ಶ್ರಮಿಕ ಕೊರೋನಾ ವಾರಿಯರ್ಸ್ ಗೆ ಸನ್ಮಾನ.

0
8

ದೊಡ್ಡಬಳ್ಳಾಪುರ: ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಸರ್ಕಾರದ ಪಡಿತರ (ಅಕ್ಕಿ,ರಾಗಿ, ಗೋದಿ ಬೇಳೆ) ಯನ್ನು ವಿವಿಧ ಕಡೆಯಿಂದ ರವಾನೆ ಮಾಡಿದ ಸಾವಿರಾರು ಮೂಟೆಗಳನ್ನು ಒಂದು ಕಡೆ ದಾಸ್ತಾನು ಮಾಡಿ ಮತ್ತೆ ಅವುಗಳನ್ನು ತಾಲೂಕಿನ ಸರಿಸುಮಾರು 85 ಪಾಯಿಂಟ್ ಗಳಿಗೆ ಸಾಗಿಸಿ ಪಡಿತರರಿಗೆ ಸಮಯಕ್ಕೆ ಸರಿಯಾಗಿ ತಲುಪಿಸಲು ಹಗಲಿರುಳು ತೆರೆಮರೆ ಯಲ್ಲಿ ಶ್ರಮಿಸಿ ಜನಸಾಮಾನ್ಯರಿಗೆ ಸಹಕಾರಿಗಳಾಗಿ ದುಡಿದ ಹಮಾಲಿಗರನ್ನು ಶ್ರಮಿಕ ಕೊರೋನಾ ವಾರಿಯರ್ಸ್ ಎಂದು ಗೌರವಿಸಿ ಇಲ್ಲಿನ ಟಿಎಪಿಎಂಸಿಎಸ್ ಗೋಡೌನಿನ ಆವರಣದಲ್ಲಿ ಕರವೇ(ಪ್ರವೀಣ್ ಕುಮಾರ್ ಶೆಟ್ಟಿ ಬಣ) ದ ಕಾರ್ಯಕರ್ತರು ಸನ್ಮಾನಿಸದರು. ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ಗೋದಾಮಿನ ಮೇನೇಜರ್ ನಾಗೇಶ್,ಸಂಘಟನೆಯ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ತಾ.ಕಾರ್ಯ ದರ್ಶಿ ಎಸ್ಎಲ್.ವೇಣು,ಜೋಗಹಳ್ಳಿ ಅಮ್ಮು ಹಾಜರಿದ್ದರು.

LEAVE A REPLY

Please enter your comment!
Please enter your name here