ಆಟದ ಮೈದಾನ ಉಳಿಸಿಕೊಡುವಂತೆ‌ ಮನವಿ

0
10

ಬೆಂಗಳೂರು/ಕೆಆರ್.ಪುರ : ವಿಶ್ವದಲ್ಲೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಾನಗರಿ  ಬೆಂಗಳೂರಿನಲ್ಲಿ ಸರ್ಕಾರಿ ಜಾಗಗಳ ಮೇಲೆ ಭೂಗಳ್ಳರ ಕಣ್ಣುಬಿದ್ದಿದೆ. ಹೇಗಾದರೂ ಮಾಡಿ ಸರ್ಕಾರಿ ಗೋಮಾಳ, ಕೆರೆಯಂಗಳ,ಬಂಡೆ-ಹಳ್ಳ-ಕೊಳ್ಳಗಳನ್ನು ಕಬಳಿಸಲು ಹುನ್ನಾರ ನಡೆಯುತ್ತಿದೆ. ಬೆಂಗಳೂರು ಪೂರ್ವ ತಾಲೂಕು ಕೃಷ್ಣರಾಜಪುರ ಸಮೀಪದ ಮೇಡಹಳ್ಳಿ ಸ.ನಂ 89ರಲ್ಲಿ 6ಎಕರೆ ಸರ್ಕಾರಿ ಗೋಮಾಳದ ಬಂಡೆ ಹಳ್ಳ ಇತ್ತು.ಸ್ಥಳೀಯ ಕಲ್ಲುಕುಟುಕರಿರುವ ಜ್ಯೋತಿನಗರ ಜನ ಭಾರಿ-ಹಳ್ಳವನ್ನು ಮುಚ್ಚಿ ಸದ್ಯ ಆಟದಮೈದಾನ ಮಾಡಿಕೊಂಡಿದ್ದಾರೆ. ಕೆರೆಕಿತ್ತಗನೂರು, ಮೇಡಹಳ್ಳಿ, ಭಟ್ರಹಳ್ಳಿ, ಚಿಕ್ಕಬಸವನಪುರ,ಕೆರೆಗುಂಡ್ಲು,ಪಾರ್ವತಿನಗರ, ಜನತಾ ಕಾಲೋನಿ,ಅಂಬೇಡ್ಕರ್ ನಗರ ಸುತ್ತ ಮುತ್ತಲ ಹತ್ತಾರು ಪ್ರದೇಶಗಳ ಜನ ವಾಕ್ ಮಾಡಲು,ಪುಟ್ಬಾಲ್,ಕ್ರಿಕೇಟ್ ಹೀಗರ ವಿವಿಧ ಆಟ ಆಡಲು ಈ ಮೈದಾನವನ್ನು ಬಳಸಿ ಕೊಳ್ತಿದ್ದಾರೆ. ಆದರೆ ಸರ್ಕಾರದ ವಿವಿಧ ಇಲಾಖೆ ಮತ್ತು ಕೆಲವು ರಾಜಕೀಯ,ಭೂಮಾಫಿಯ ಜನ ಮೈದಾನದ ಜಾಗ ಕಬಳಿಸಲು ಯತ್ನಿಸುತ್ತಿದ್ದಾರೆ. ಸ್ಥಳೀಯ ಜ್ಯೋತಿನಗರದ ಜನ ತಹಶಿಲ್ದಾರ್, ಜಿಲ್ಲಾಧಿಕಾರಿಗಳು,ಸ್ಥಳೀಯ ಶಾಸಕ- ಸಚಿವರೂ ಆಗಿರುವ ಭೈರತಿ ಬಸವರಾಜು ರವರಿಗೆ ಮನವಿ ಮಾಡಿದ್ದಾರೆ. ಇದು ಆಟದ ಮೈದಾನಕ್ಕಾಗಿ ಉಳಿಸಿ ಕೊಡುವು ದಾಗಿ ಶಾಸಕ ಭೈರತಿ ಬಸವರಾಜು ಭರವಸೆ ನೀಡಿದ್ದಾರೆ.ಆದರೂ ಮೈದಾನದ ಜಾಗ ಕಬಳಿಕೆ ಯತ್ನ ನಡೆಯುತ್ತಲೇ ಇದೆ. ನಾವು ಯಾವ ಕಾರಣಕ್ಕು ಜಾಗವನ್ನು ಬೇರೆ ಉದ್ದೇಶಗಳಿಗೆ ಬಿಟ್ಟುಕೊಡುವುದಿಲ್ಲ ಅಂತಿದ್ದಾರೆ ಜ್ಯೊತಿಪುರದ ಕಲ್ಲುಕುಟುಕರು. Byte:- ಜಯಮ್ಮ, ಜ್ಯೋತಿಪುರ ವಾಸಿ.. Byte:- ಸುಬ್ರಹ್ಮಣಿ, ಜ್ಯೋತಿಪುರ ವಾಸಿ.

LEAVE A REPLY

Please enter your comment!
Please enter your name here