ಸರ್ಕಾರಿ ಆಸ್ಪತ್ರೆಯ ಮಾತ್ರೆ ಔಷಧಿಗಳ ಅಕ್ರಮ ಮಾರಾಟ.!?

0
19

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ: ಇಲ್ಲೊಬ್ಬ ಜೈಕುಮಾರ ಎಂಬ”ಡಿ ಗ್ರೂಪ್‌ ನೌಕರ ಸರ್ಕಾರ‌ ನೀಡುತ್ತಿರುವ ಸಂಬಳ ಸಾಲದೇ, ಸರ್ಕಾರಿ ಆಸ್ಪತ್ರೆಯಿಂದ ತಾನು ಲಪಾಟಾಯಿಸಿ ತಂದ!? ಮಾತ್ರೆ ಔಷದಿಗಳನ್ನು ಮಾರಾಟ ಮಾಡಿ ಅಡ್ಡದಾರಿ ಸಂಪಾದನೆಗೆ ನಿಂತಿದ್ದಾನೆ ಎಂಬ ಆರೋಪ ಕೇಳಿ ಬರುತಿತ್ತು. ಆರೋಪದ ಹಿನ್ನಲೆಯಲ್ಲಿ ನಮ್ಮ ತಂಡ ನಡೆಸಿದ ಚುಟುಕು ಕಾರ್ಯಾಚರಣೆಯಲ್ಲಿ ಜೈಕುಮಾರ ಎಂಬ”ಡಿ ಗ್ರೂಪ್‌ ನೌಕರನ ಬಣ್ಣ ಬಯಲಾಗಿದೆ.ಇಲ್ಲಿನ ತಾಯಿ ಮಗು ಆಸ್ಪತ್ರೆಗೆ ಸರ್ಕಾರ ದಿಂದ ಸರಬರಾಜಾಗುವ ಮಾತ್ರೆ ಟಾನಿಕ್ ಗಳನ್ನೂ ಬಿಡದೇ ಅಕ್ರಮವಾಗಿ ಮಾರಾಟ ಮಾಡಿ,ಅಡ್ಡ ದಾರಿಯಲ್ಲಿ ದುಡ್ಡು ಮಾಡಿಕೊಳ್ಳಲು ಮುಂದಾಗಿದ್ದಾನೆ ಎಂಬ ಸತ್ಯವೂ ಬಯಲಾಗಿದೆ. ನಿಮಗೇನಾದರೂ,ಅನಾರೋಗ್ಯ ವಿದ್ದಲ್ಲಿ ಎಂಬಿಬಿಎಸ್,ಬಿಎಂಎಸ್ ಯಾವುದೇ ಡಾಕ್ಟರ್ ಗಳನ್ನು ಸಂಪರ್ಕಿಸುವುದೇ ಬೇಡವಂತೆ! ನಗರದ ಸರ್ಕಾರಿ ತಾಯಿಮಗು ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನಾಗಿ ಕಾರ್ಯನಿರ್ವಹಿಸುವ ಈ ಅಯೋಗ್ಯ ಜೈಕುಮಾರ ಎಂಬ ಈ ಆಸಾಮಿಯೇ ಇಲ್ಲಿ‌ ಡಾಕ್ಟರು,ಕಾಂಪೌಂಡರ್ ಮತ್ತು ಫಾರ್ಮಾಸಿಸ್ಟ್ ಎಲ್ಲಾ.!? ಇವನನ್ನು ಸಂಪರ್ಕಿಸಿ (93537 80575 )ಮಾತ್ರೆ ಚೀಟಿ ವಾಟ್ಸಪ್ ಮಾಡಿದರೇ ಸಾಕು,‌ನಿಮಗೆ ಬೇಕಾದ ಮಾತ್ರೆ ಔಷಧಿ ‌ಸರ್ಕಾರಿ ಆಸ್ಪತ್ರೆಯಿಂದ ಮಾತ್ರೆ ಔಷಧಿಗಳನ್ನು ನೀವು ಎಲ್ಲಿದ್ದರೆ,ಅಲ್ಲಿಗೆ ತಾನೇ ತಂದುಕೊಡ್ತಾನೆ.ಆತನೇ ದೃಶ್ಯಗಳಲ್ಲಿ ಹೇಳಿ ಕೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳ ಹೆಸರ ನ್ನು ಪ್ರಸ್ತಾಪಿಸುವ ಈತ ಅವರಿಗೆ ಬೇಕಾದವು ಗಳನ್ನು ನಾನೆ ಸರಬರಾಜು ಮಾಡುವುದಾಗಿ ಹೇಳಿಕೊಂಡು ತನ್ನ ಪ್ರಭಾವ ವನ್ನು ತನ್ನ ಅಡ್ಡ ದಾರಿ ಗಿರಾಕಿಗಳ ಮುಂದೆ ಪ್ರಚಾರ ಪಡೆಸಿ ಕೊಳ್ಳುತ್ತಾನೆ.