ಸೇರ್ಪಡೆ ಹಾಗೂ ಪ್ರಚಾರ ಕಾರ್ಯಕ್ರಮ.

0
170

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗಂಜಿ ಗುಂಟೆ, ಹಳೇ ಗಂಜಿಗುಂಟೆ, ಹಲವಾರು ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ಕ್ರಮ ಕೈಗೊಂಡು .ಹಾಗೂ ಗಂಜಿ ಗುಂಟೆ ಗ್ರಾಮದಲ್ಲಿ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ರಘುನಾಥರೆಡ್ಡಿ, ವೆಂಕಟಸ್ವಾಮಿ ಮಾದೇನಹಳ್ಳಿ, ನರಸಿಂಹ ಮೂರ್ತಿ, ನರಸಿಂಹ ರೆಡ್ಡಿ ಗಂಜಿಗುಂಟೆ, ಕೋನಪ್ಪ ರೆಡ್ಡಿ ಗಂಜಿಗುಂಟೆ. ಹಲವಾರು ಜನ ಮೇಲೂರು ರವಿ ಕುಮಾರ್ ಸಮ್ಮುಖದಲ್ಲಿ ಜೆಡಿಎಸ್ ಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಮೇಲೂ ರವಿ ಅವರು ಸಮಾಜ ಸೇವಕನಾಗಿ
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆಯನ್ನು ಮಾಡುತ್ತ ಬಂದಿದ್ದು ಇದನ್ನು ಗುರುತಿಸಿದ ಜನ ನನಗೆ ಚುನಾವಣೆಯಲ್ಲಿ ನಿಲ್ಲಲು ಪ್ರೋತ್ಸಾಹಿಸಿದರು. ಜನರ ಆಶೀರ್ವಾದದಿಂದ ಈ ಬಾರಿ ಶಾಸಕನಾಗಿ ವಿಧಾನಸೌಧಕ್ಕೆ ಹೋಗುತ್ತೇನೆ.ಹಾಗೂ ಹೆಚ್. ಡಿ. ಕುಮಾರಸ್ವಾಮಿ ಅವರು ಈ ರಾಜ್ಯದ ಮುಖ್ಯಮಂತ್ರಿಗಳಾಗುತ್ತಾರೆ.
ಹಳ್ಳಿ ಹಳ್ಳಿಯಲ್ಲೂ ಪ್ರಚಾರದ ವೇಳೆ ಜನರ ಬೆಂಬಲ ಹೆಚ್ಚಾಗಿದೆ ಎಂದು ನುಡಿದರು.