ನೊಂದವರ ಬಂಧು ನಾನು:ಧೀರಜ್ ಮುನಿರಾಜು.

0
12

ದೊಡ್ಡಬಳ್ಳಾಪುರ: ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಕಸಬಾ ಹೋಬಳಿ,ಮಜರಾಹೊಸಹಳ್ಳಿ ಮತ್ತು ಕೊನಘಟ್ಟ ಪಂಚಾಯತಿಯ ಸೊಣ್ಣಪ್ಪ ನಹಳ್ಳಿ ಮತ್ತು ಮಜರಾಹೊಸ ಹಳ್ಳಿ ಗ್ರಾಮದಲ್ಲಿ ನಾಲ್ಕು ಕುಟುಂಬಗಳ ಮನೆಯ ಗೋಡೆಗಳು ಹಾಗೂ ಮೇಲ್ಚಾವಣಿಗಳು ಬಿದ್ದು ಮನೆಗಳು ಹಾನಿಯಾಗಿರುವ ವಿಚಾರ ತಿಳಿದು ತಕ್ಷಣವೇ ಬಿಜೆಪಿ ಮುಖಂಡರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕರಾದ ಧೀರಜ್ ಮುನಿರಾಜ್ ಸ್ಥಳೀಯ ಮುಖಂಡರುಗಳ ಜೊತೆಗೂಡಿ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆಯ ಕುಟುಂಬಗಳಿಗೆ ಸ್ಥಳದಲ್ಲೇ ಆರ್ಥಿಕ ಸಹಾಯ ನೀಡಿ ನೊಂದ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಕೊನಘಟ್ಟ ಗ್ರಾಮ ಪಂಚಾಯತಿ ಸದಸ್ಯರು ಪ್ರಭಾಕರ್, ಶ್ರೀ ಮತಿ ಮಂಗಳಮಂಜುನಾಥ್,ಮಾಜಿ ನಗರಸಭಾ ಅಧ್ಯಕ್ಷ ಮುದ್ದಪ್ಪ, ದರ್ಗಾ ಜೊಗಹಳ್ಳಿ ಪಂಚಾಯತಿ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಕೆ.ನಾಗೇಶ್, ಬಾಶೆಟ್ಟಹಳ್ಳಿ ಪಂಚಾಯತಿ ಮುಖಂಡ ರಾದ ಮುನಿಶಂಕರ್,ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ಕಾಂತರಾಜ್,ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಶಿವಕುಮಾರ್, ಮಂಜುನಾಥ್,ಚಿಕ್ಕ ತುಮ ಕೂರು ಮುಖಂಡರಾದ ಮಂಜುನಾಥ್, ಮುನೇ ಗೌಡ,ಮೋಹನ್ ಅನೇಕ ಮುಖಂಡರು ಸ್ಥಳೀಯ ನಾಗರೀಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here