ದೊಡ್ಡಬಳ್ಳಾಪುರ: ಸಾವಿರ ವರ್ಷಗಳ ಇತಿಹಾಸವಿರುವ ಪವಿತ್ರ ಸೋಮನಾಥ ಜ್ಯೋತಿರ್ಲಿಂಗವನ್ನು ನಗರದ ಸೋಮೇಶ್ವರ ದೇವಾಲಯದಲ್ಲಿ ಭಕ್ತಾದಿಗಳ ದರ್ಶನಕ್ಕೆಅವಕಾಶ ಕಲ್ಪಿಸಲಾಗಿತ್ತು.

ನೂರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಸೋಮನಾಥ ಜ್ಯೋತಿರ್ಲಿಂಗ ದರ್ಶನ ಪಡೆದು ಧನ್ಯತೆ ಮೆರೆದರು. ಕಾರ್ಯಕ್ರಮದ ಅಂಗವಾಗಿ ವಿಶೇಷ ರುದ್ರಾಭಿಷೇಕ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ದಂಪತಿಗಳು ಭಾಗವಹಿಸಿದ್ದರು. ಮೊಘಲ ರಿಂದ ಹಲ್ಲೆಗೊಳಗಾಗಿ ಛಿದ್ರವಾಗಿದ್ದ ಸೋಮನಾಥ ಜ್ಯೋತಿರ್ಲಿಂಗವು ಸೀತಾ ರಾಮ ಶಾಸ್ತ್ರೀ ಯವರ ಮುಖೇನಾ 2025 ರಲ್ಲಿ ಮರಳಿ ಆರ್ಟ್ ಆಫ್ ಲಿವಿಂಗ್ನ ರವಿ ಶಂಕರ್ ಗುರೂಜಿ ಕೈ ಸೇರಿದ್ದು , ದೇಶದಾದ್ಯಂತ ಜನರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕೆಂಬ ಗುರೂಜಿಯವರ ಮಹತ್ಸಂಕಲ್ಪದಿಂದ 1000 ವರ್ಷಗಳ ಪುರಾತನ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ದರ್ಶನವನ್ನು ದೊಡ್ಡಬಳ್ಳಾಪುರ ಜನತೆಗೆ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ನ ಸ್ವಯಂ ಸೇವಕ ಸುನಿಲ್ ವೆಂಕಟೇಶ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು, ಪುಷ್ಪಾಂಡಜ ಆಶ್ರಮದ ಶ್ರೀ ದಿವ್ಯಜ್ಞಾನಾನಂದ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್ ನ ಶ್ರೀ ದಿವ್ಯ ಪಾದ ಸ್ವಾಮೀಜಿ ಹಿರಿಯ ಶಿಕ್ಷಕ ವೆಂಕಟ ಸ್ವಾಮಿ, ಸುನಿಲ್, ಸ್ವಯಂ ಸೇವಕರಾದ ಮಂಜುನಾಥ್ ನಾಗ್, ಲೋಕೇಶ್, ಶ್ರೀಧರ್, ಕಾರ್ತಿಕ್, ಮಂಜಣ್ಣ, ಸುರೇಶ್, ಶಿಲ್ಪಾ. ಸಂದೀಪ್ ಮೊದಲಾದವರು ಹಾಜರಿದ್ದರು.







