ಬೆಂ.ಗ್ರಾ.ಜಿಲ್ಲೆ: ಅಬಕಾರಿ ಇಲಾಖಾ ವತಿಯಿಂದ ವಿವಿಧ 47 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 111.355 ಕೆ.ಜಿ ಗಾಂಜಾವನ್ನು ಬೆಂಗಳೂರು ಗ್ರಾಮಾಂತರ ವಿಭಾಗದ ಅಬಕಾರಿ ಜಂಟಿ ಆಯುಕ್ತರ (ಜಾ&ತ) ಅಧ್ಯಕ್ಷತೆ ಯಲ್ಲಿ ಸೆಂಚುರಿ ರೀಫೈನರೀಸ್ ಪ್ರೈ.ಲಿಮಿಟೆಡ್, ಫ್ಲ್ಯಾಟ್ ನಂ.17A & B, KIADB ಇಂಡಸ್ಟ್ರಿಯಲ್ ಏರಿಯಾ, ಹೊಸಕೋಟೆ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಾಶಪಡಿಸಲಾಗಿದೆ.
ಈ ಸಂಧರ್ಭದಲ್ಲಿ ಗ್ರಾಮಾಂತರ ವಿಭಾಗದ ಅ

ಬಕಾರಿ ಜಂಟಿ ಆಯುಕ್ತರಾದ ಡಾ.ಸಿ ಎಚ್ ಬಾಲಕೃಷ್ಣ, ಗ್ರಾಮಾಂತರ ಅಬಕಾರಿ ಉಪ ಆಯುಕ್ತರಾದ ಎಂ ರವೀಂದ್ರ, ಚಿಕ್ಕಬಳ್ಳಾಪುರ ಅಬಕಾರಿ ಉಪ ಆಯುಕ್ತರಾದ ಜಿ.ಪಿ ನರೇಂದ್ರ ಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲೆ ಅಬಕಾರಿ ಉಪ ಆಯುಕ್ತ ಎಸ್ ಬಸವರಾಜ್, ತುಮಕೂರು ಜಿಲ್ಲೆ ಅಬಕಾರಿ ಉಪ ಆಯುಕ್ತರಾದ ಭರತೇಶ್ ಸೇರಿದಂತೆ ಅಬಕಾರಿ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.





