತಮ್ಯ ಸರಿಪಡಿಸಲಿದೆ ಎಂದರು. ದೇಶಕ್ಕೆ ನರೇಂದ್ರ ಮೋದಿ, ರಾಜ್ಯಕ್ಕೆ ಯಡಿಯೂರಪ್ಪ ಹಾಗೂ ಮಹದೇವಪುರ ವಿಧಾನ ಸಭಾ ಕ್ಷೇತ್ರಕ್ಕೆ ಅರವಿಂದ ಲಿಂಬಾವಳಿ ಎಂಬ ಜನರ ಆಶಯದಂತೆ ಈ ಬಾರಿ ನನ್ನನ್ನು ಅತಿ ಹೆಚ್ಚಿನ ಅಂತರದಿಂದ ಜನರು ಆರಿಸುತ್ತಾರೆಂಬ ವಿಶ್ವಾಸವನ್ನು ವ್ಯೆಕ್ತಪಡಿಸಿದರು.
ಈ ಸಂದರ್ಬದಲ್ಲಿ ಸಂಸದರಾದ ಪಿ.ಸಿ.ಮೋಹನ್, ಕ್ಷೇತ್ರ ಬಿಜೆಪಿ ಅದ್ಯಕ್ಷ ರಾಜಾರೆಡ್ಡಿ, ಜಯಚಂದ್ರಾರೆಡ್ಡಿ, ವೆಂಕಟಸ್ವಾಮಿರೆಡ್ಡಿ, ಪಾಲಿಕೆ ಸದಸ್ಯರುಗಳಾದ ಪುಶ್ಪಾ ಮಂಜುನಾಥ್, ಆಶಾ ಸುರೇಶ್, ಎಸ್.ಮುನಿಸ್ವಾಮಿ, ಶ್ವೇತಾ ಹೂಡಿ ವಿಜಯಕುಮಾರ್ ಹಾಜರಿದ್ದರು.