ಮಂಡ್ಯ/ಮಳವಳ್ಳಿ: ನಾನು ಏಕಾಂಗಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವೆ. ಅದನ್ನು ಸಹಿಸಲಾರದ ವಿರೋಧ ಪಕ್ಷದವರು ಹೊಟ್ಟೆಕಿಚ್ಚಿ ನಿಂದ ಜನರಿಗೆ ನನ್ನ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಎಂದು ಶಾಸಕ ಪಿಎಂ ನರೇಂದ್ರಸ್ವಾಮಿ ಆರೋಪಿಸಿದರು.
ಮಳವಳ್ಳಿ ತಾಲ್ಲೂಕಿನ ಹಾಡ್ಲಿ- ಮೇಗಳಪುರ ಸಕ೯ಲ್ ನಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಪಶುಭಾಗ್ಯ ಯೋಜನೆಯಡಿ ಪಶುಸಾಲ ವಿತರಣೆ ಹಾಗೂ ಶುದ್ದ ಕುಡಿಯುವ ನೀರು ಘಟಕದ ಶಂಕುಸ್ಥಾಪನೆ ಯನ್ನು ನೇರಿವೇರಿಸಿ ಮಾತನಾಡಿದ ಅವರು ಪಕ್ಷದಲ್ಲಿ ಯುವಕರ ಕೊರೆತೆಯಿತ್ತು ಆದಕಾರಣ ಕಾಂಗ್ರೆಸ್ 1978 ರಿಂದ 1989 ರವರೆಗೆ ಅಧಿಕಾರ ಕಳೆದುಕೊಂಡಿತ್ತು ,ನಾನು ಅಧಿಕಾರಕ್ಕೆ ಬಂದ ನಂತರ ಕ್ಷೇತ್ರದಲ್ಲಿ ಯುವಕರಿಗೆ ಸ್ಥಾನಮಾನ ನೀಡಿದ್ದೇನೆ, ,ವಿರೋಧಿಗಳ ಅಧಿಕಾರವನ್ನು ಹಂತ ಹಂತವಾಗಿ ಕಿತ್ತು ನಮ್ಮ ಯುವಕರಿಗೆ ಅಧಿಕಾರ ನೀಡಿದ್ದೇನೆ. ಎಂದರು.ವಿರೋಧ ಪಕ್ಷದವರು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದರೆ ವಿನಹ ಅವರ ಸ್ವಂತಿಕೆಯಿಂದಲ್ಲ, ಅವರ ಹೆಸರು ಇಲ್ಲದೆ ಇವರು ಶಾಸಕರಾಗಿ ಬರಲಿ ಎಂದು ಸವಾಲು ಹಾಕಿದರು.
ಕಾಯ೯ಕ್ರಮದಲ್ಲಿ ತಾ.ಪಂ ಅಧ್ಯಕ್ಷ ಆರ್ .ಎನ್ ವಿಶ್ಚಾಸ್, ಕೃಷಿಪತ್ತಿನ ಸಹಕಾರ ಸಂಘ ಅದ್ಯಕ್ಷ ಪ್ರಕಾಶ, ಎಪಿಎಂಸಿ ಅಧ್ಯಕ್ಷ ಅಂಬರೀಶ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ವೆಂಕಟರಾಜು, ಟಿಎಪಿಎಂಎಸ್ ಅಧ್ಯಕ್ಷ ಚೌಡೇಶ್ . ಕಸಾಪ ಅಧ್ಯಕ್ಷ ಶಿವಮಾದೇಗೌಡ ಸೇರಿದಂತೆ ಮತ್ತಿತ್ತರರು ಇದ್ದರು