ಮನೆಜಿಲ್ಲೆ ಸುದ್ದಿದೊಡ್ಡಬಳ್ಳಾಪುರದಲ್ಲಿ ರಾಯಲ್‌ ಓಕ್‌ ಫರ್ನಿಚರ್ ನೂತನ ಮಳಿಗೆ

ದೊಡ್ಡಬಳ್ಳಾಪುರದಲ್ಲಿ ರಾಯಲ್‌ ಓಕ್‌ ಫರ್ನಿಚರ್ ನೂತನ ಮಳಿಗೆ

ದೊಡ್ಡಬಳ್ಳಾಪುರ, 29 ಮಾರ್ಚ್ 2026: ಭಾರತದ ಅಗ್ರ ಪೀಠೋಪಕರಣ ಬ್ರ್ಯಾಂಡ್ ಆಗಿರುವ ರಾಯಲ್‌ ಓಕ್‌ ಫರ್ನಿಚರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನೂತನ ಮಳಿಗೆಗೆ ಚಾಲನೆ ನೀಡಿದೆ. ರಾಯಲ್‌ ಓಕ್‌ ಇನ್‌ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ವಿಜಯ್ ಸುಬ್ರಮಣಿಯಂ, ವ್ಯವಸ್ಥಾಪಕ ನಿರ್ದೇಶಕ ಮಥನ್ ಸುಬ್ರಮಣಿಯಂ ಮತ್ತು ಫ್ರಾಂಚೈಸಿ ಪಾಲುದಾರ ಶ್ರೀ ದೀಪಕ್ ಶಿವಕುಮಾರ್ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ನೂತನ ಮಳಿಗೆಗೆ ಚಾಲನೆ ನೀಡಲಾಯಿತು.12000 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಮಳಿಗೆಯು ಸ್ಥಳೀಯ ಗ್ರಾಹಕರಿಗೆ ವಾಸದ ಕೋಣೆಗಳು, ಮಲಗುವ ಕೋಣೆಗಳಿಂದ ಹಿಡಿದು ಗೃಹಾಲಂಕಾರಕ್ಕೆ ಅಗತ್ಯವಾದ ಅಂತಾರಾಷ್ಟ್ರೀಯ ಗುಣಮಟ್ಟದ ವ್ಯಾಪಕ ಶ್ರೇಣಿಯ ಪೀಠೋಪಕರಣಗಳನ್ನು ಕೈಗೆಟಕುವ ಬೆಲೆಯಲ್ಲಿ ಒದಗಿಸಲಿದೆ.“ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪುವ ಸಂಸ್ಥೆಯ ಧ್ಯೇಯದ ಪ್ರತೀಕವಾಗಿ ಈ ಮಳಿಗೆ ಸಿದ್ಧಗೊಂಡಿದೆ. ಈ ಮೂಲಕ ಕರ್ನಾಟಕದಲ್ಲಿ ನಮ್ಮ ರೀಟೇಲ್‌ ಅಸ್ತಿತ್ವವನ್ನು ಇನ್ನಷ್ಟು ಬಲವರ್ಧನೆಗೊಳಿಸಿದ್ದೇವೆ. ಈ ಹೆಜ್ಜೆ ಸ್ಥಳೀಯ ಗ್ರಾಹಕರಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಪೀಠೋಪಕರಣಗಳನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸುವ ಜತೆಗೆ, ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ನೀಡಲಿದೆ” ಎಂದು ವಿಜಯ್ ಸುಬ್ರಮಣಿಯಂ ಹೇಳಿದರು.

ಮಳಿಗೆ ವಿಳಾಸ: ಎಸ್‌ಎಲ್‌ವಿ ಕಾಂಪ್ಲೆಕ್ಸ್, ಕೊಡಿಗೆಹಳ್ಳಿ ಪಂಚಾಯತ್, ಆರ್‌ಎಂಸಿ ಮಾರುಕಟ್ಟೆ ಹತ್ತಿರ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. ದೂರವಾಣಿ: 76250 34585

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -

Most Popular

Recent Comments