ಮತದಾನ ಜಾಗೃತಿಗಾಗಿ ಸೈಕಲ್ ಜಾಥಾ

0
16

ಸೈಕಲ್ ಸವಾರಿಮಾಡಿ ಗಮನ ಸೆಳೆದ ಡಿಸಿ,ಎಸ್ಪಿ,ಸಿಇಓ.

ಜಮಖಂಡಿ: ಮತದಾರ ರಲ್ಲಿ ಮತದಾನದ ಮಹತ್ವವನ್ನು ಸಾರಲು ಹಾಗೂ ತಪ್ಪದೆ ಮತದಾನ ಮಾಡುವಂತೆ ಪ್ರೇರೆಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಮರನಾಥ ರೆಡ್ಡಿ ಹಾಗೂ ಜಿ.ಪಂ ಸಿಇಓ ಶಶಿಧರ ಕುರೇರ ಸೈಕಲ ಸವಾರಿ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದರು.

ಜಿಲ್ಲಾಡಳಿತ ಜಿಲ್ಲಾ ಸ್ವೀಪ ಸಮಿತಿ ಮತ್ತು ಜಮಖಂಡಿ ತಾಲೂಕು ಸ್ವೀಪ ಸಮಿತಿ ಹಾಗೂ ನಗರಸಭೆ ಸಹಯೋಗ ದಲ್ಲಿ ಜಮಖಂಡಿ ತಹಶಿಲ್ದಾರ ಕಾರ್ಯಾಲಯದ ಆವರಣ ದಲ್ಲಿ ಹಮ್ಮಿಕೊಂಡ ಸೈಕಲ್ ಜಾಥಾದಲ್ಲಿ ಸೈಕಲ್ ಸವಾರಿ ಮಾಡಿದ ಜಿಲ್ಲಾಧಿಕಾರಿಗಳು, ಚುನಾವಣಾ ಆಯೋಗದ ಮುಖ್ಯ ಉದ್ದೇಶ ನೂರಕ್ಕೆ ನೂರರಷ್ಟು ಮತದಾನ ವಾಗಬೇಕು ಎಂಬುದು ಇದ್ದು ಯಾರು ಕೂಡಾ ಚುನಾವಣಾ ಪ್ರಕ್ರಿಯೆ ಯಿಂದ ದೂರ ಉಳಿಯಬಾರದು ಎಂದರು.

ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಲವಾರು ವಿಶೇಷ ಕಾರ್ಯಗಳನ್ನು ಹಮ್ಮಿ ಕೊಂಡಿದೆ,85 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನ ಮಾಡುವುದು,ಪಿಡಬ್ಲೂಡಿ ಮತದಾರರಿಗೆ ವಿಶೇಷ ಸೌಲಭ್ಯ ಕಲ್ಪಿಸುವುದು, ಸಖಿ ಮತಗಟ್ಟೆ ಸೇರಿದಂತೆ ವಿಶೇಷ ಮತಗಟ್ಟೆ ಸ್ಥಾಪನೆ ಮಾಡಲಾಗುತ್ತದೆ,ಜಮಖಂಡಿ ಮತಕ್ಷೇತ್ರದ ಎಲ್ಲ ಮತದಾರರು ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೆ ಮತಗಟ್ಟೆಗೆ ಬಂದು ಮುಕ್ತ ನಿಷ್ಪಕ್ಷಪಾತ ವಾಗಿ ಮತ ಚಲಾಯಿಸಿ ಪ್ರಜಾ ಪ್ರಭುತ್ವ ವನ್ನು ಗಟ್ಟಿ ಗೊಳಿಸಲು ತಿಳಿಸಿದರು.

ಸೈಕಲ್ ಜಾಥಾ ದೇಸಾಯಿ ಸರ್ಕಲ,ಅಶೋಕ ಸರ್ಕಲ, ತಹಶಿಲ್ದಾರ ಕಾರ್ಯಾಲಯ,ಟಿಪ್ಪು ಸುಲ್ತಾನ್ ಸರ್ಕಲ್, ಬಸವೇಶ್ವರ ಸರ್ಕಲ, ಅಂಬೇಡ್ಕರ್ ಸರ್ಕಲ,ಶಿವಾಜಿ ಸರ್ಕಲಗೆ ಮುಕ್ತಾಯ ಗೊಂಡಿತು, ಮತದಾನ ಜಾಗ್ರತಿ ಸಂದೇಶ ಗಳುಳ್ಳ ಟೋಪಿ ಹಾಗೂ ಟೀ ಶರ್ಟ್ ಧರಿಸಿ ಎಲ್ಲರ ಗಮನ ಸೆಳೆದರಲ್ಲದೇ ಪ್ರತಿಯೊಂದು ಸೈಕಲ್ ಗಳಿಗೆ ಜಾಗ್ರತಿ ಘೋಷಣೆ ಗಳ ಪಲಕಗಳನ್ನು ಹಾಕಿಕೊಂಡಿದ್ದರು.

ಸೈಕಲ್ ಜಾಥಾದಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ,DYSP ಶಾಂತವೀರ ಈ,ತಹಶಿಲ್ದಾರ ಸದಾಶಿವ ಮಕ್ಕೋಜಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚಲವಯ್ಯಾ,ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ, ತಾಲೂಕು ವೈದ್ಯಾಧಿಕಾರಿ ಗೈಬುಸಾಬ ಗಲಗಲಿ,ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ,ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here