ಕಸಾಯಿಕಾಣೆಗಳನ್ನ ತೆರವುಗೊಳಿಸಿ ಎಂದು ಆಗ್ರಹ.

0
288
  1. ಬಾಗಲಕೋಟೆ : ಅಕ್ರಮ ಕಸಾಯಿಕಾಣೆ ನಡೆಸುದರಲ್ಲಿ ಭಾಗಿಯಾದವರನ್ನ ಬಂಧಿಸಿ,ಕಸಾಯಿಕಾಣೆಗಳನ್ನ ತೆರವುಗೊಳಿಸಿ ಎಂದು ಒತ್ತಾಯಿಸಿ ಹಿಂದೂ ಪರ ಸಂಘಟನೆಗಳು ಬಾಗಲಕೋಟೆ ಜಿಲ್ಲೆ ಜಮಖಂಡಿಯ ದೇಸಾಯಿ ವೃತ್ತದಲ್ಲಿ ಪ್ರತಿಬಟನೆ ನಡೆಸಿದ್ರು..ನಗರದ ದೇಸಾಯಿ ವೃತ್ತದಲ್ಲಿ ಜಮಾಯಿಸಿದ ಹಿಂದೂಪರ ಸಂಘಟನೆ ಸದಸ್ಯರು ಗೋ ರಾಕ್ಷಸರ ವಿರುದ್ಧ ಹರಿಹಾಯ್ದ್ರು..ಪ್ರತಿಭಟನಾ ರ್ಯಾಲಿ ಮೂಲಕ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಕರಿಲಿಂಗನವರ್ ಗೆ ಮನವಿ ಸಲ್ಲಿಸಿದ್ರು..ಪ್ರತಿಭಟನೆಯಲ್ಲಿ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ, ಜಿ.ಎಸ್ ನ್ಯಾಮಗೌಡ್ ಹಾಗೂ ಇನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ರು. ಕಳೆದ ವಾರವಷ್ಟೆ ಜಮಖಮಡಿಯಲ್ಲಿ ಅಕ್ರಮ ಕಸಾಯಿಕಾಣೆಗೆ ಸಾಗಿಸುತ್ತಿದ್ದ 25ಕ್ಕೂ ಹೆಚ್ಚು ಹಸುಗಳನ್ನ ರಕ್ಷಿಸುವಲ್ಲಿ ಹಿಂದೂ ಪರ ಸಂಘಟನೆಗಳು ಯಶಸ್ವಿಯಾಗಿದ್ವು..ನಗರದಲ್ಲಿಯೇ ಅಕ್ರಮ ಕಸಾಯಿಕಾಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳ ಗಮನಕ್ಕೂ ತಂದಿದ್ದು..ಅಕ್ರಮ ಕಸಾಯಿಕಾನೆ ನಡೆಸುತ್ತಿದ್ದವರ ಮೇಲೆ ಕೇಸ್ ದಾಖಲಿಸಿ ಶಿಘ್ರವೇ ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡಿಸಿದ್ರು..

LEAVE A REPLY

Please enter your comment!
Please enter your name here