ಬೆಂಗಳೂರು: ಚಿಕ್ಕಮ್ಮನ ಜೊತೆ ಅಕ್ರಮ ಸಂಬಂದ ಹೊಂದಿದ್ದ ಎಂಬ ಕಾರಣಕ್ಕೆ ಸ್ನೇಹಿತನನ್ನೆ ಕೊಂದ ಪ್ರಕರದ ಅರೋಪಿಯನ್ನು 24 ಗಂಟೆಗಳ ಅವದಿಯಲ್ಲಿ ಬಂದಿಸುವಲ್ಲಿ ವರ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಲಾಜಿ(23) ಬಂದಿತ ಅರೋಪಿಯಾಗಿದ್ದು, ಮಂಗಳವಾರ ರಾತ್ರಿ ಬೆಂಗಳೂರಿನ ಸಜಾಪುರ ಮುಖ್ಯರಸ್ತೆಯ ಸೂಲಿಕುಂಟೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ತನ್ನ ಸ್ನೇಹಿತ ಬಾಲರಾಜ್(35) ಕೊಲೆ ಮಾಡಿದ್ದ. ಕೊಲೆಯಾದ ಬಾಲರಾಜ್ ಅರೋಪಿ ಬಾಲಾಜಿ ಚಿಕ್ಕಮ್ಮನ ಜೊತೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದ ಕಾರಣಕ್ಕಾಗಿ ದೊಮ್ಮಸಂದ್ರ ಹಾಗೂ ಚಂದಾಪುರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಕೊಲೆಮಾಡಿ, ದೊಡ್ಡ ಕನ್ನಲ್ಲಿಯ ಸ್ನೇಹಿತನ ಮನೆಯಲ್ಲಿ ಅವಿತು ಕುಳಿತಿದ್ದ. ಆದರೆ ಕೊಲೆಯಾದ ರಾತ್ರಿ ಬಾಲಾಜಿ ಬಾಲರಾಜ್ನನ್ನು ಆಟೋದಲ್ಲಿ ಕರೆತರುವಾಗ ಸ್ಥಳಿಯರೊಬ್ಬರು ನೋಡಿದ್ದರಿಂದ ಅರೋಪಿ ಸಿಕ್ಕಿಬಿದ್ದಿದ್ದು, ಕೊಲೆನಡೆದ 24 ಗಂಟೆ ಅವದಿಯೊಳಗೆ ಅರೋಪಿಯನ್ನು ಬಂದಿಸುವಲ್ಲಿ ವರ್ತೂರು ಪೋಲಿಸರು ಯಶಸ್ವಿಯಾಗಿದ್ದಾರೆ.