ವಿದ್ಯುತ್ ಇಲಾಖೆ ಖಾಸಗೀಕರಣಕ್ಕೆ ವಿರೋಧ

0
14

ಮಂಡ್ಯ/ಮಳವಳ್ಳಿ:ಕೇಂದ್ರ ಸರ್ಕಾರ. ವಿದ್ಯುತ್ ಇಲಾಖೆ ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ಚೆಸ್ಕಾಂ ಪ್ರಾಥಮಿಕ ಸಮಿತಿ ವತಿಯಿಂದ ಮಳವಳ್ಳಿ ಪಟ್ಟಣದ ಚೆಸ್ಕಾಂ ಕಚೇರಿ ಮುಂದೆ ಕಪ್ಪು ಪಟ್ಟಿ ಧರಸಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರಸರ್ಕಾರ ವಿದ್ಯುತ್ ಇಲಾಖೆ ಖಾಸಗೀಕರಣ ಮಾಡಲು ಹೊರಡಿದ್ದು, ಬೇಡ ಬೇಡ ಖಾಸಗೀ ಕರಣ ಬೇಡಎಂಬ ಘೋಷಣೆಕೂಗಿದರು.ಇನ್ನೂ ಚೆಸ್ಕಾಂ ಇಲಾಖೆ ಬೆರಳಚ್ಚುಗಾರ ಬಸವಶೆಟ್ಟಿ ಮಾತನಾಡಿ,ರಾಜ್ಯ ಕಮಿಟಿ ಆದೇಶ ದಂತೆ ಇಂದು ನೌಕರರು ವಿದ್ಯುತ್ ಕಾಯ್ದೆ ತಿದ್ದುಪಡಿ ಮಾಡುವುದನ್ನು ವಿರೋದಿಸಿ ಒಂದು ದಿನ ಸಾಂಕೇತಿಕ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು. ಪ್ರತಿಭಟನೆಯಲ್ಲಿ ಎಇ ಮೋಹನ್ ರಾಜ್, ನಾಗೇಂದ್ರ ಬಸವಶೆಟ್ಟರು ಸೇರಿದಂತೆ ಚೆಸ್ಕಾಂ ಇಲಾಖೆ ಸಿಬ್ಬಂದಿಗಳು ಇದ್ದರು ವರದಿ : ಎ.ಎನ್ ಲೋಕೇಶ್

LEAVE A REPLY

Please enter your comment!
Please enter your name here