ಇಷ್ಟಕ್ಕೆ ಮಿಗಿಯದ ಈತನ ವ್ಯಾಪಾರ ವ್ಯಾಪ್ತಿ ಮುಂದು ವರೆಸುತ್ತಾ ಸಾಕಷ್ಟು ಮೆಡಿಕಲ್ ಸ್ಟೋರುಗಳಲ್ಲಿ ಲಭ್ಯ ವಿಲ್ಲದ ಮಾತ್ರೆ ಔಷಧಿ ಗಳನ್ನು ಬಾಕ್ಸ್ ಗಟ್ಟಲೇ ತಂದುಕೊಡ್ತೇನೆ, ಅಷ್ಟೇ ಅಲ್ಲ ಡಾಕ್ಟರುಗಳಿಂದ ನಿಮಗೆ ಯಾವುದೇ ಸರ್ಟಿಫಿಕೆಟ್ ಬೇಕಿದ್ದರೂ ಒಂದೇ ದಿನದಲ್ಲಿ ಕೊಡಿಸ್ತೀನಿ.ನೀವು ಬರೋದೇ ಬೇಡ ಎನ್ನುವ ಈತ,ನೀವು ಮಾತ್ರ ಯಾರಿಗೂ ಹೇಳ ಬಾರದು ಎಂದು ಅಡ್ಡದಾರಿ ಯಲ್ಲಿ ಮಾತ್ರೆ ಖರೀದಿಸುವವರಿಗೆ ಎಚ್ಚರಿಕೆ ನೀಡ್ತಾನೆ. ಸರ್ಕಾರ ದಿಂದ ಬಡ,ಬಗ್ಗರಿಗೆ ಅನುಕೂಲಕ್ಕಾಗಿ ಸರ್ಕಾರ ರೂಪಿಸುವ ಕೋಟ್ಯಾಂತರ ಹಣ ವೆಚ್ಚದ ಯೋಜನೆಗಳಲ್ಲಿ ಸೋರಿಕೆ ಅಥವಾ ಅಡ್ಡದಾರಿ ಹಿಡಿದ ಯೋಜನೆಗಳ ಪಟ್ಟಿಗೆ ಇದೂ ಒಂದು ಸೇರ್ಪಡೆ ಗೊಳ್ಳುತಿದೆ ಎಂದರೆ ತಪ್ಪಾಗ ಲಾರದು! ಕಾರಣ ಇಲಾಖೆಯ ಸಂಪೂರ್ಣ ನಿರ್ವಹಣೆಗೆ ಮತ್ತು ಸರಬರಾಜಾಗುವ ಎಲ್ಲಾ ದಾಸ್ತಾನು ರಕ್ಷಣೆ ಮತ್ತು ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡುವ ಜವಾಬ್ದಾರಿಗಾಗಿ ಸರ್ಕಾರವೇ ನೇಮಿಸಿ ಇವರುಗಳಿಗೆ ಜನ ಸಾಮಾನ್ಯರ ತೆರಿಗೆಹಣ ಕೋಟ್ಯಾಂತರ ರೂಗಳು ಸಂಬಳದ ರೂಪ ದಲ್ಲಿ ವೆಚ್ಚಮಾಡಿ ಜಿಲ್ಲೆಗೆ ಒಬ್ಬರು ಜಿಲ್ಲಾ ಆರೋಗ್ಯಾಧಿಕಾರಿ, ತಾಲ್ಲೂಕಿಗೆ ಒಬ್ಬರು ತಾಲ್ಲೂಕು ಆರೋಗ್ಯಾಧಿಕಾರಿಗಳು ಸಾಲದು ಎಂಬಂತೆ ಆಸ್ಪತ್ರೆಗೆ ಒಬ್ಬರು ಆಡಳಿತಾಧಿಕಾರಿ ಇದ್ದರೂ ಇಷ್ಷೆಲ್ಲಾ ಅನಾಚಾರ ಗಳು ನಡೆಯುತ್ತವೆ ಎಂದರೆ ಏನದರ ಅರ್ಥ.? ಇವರೆಲ್ಲಾ ಕರ್ತವ್ಯ ನಿರ್ವಹಿಸುತಿದ್ದಾರಾ ಅಥವಾ ಕಳ್ಳಕಾಕರಿಗೆ‌ ಸಹಕರಿಸುತಿದ್ದಾರಾ!? ಎಂಬುದನ್ನು ನೀವೇ ಊಹಿಸಿಕೊಳ್ಳಿ.

LEAVE A REPLY

Please enter your comment!
Please enter your name here