ಬೀದಿಗೆ ಬಿದ್ರಾ ನೂರಾರು ಜನ ಗಾರ್ಮೆಂಟ್ಸ್ ನೌಕರರು..!?

0
17

ಬೆಂಗಳೂರು/ಕೆಆರ್ .ಪುರ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗಿಲ್ಲ ಎಂದು ನೆಪ ಹೇಳಿ ಕಾರ್ಮಿಕರನ್ನು ವಜಾ ಗೊಳಿಸಿದ ಕಂಪನಿಗೆ ನೂರಾರು ಗಾರ್ಮೆಂಟ್ಸ್ ನೌಕರರು ಮುತ್ತಿಗೆ ಹಾಕಿ‌  ಪ್ರತಿಭಟನೆ ನಡೆಸಿದರು. ಭಟ್ಟರಹಳ್ಳಿ ಸಮೀಪದ ಅರವಿಂದ್ ಗಾರ್ಮೆಂಟ್ಸ್ ಸಂಸ್ಥೆ ಕೊರೊನಾ ನೆಪವೊಡ್ಡಿ ಬಲವಂತವಾಗಿ ರಾಜೀನಾಮೆ ಪಡೆದು ಕೆಲಸದಿಂದ ತೆಗೆದು‌ ಹಾಕುತ್ತಿರುವ ಕಂಪನಿ ಅಡಳಿತ ಮಂಡಳಿ ಕ್ರಮ ಖಂಡಿಸಿ ನೂರಾರು ಮಹಿಳಾ ನೌಕರರು ಕಂಪನಿ ಮುಂದೆ ಪ್ರತಿಭಟನೆ ನಡೆಸಿ ಏಕಾಏಕಿ ಕೆಲಸದಿಂದ ತೆಗೆದು ಬೀದಿಗೆ ತಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಟ್ಟರಹಳ್ಳಿಯ ಅರವಿಂದ ಗಾರ್ಮೆಂಟ್ಸ್ ಪ್ಯಾಕ್ಟರಿಯಲ್ಲಿ 750ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಲಾಕ್ ಡೌನ್ ಸಮಯದಲ್ಲಿ ಕೆಲಸ ಬಂದಿಲ್ಲ  ಹಾಗೂ ಪ್ಯಾಕ್ಟರಿ ನಷ್ಟದಿಂದ ಮುಚ್ಚುತ್ತೇವೆ ಎಂದು ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಂದ ಬರುವ ನೌಕರರು 350ಕ್ಕೂ‌ ಕಾರ್ಮಿಕರಿಗೆ ಸಂಬಳವೂ ನೀಡದೆ ಬಲವಂತವಾಗಿ ರಾಜೀನಾಮೆ ಬರೆಸಿಕೊಂಡು ಮನೆಗೆ ಕಳಿಸುತ್ತಿದ್ದಾರೆ ಎಂದು ಕನ್ನಡ ರಣಧೀರ ಪಡೆ ರಾಜ್ಯ ಉಪಾಧ್ಯಕ್ಷ ಆನಂದಗೌಡ ಆರೋಪಿಸಿದರು. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಇರಲು ಸೂಚಿಸಿದ್ದರು. ಕೆಲಸಕ್ಕೆ ಯಾವುದೇ ಬರಲು ವ್ಯವಸ್ಥೆ ಮಾಡಲಿಲ್ಲ, ಹೀಗಾಗಿ ಕೆಲಸ ಬರಲು ಸಾಧ್ಯವಾಗಿಲ್ಲ,‌ ಎರಡು ತಿಂಗಳಿನಿಂದ ಸಂಬಳ ನೀಡಿಲ್ಲ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಪತ್ರ ಬರೆಸಿಕೊಂಡು ಏಕಾಏಕಿ ತೆಗೆದು ಹಾಕಲಾಗಿದೆ. ಕೊರೊನಾ  ಲಾಕ್ ಡೌನ್ ನಿಂದ ಜೀವನ ನಡೆಸುವುದು ಕಷ್ಟವಾಗಿದೆ ಮಕ್ಕಳನ್ನು‌ ಸಾಕುವುದು