ಮೂವರನ್ನು ಕೊಲೆ ಮಾಡಿ ಕಾರು ಸಮೇತ ಸುಟ್ಟುಹಾಕಿದ್ದ ಪ್ರಕರಣ :ಇಬ್ಬರ ಬಂದನ

0
15

* ಮೂವರನ್ನು ಸುಟ್ಟು ಪರಾರಿಯಾಗಿದ್ದ ಪ್ರಕರಣ ಭೇಧಿಸಿದ ಪೋಲಿಸ್ ರ ಕಾರ್ಯ ಕ್ಷಮತೆ ಶ್ಲಾಘನೆ : ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ.*

ತುಮಕೂರು:ಇತ್ತೀಚೆಗೆ ಕೋರ ಪೊಲೀಸ್ ಠಾಣೆ ವ್ಯಾಪ್ತಿಯ  ಕುಚ್ಚಂಗಿ ಕೆರೆ ಅಂಗಳದಲ್ಲಿ ಕಾರು ಸಮೇತ ಮೂವರನ್ನು ಕೊಲೆ ಮಾಡಿ ಬೆಂಕಿ ಹಚ್ಚಿ  ಪರಾರಿ ಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಲಾಗಿದ್ದು ಉಳಿದ 6 ಮಂದಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಎಸ್ಪಿ ಅಶೋಕ್ ಕೆ ವಿ ರವರು ಮಾಹಿತಿ ನೀಡಿದರು.

ಇಂದು ಮಾಧ್ಯಮ ಗೋಷ್ಠಿ ಉದ್ದೇಶಿಸಿ ಅವರು ಮಾತನಾಡುತ್ತಾ ಆರೋಪಿಗಳ ಜಾಡು ಹಿಡಿದು ಬಂಧಿಸಿ ಮುದ್ದೆ ಮುರಿಯಲು ಜೈಲಿಗೆ ಬಿಟ್ಟ ತುಮಕೂರಿನ ಚಾಣಾಕ್ಷ ಪೋಲಿಸ್ ಸಿಬ್ಬಂಧಿಗಳ ಕಾರ್ಯ ವೈಖರಿಗೆ ಶ್ಲಾಘನೆ ವ್ಯಕ್ತ ಪಡಿಸಿ ಬೆನ್ನು ತಟ್ಟಿದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಾದ ತುಮಕೂರಿನ ಶಿರಾ ಗೇಟ್ ನಿವಾಸಿ ಪಾತರಾಜ ಅಲಿಯಾಸ್, ರಾಜು ಹಾಗೂ ಸತ್ಯಮಂಗಲ ನಿವಾಸಿ ಗಂಗರಾಜು ಬಂಧಿತ ಆರೋಪಿಗಳಾಗಿದ್ದಾರೆ. ಮತ್ತು 6 ಮಂದಿ ಸಹಚರರಾದ ಪುಟ್ಟಸ್ವಾಮಯ್ಯನ ಪಾಳ್ಯದ ಮಧುಸೂಧನ್ 24 ವರ್ಷ. ಸಂತೆಪೇಟೆಯ ನವೀನ್ 24 ವರ್ಷ. ವೆಂಕಟೇಶ್ ಪುರದ ಕೃಷ್ಣ 22 ವರ್ಷ. ಹೊಂಬಯ್ಯನ ಪಾಳ್ಯದ ಗಣೇಶ 19 ವರ್ಷ. ನಾಗಣ್ಣನ ಪಾಳ್ಯದ ಕಿರಣ್ 23 ವರ್ಷ. ಹಾಗೂ ಕಾಳಿದಾಸ ನಗರದ ಸೈಮನ್ 18 ವರ್ಷ. ಇವರ ಪತ್ತೆಗೆ ಬಲೆ ಬೀಸಲಾಗಿದೆ. ಬಂಧಿತರಿಂದ 6 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ.

ನಿಧಿ ಹುಡುಕಿಕೊಡುವುದಾಗಿ ಆಸೆ ತೋರಿಸಿ ಕೊಲೆಯಾದ ಇಸಾಕ್, ಶಾಹುಲ್, ಸಿದ್ದಿಕ್ ಅವರುಗಳಿಂದ 6 ಲಕ್ಷ ಪಡೆದಿದ್ದ ಪಾತರಾಜು ನಿಧಿಯನ್ನು ಹುಡುಕಿಕೊಡಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ, ಕೊಲೆಯಾದ ಮೂವರು ಹಣ ವಾಪಸ್ ನೀಡುವಂತೆ ಪಾತರಾಜು ಅವರನ್ನ ಹುಡುಕಿಕೊಂಡು ಬಂದಾಗ ಪಾತರಾಜು 6 ಜನ ಸಹಚರ ರೊಂದಿಗೆ ಕೊಲೆ ಮಾಡಿಸಿದ್ದಾನೆ ಎಂದು ಅವರು ಮಾಹಿತಿ ನೀಡಿದರು.

ಅಪರ ಪೊಲೀಸ್ ವರಿಷ್ಟಾಧಿಕಾರಿಗಳಾದ ಸಿವಿಲ್ ವಿಭಾಗದ ಮರಿಯಪ್ಪ, ಕ್ರಿಮಿನಲ್ ವಿಭಾಗದ ಪೊಲೀಸ್ ನ ಅಬ್ದುಲ್ ಖಾದರ್, ನಗರದ ಡಿ. ವೈ. ಎಸ್. ಪಿ ಚಂದ್ರಶೇಖರ್. ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ಬಿ.ಎಸ್ ಮತ್ತು ಸೆನ್ ಪೋಲಿಸ್ ಇನ್ಸ್ ಪೆಕ್ಟರ್ ಅವಿನಾಶ್ ಮತ್ತಿತರ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here