ಮನೆಜಿಲ್ಲೆ ಸುದ್ದಿಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿಸಭೆ

ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿಸಭೆ

ದೊಡ್ಡಬಳ್ಳಾಪುರ: ಇದೇ ತಿಂಗಳು 28 ರಂದು ಮುಸ್ಲಿಂ ಭಾಂದವರು ಆಚರಿಸಲಿರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಂತಿಸಭೆಯನ್ನು ಕರೆಯಾಲಾಗಿತ್ತು.

ಸಭೆಯನ್ನು ಕುರಿತು ಮಾತನಾಡಿದ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಸಮಾಜದಲ್ಲಿ ಗಣ್ಯರನ್ನಾಗಿಸಿ, ಬಾಳ್ಯದ ಬೆಳವಣಿಗೆ ಜೀವನದ ರಹದಾರಿ ಯಾಗಿದ್ದು,ಉತ್ತಮ ಸಮಾಜ ನಿರ್ಮಾಣಕ್ಕೆ ಮುಖ್ಯವಾಗಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನದ ಅವಶ್ಯಕತೆ ಇದ್ದು. ಅದು ವಿದ್ಯಾಭ್ಯಾಸದ ಮೂಲಕವೇ ಲಭ್ಯ ಎಂದರು.

ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ, ವಿಜೃಂಭಣೆಯಿಂದ ಮಾಡಿಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಯುವಕರಿಗೆ ಜಾಗೃತಿ ಮೂಡಿಸಿ ಸಂಭ್ರಮದ ಹೆಸರಲ್ಲಿ ಯುವಕರು ದುಶ್ಚಟಗಳಿಂದ ದೂರವಿರಿಸುವಂತೆ ವಿಶೇಷವಾಗಿ ಬೈಕ್ ವೀಲಿಂಗ್ ಮುಂತಾದ ದುಸ್ಸಾಹಸಗಳಿಂದ ದೂರವಿರಿಸಿ ಎಂದರು. ಹಬ್ಬದ ದಿನ ವನ್ನು ಸೂತಕದ ದಿನಮಾಡಲು ಅವಕಾಶ ಕೊಡಬೇಡಿ. ಪ್ರಾಣ ಯಾರದಾದರೂ ಪ್ರಾಣವೇ ಹಿಂದು,ಮುಸ್ಲಿಮ್ ಎಂದು ಭೇದಭಾವ ಇರುವುದಿಲ್ಲ.

ಶಾಂತಿ,ಸಹಬಾಳ್ವೆಯಿಂದ ಸಮಾಜದಲ್ಲಿ ತಮ್ಮ, ತಮ್ಮ ಧರ್ಮಾಚರಣೆ ಮಾಡುವುದು ಒಳಿತು. ಪೊಲೀಸರೊಂದಿಗೆ ಭಾಂದವ್ಯ ಬೆಳೆಸಿ ಆಗಿಂದಾಗ್ಗೆ ನಿಮ್ಮೆದುರು ನಡೆಯುವ, ನಡೆಯ ಬಹುದಾದ ಅಹಿತಕರ ಘಟನೆಗಳ ಬಗ್ಗೆ ಮಾಹಿತಿ ನೀಡಿದಲ್ಲಿ ನಿಮ್ಮ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಸ್ನೇಹಪೂರಕ ಬರವಸೆ ನೀಡಿದರು.

ಸಭೆಯಲ್ಲಿ ಅಮ್ಜದ್ ಪಾಷಾ(ಅಮ್ಮು) ಯಾಕೂಬ್ ಬೇಗ್,ಅಬ್ದುಲ್ ವಹಿದ್, ರಿಯಾಜ್, ಇನಾಯತ್ ಖಾನ್ ಮುಂತಾದವರು ಮತ್ತು ಪೊಲೀಸ್ ಸಿಬ್ಬಂದಿ ಹಾಜರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -

Most Popular

Recent Comments