ಹೇಗೆ ಎಂದು ಕಾರ್ಮಿಕರು ಅಳಲು ತೊಡಗಿಕೊಂಡರು. ಆಡಳಿತ ಮಂಡಳಿ ರಾಜೀನಾಮೆ ‌ಪತ್ರಕ್ಕೆ ಹೆಬ್ಬೆಟ್ಟು ಮುದ್ರೆ ಒತ್ತಿಸಿ ಕೆಲಸದಿಂದ ತೆಗೆಯುತ್ತಿದ್ದಾರೆ. ಕೇಂದ್ರ ಸರ್ಕಾರ ವೇತನ ಕಡಿತಗೊಳಿಸಬಾರದು‌ ಎಂದು ಅದೇಶಿದೆ,‌ ಅದೇಶಕ್ಕೆ ಕಿಮ್ಮತ್ತೂ ನೀಡದೆ, ಈವರೆಗೂ ಯಾವುದೇ ರೀತಿಯ ಸಂಬಳ ನೀಡದೆ ವಂಚಿಸಲಾಗಿದೆ. ಅರ್ಧ ಸಂಬಳ ಕೂಡ ನೀಡಿಲ್ಲ, ಫ್ಯಾಕ್ಟರಿ ಯಲ್ಲಿ 400ಕ್ಕೂ ಜನರು ‌ಕೆಲಸ ಮಾಡುತ್ತಿದ್ದಾರೆ. ಸ್ಥಳೀಯರನ್ನು ತೆಗೆಯದೆ ಗ್ರಾಮಾಂತರ ಬರುವವರನ್ನು ಕೆಲಸ ತೆಗೆಯುತ್ತಿರುವ ಕ್ರಮ ಸರಿಯಲ್ಲ ಯಾವುದೇ  ಕಾರಣಕ್ಕೂ ನಾವು ಕೆಲಸ ಬಿಡುವುದಿಲ್ಲ. ಜೊತೆಗೆ ಸಂಬಳವೂ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕೊರೊನಾದಿಂದಾಗಿ ಕಳೆದ ಕೆಲ ತಿಂಗಳುಗಳಿಂದ ಗಾರ್ಮೆಂಟ್ ನಲ್ಲಿ ಕೆಲಸ ಕಡಿಮೆ ಆಗಿದೆ. ಸಾಧ್ಯ ಗಾರ್ಮೆಂಟ್ ನಷ್ಟದಲ್ಲಿದೆ. ಕಂಪನಿ ಮುಚ್ಚುತ್ತವೆ ಎಂದು ಎಲ್ಲೂ ಹೇಳಿಲ್ಲ. ಕಂಪನಿ ನಷ್ಟದಲ್ಲಿರುವುದರಿಂದ ಸ್ವ ಇಚ್ಛೆಯಿಂದ ಕೆಲವರು ರಾಜಿನಾಮೆ ಕೊಡುತ್ತಿದ್ದಾರೆ ಹೊರತು ಕಂಪನಿ ರಾಜಿನಾಮೆ ಕೇಳಿಲ್ಲ. ತಯಾರಾಗುವ ವಸ್ತುಗಳಿಗೆ ಬೇಡಿಕೆ ಹೆಚ್ಚಾದ ನಂತರ ಅವರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆ. ಈ ಬಗ್ಗೆ ಅಡಳಿತ ಮಂಡಳಿಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅರವಿಂದ್ ಗಾರ್ಮೆಂಟ್ ವ್ಯವಸ್ಥಾಪಕ ನಾಗೇಶ್ ತಿಳಿಸಿದರು. ಪ್ರತಿಭಟನಾ ಸ್ಥಳಕ್ಕೆ ವೈಟ್ ಫಿಲ್ಡ್ ವಿಭಾಗದ ಎಸಿಪಿ ಮನೋಜ್ ಕುಮಾರ್, ಕೆ.ಆರ್‌.ಪುರ ಪೋಲಿಸ್ ಠಾಣೆ ವೃತ್ತ ನಿರೀಕ್ಷಕ ಅಂಬರೀಶ್ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸಿದರು.

Byte1- Narayanamma Byte2- Radha Byte3- Nagesh

LEAVE A REPLY

Please enter your comment!
Please enter your name here